SBI ಅಧ್ಯಕ್ಷರ ಸೇವಾವಧಿ ವಿಸ್ತರಣೆ?
Team Udayavani, Aug 22, 2023, 9:15 PM IST
ನವದೆಹಲಿ: ಎಸ್ಬಿಐನ ಹಾಲಿ ಅಧ್ಯಕ್ಷ ದಿನೇಶ್ ಖಾರಾ ಅವರ ಅಧಿಕಾರದ ಅವಧಿ 2024ರ ಆಗಸ್ಟ್ ವರೆಗೆ ವಿಸ್ತರಣೆಯಾಗುವ ಸಾಧ್ಯತೆಗಳು ಇವೆ. ಅವರು ಹೊಂದಿರುವ ಈಗಿನ ಅಧಿಕಾರದ ಅವಧಿ ಅ.31ಕ್ಕೆ ಮುಕ್ತಾಯಗೊಳ್ಳಲಿದೆ. ಬ್ಯಾಂಕ್ಗಳಿಗೆ ಮತ್ತು ಎಲ್ಐಸಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಹೊಣೆ ಹೊತ್ತಿರುವ ಫೈನಾನ್ಶಿಯಲ್ ಸರ್ವಿಸ್ ಇನ್ಸ್ಟಿಟ್ಯೂಷನ್ಸ್ ಬ್ಯೂರೋ ನಿವೃತ್ತಿ ವಯೋಮಿತಿಯನ್ನು 65ವರ್ಷಕ್ಕೆ ಪರಿಷ್ಕರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಈ ಸಂಸ್ಥೆ ನಿರ್ಣಯ ಕೈಗೊಂಡರೂ ಅಂತಿಮ ನಿರ್ಣಯ ಕೈಗೊಳ್ಳುವುದು ಕೇಂದ್ರ ಸರ್ಕಾರವೇ. ಇದುವರೆಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಇತರ ಬ್ಯಾಂಕ್ಗಳ ಅಧ್ಯಕ್ಷರಿಗೆ ಸೇವಾ ವಿಸ್ತರಣೆ ಮಾಡಿಲ್ಲ.