ಆನ್ಲೈನ್ ಶೂಟಿಂಗ್: ಯಶಸ್ವಿನಿಗೆ ಚಿನ್ನದ ಯಶಸ್ಸು
Team Udayavani, Jun 1, 2020, 6:16 AM IST
ಹೊಸದಲ್ಲಿ: ಈಗಾಗಲೇ ಟೋಕಿಯೊ ಒಲಿಂಪಿಕ್ ಅರ್ಹತೆ ಸಂಪಾದಿಸಿರುವ ಭಾರತದ ಪ್ರತಿಭಾನ್ವಿತ ಶೂಟರ್ ಯಶಸ್ವಿನಿ ದೇಸ್ವಾಲ್ 4ನೇ ಆನ್ಲೈನ್ ಇಂಟರ್ನ್ಯಾಶನಲ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕಕ್ಕೆ ಗುರಿ ಇರಿಸಿದ್ದಾರೆ. ಅವರು 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 243.6 ಅಂಕಗಳೊಂದಿಗೆ ಈ ಸಾಧನೆಗೈದರು.
ಇದೇ ವಿಭಾಗದ ಪುರುಷರ ಸ್ಪರ್ಧೆಯಲ್ಲಿ ಆಶಿಷ್ ದಬಾಸ್ (243.1) ದ್ವಿತೀಯ ಹಾಗೂ ಅನೀಷ್ ಭನ್ವಾಲ್ (222.3) ತೃತೀಯ ಸ್ಥಾನಿಯಾದರು.
10 ಮೀ. ಏರ್ ರೈಫಲ್
ಆಸ್ಟ್ರಿಯಾದ ಮಾರ್ಟಿನ್ ಸ್ಟ್ರೆಂಫ್ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಅವರು 253.8 ಅಂಕ ಸಂಪಾದಿಸಿ, ಹಿಂದಿನ ದಾಖಲೆಯನ್ನು ಒಂದು ಅಂಕದಿಂದ ಉತ್ತಮಪಡಿಸಿದರು. ಅರ್ಹತಾ ಸುತ್ತಿನಲ್ಲೂ ಸ್ಟ್ರೆಂಫ್ ಅವರಿಂದ ವಿಶ್ವದಾಖಲೆ ನಿರ್ಮಾಣವಾಗಿತ್ತು (633.7 ಅಂಕ).
ಭಾರತದ ರುದ್ರಾಂಕ್ ಪಾಟೀಲ್ (251.7) ಮತ್ತು ವಿಷ್ಣು ಶಿವರಾಜ್ ಪಾಂಡಿಯನ್ (226.5) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.
ಶಿಮನ್ ಶರೀಫ್ ಯೋಜನೆ
ಇದು ಭಾರತದ ಮಾಜಿ ಶೂಟರ್ ಶಿಮನ್ ಶರೀಫ್ ಅವರ ಯೋಜನೆಯಾಗಿತ್ತು. ಶನಿವಾರ ನಡೆದ ಈ ಸ್ಪರ್ಧೆಯಲ್ಲಿ 11 ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ತಮ್ಮದೇ ಮನೆಯ ಝೂಮ್ ಫ್ಲ್ಯಾಟ್ ಫಾಮ್ ಇಲೆಕ್ಟ್ರಾನಿಕ್ ಟಾರ್ಗೆಟ್ಸ್ನಲ್ಲಿ ಇವರು ಗುರಿ ಇರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ