PU 2ನೇ ಪೂರಕ ಪರೀಕ್ಷೆ: ಶೇ. 35.21 ಮಂದಿ ತೇರ್ಗಡೆ
Team Udayavani, Sep 13, 2023, 12:52 AM IST
ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿ ಗಳಿಗಾಗಿ ಮೊದಲ ಬಾರಿಗೆ ಆಯೋಜಿ ಸಿದ್ದ ಎರಡನೇ ಪೂರಕ ಪರೀಕ್ಷೆ ಯಲ್ಲಿ ಶೇ. 35.21 ಮಂದಿ ಉತ್ತೀರ್ಣ ರಾಗಿದ್ದಾರೆ. ನಗರ ಭಾಗದಲ್ಲಿ ಶೇ. 34.9 ಮತ್ತು ಗ್ರಾಮೀಣ ಭಾಗದಲ್ಲಿ ಶೇ. 36.11 ಫಲಿತಾಂಶ ದಾಖಲಾಗಿದೆ.
ಕನ್ನಡ ಮಾಧ್ಯಮದಲ್ಲಿ ಶೇ. 35.71, ಆಂಗ್ಲ ಮಾಧ್ಯಮದಲ್ಲಿ ಶೇ. 34.4 ಫಲಿತಾಂಶ ಬಂದಿದೆ. 1.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 41,961 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.