ಕಿಲೆಂಜೂರು ಗ್ರಾಮಕ್ಕೆ ಮಳೆಗಾಲದಲ್ಲಿ ನೆರೆಭೀತಿ

ನಂದಿನಿ ನದಿಗೆ ತಡೆಗೋಡೆ ನಿರ್ಮಾಣ ಅಗತ್ಯ

Team Udayavani, Aug 21, 2021, 5:50 AM IST

ಕಿಲೆಂಜೂರು ಗ್ರಾಮಕ್ಕೆ ಮಳೆಗಾಲದಲ್ಲಿ ನೆರೆಭೀತಿ

ಗ್ರಾಮೀಣ ಪ್ರದೇಶವಾದ ಕಿಲೆಂಜೂರಿನಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ. ರಸ್ತೆ, ಸೇತುವೆ ನಿರ್ಮಾಣ ಕಾರ್ಯಗಳು ಶೀಘ್ರ ಆಗಬೇಕಿವೆ. ನಂದಿನಿ ನದಿಯ ತಟದಲ್ಲಿರುವ ಈ ಗ್ರಾಮಕ್ಕೆ ನೆರೆ ಭೀತಿ ಇದೆ. ತಡೆಗೋಡೆ ನಿರ್ಮಾಣ ಅಗತ್ಯ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲು ಉದಯವಾಣಿ ಸುದಿನದ ಒಂದು ಊರು-ಹಲವು ದೂರು ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

ಕಿನ್ನಿಗೋಳಿ: ಮೂಲ್ಕಿ ತಾಲೂಕಿನ ಕಿಲೆಂಜೂರು ಗ್ರಾಮವು ಕೃಷಿ ಪ್ರಧಾನ ಪ್ರದೇಶ. ಇಲ್ಲಿ ಭತ್ತ, ಅಡಕೆ, ತೆಂಗು ಬೆಳೆಯಲಾಗುತ್ತಿದೆ. ಪ್ರದೇಶದ ಹೆಚ್ಚಿನ ಭಾಗವು ನದಿ ನಂದಿನಿ ತಟದಲ್ಲಿದ್ದು, ಮಳೆಗಾಲದಲ್ಲಿ ಇಲ್ಲಿನ ಜನರಿಗೆ ನೆರೆಯ ಭೀತಿ ಸಾಮಾನ್ಯ. ಅತ್ತೂರು ಮಹಾಗಣಪತಿ ಮಂದಿರಕ್ಕೆ ಹೋಗುವ ಕಚ್ಚಾರಸ್ತೆ ಅಭಿವೃದ್ಧಿ ಆಗಬೇಕಿದೆ. ಮಳೆಗಾಲದಲ್ಲಿ ಚಿಕ್ಕ ನೆರೆ ಬಂದರೂ ರಸ್ತೆ ಮುಳುಗಡೆಯಾಗುತ್ತದೆ.ಮಂಗಳೂರು ನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಮೂಲ್ಕಿ -ಮೂಡುಬಿದಿರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಈ ಗ್ರಾಮ ಸೇರುತ್ತದೆ.

ತಡೆಗೋಡೆ ಶಾಶ್ವತ ಪರಿಹಾರ
ಸದ್ಯ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವ್ಯಾಪ್ತಿಗೆ ಬರುವ ಕಿಲೆಂಜೂರು ಗ್ರಾಮವು ಹೆಚ್ಚಿನ ಭಾಗ ಕೃಷಿ ಭೂಮಿ ಹೊಂದಿದ್ದು, ನದಿ ತಟವಾಗಿರುವುರಿಂದ ತಗ್ಗು ಪ್ರದೇಶವಾಗಿದೆ. ಮಳೆಗಾಲದಲ್ಲಿ ಜಾಸ್ತಿ ಮಳೆ ಬಂದರೆ ಗ್ರಾಮದ ಕೆಲ ಭಾಗಗಳು ಜಲಾವೃತವಾಗುತ್ತವೆ. ಇದನ್ನು ನಿರ್ವಹಣೆ ಮಾಡಲು ತಡೆಗೋಡೆ ನಿರ್ಮಿಸಬೇಕಿದೆ. ಇಲ್ಲಿನ ಶೇ. 80 ರಷ್ಟು ಮನೆಗಳಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ.

ಇದನ್ನೂ ಓದಿ:ಸದಾಶಿವ ಆಯೋಗದ ವರದಿಯಲ್ಲಿ ಯಾವುದೇ ಸಮುದಾಯವನ್ನು ಮೀಸಲಾತಿಯಡಿ ಕೈಬಿಡುವ ಅಂಶವೇ ಇಲ್ಲ

ಇತರ ಸಮಸ್ಯೆಗಳೇನು?
– ಇಲ್ಲಿನ ಸುಮಾರು ಒಂದು ಕಿ.ಮೀ. ಉದ್ದದ ನದಿ ದಂಡೆಗೆ ನೆರೆ ಹಾವಳಿಯಿಂದ ತಪ್ಪಿಸಲು ಶಾಶ್ವತ ತಡೆಗೋಡೆ ಅಗಬೇಕಿದೆ.
– ಕಿಲೆಂಜೂರಿನಿಂದ ಸೂರಿಂಜೆ ಹೋಗುವ ರಸ್ತೆ ಅಭಿವೃದ್ಧಿ ಆಗಬೇಕಿದೆ. ಮಳೆಗಾಲದಲ್ಲಿ ನೆರೆ ಬಂದರೆ ರಸ್ತೆ ಮುಳುಗಡೆಯಾಗಿ ಸಂಚಾರ ಕಷ್ಟಸಾಧ್ಯ.
– ನಂದಿನಿ ನದಿಗೆ ಕಿಲೆಂಜೂರಿನಲ್ಲಿ ಪುಚ್ಚಾಡಿ ಕಿಂಡಿ ಅಣೆಕಟ್ಟಿಗೆ ಸೇತುವೆ ಇದ್ದು ಚಿಕ್ಕ ವಾಹನ ಮಾತ್ರ ಸಂಚರಿಸಲು ಸಾಧ್ಯ. ಆದರೇ ಇಲ್ಲಿನ ದೊಡ್ಡ ಸೇತುವೆ ಕನಸು ನನಸು. ಆಗ ಸುರತ್ಕಲ್‌ ಸಂಪರ್ಕಿಸಲು ಹತ್ತಿರದ ದಾರಿಯಾಗಬಲ್ಲದು.
– ಗ್ರಾಮದಲ್ಲಿ ಮನೆ ನಿವೇಶನ ರಹಿತರ ಜಾಗ ಗುರುತು ಮಾಡಿ ಕೊಡಬೇಕಿದೆ.
– ಗ್ರಾಮೀಣ ಪ್ರದೇಶವಾಗಿರುವುದರಿಂದ ರಸ್ತೆಗಳಿಗೆ ದಾರಿ ದೀಪದ ಇದ್ದರೂ ಹೈಮಾಸ್ಟ್‌ ದೀಪದ ವ್ಯವಸ್ಥೆ ಆಗಬೇಕಿದೆ.
– ಕಿಲೆಂಜೂರು ಪುಚ್ಚಾಡಿ, ಕರ್ನಿಕೆರೆಯ ಅಣೆಕಟ್ಟಿನ ಭಾಗದಲ್ಲಿ ನದಿಯಲ್ಲಿ ಹೂಳು ಎತ್ತದೆ ಇರುವುದರಿಂದ ಮರಳು ತುಂಬಿ ನೆರೆ ಹಾವಳಿ ಜಾಸ್ತಿಯಾಗಿದೆ.ನದಿಯಲ್ಲಿ ಹೆಚ್ಚು ಮರಳು ಹೂಳು ಇರುವುದರಿಂದ ಅಣೆಕಟ್ಟಿನಲ್ಲಿ ನೀರು ಶೇಖರಣೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ.
– ಗ್ರಾಮದಲ್ಲಿ ನಂದಿನಿ ನದಿಗೆ ಸೇರುವ ಚಿಕ್ಕ ಹಳ್ಳ ತೋಡುಗಳಿವೆ. ಅದರ ಮೋರಿಗಳು ತ್ಯಾಜ್ಯ ಹೂಳುತುಂಬಿ ನೀರು ಸರಾಗವಾಗಿ ಹರಿಯಲು ತೊಡಕಾಗಿದೆ. ಇದರಿಂದಾಗಿ ತುಂಬಿರುವ ಹೂಳು ಎತ್ತುವ ಕೆಲಸ ಆಗಬೇಕಿದೆ.
– ಶ್ಮಶಾನ ಅಭಿವೃದ್ಧಿಗೆ ಜಾಗ, ವ್ಯವಸ್ಥೆ ಆಗಬೇಕಾಗಿದೆ.
– ಕಿಲೆಂಜೂರಿನಲ್ಲಿ ಮಳೆಗಾಲದಲ್ಲಿ ನೆರೆ ಬಂದು ನದಿ ತಟದಲ್ಲಿ ಇರುವ ಸುಮಾರು 12 ಮನೆಗಳಿಗೆ ಮುಳುಗಡೆಯ ಭೀತಿ ಇದೆ. ಇವರಿಗೆ ಸೂಕ್ತ ಮನೆ ನಿವೇಶನ ಆಗಬೇಕಾಗಿದೆ. ಕಿಲೆಂಜೂರು ಪೊಯ್ಯದಗುಡ್ಡೆಗೆ ರಸ್ತೆ ನಿರ್ಮಾಣ ಅಗತ್ಯ.

– ರಘುನಾಥ ಕಾಮತ್‌ ಕೆಂಚನಕೆರೆ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.