ಮುಂಬೈನ ಪ್ರಸಿದ್ಧ ಗಣಪತಿ ದೇಗುಲವಾಗಿರುವ ಸಿದ್ಧಿವಿನಾಯಕ ಈಗ ಲೈವ್ ನಲ್ಲೂ ಕಾಣಬಹುದು!
Team Udayavani, Aug 31, 2022, 8:00 AM IST
ಮುಂಬೈ: ಗಣೇಶ ಚತುರ್ಥಿ ಪ್ರಯುಕ್ತ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪ್ರಸಿದ್ಧ ಗಣಪತಿ ದೇಗುಲವಾಗಿರುವ ಶ್ರೀ ಸಿದ್ಧಿವಿನಾಯಕ ದೇಗುಲವು ಭಕ್ತಾದಿಗಳಿಗೆ ಹೊಸ ಸೌಲಭ್ಯವೊಂದನ್ನು ಆರಂಭಿಸಿದೆ.
ದೂರದೂರಿನಲ್ಲಿರುವ ಭಕ್ತರೂ ದೇವರ ದರ್ಶನ ಪಡೆಯಲೆಂದು ಯೂಟ್ಯೂಬ್ನಲ್ಲಿ ಮತ್ತು ದೇಗುಲದ ಆ್ಯಪ್ನಲ್ಲಿ ಲೈವ್ ಪೂಜೆ ಹಾಗೂ ಆರತಿಯನ್ನು ನಡೆಸಲಾಗುತ್ತಿದೆ.
ಬಲಗಡೆ ಸೊಂಡಿಲಿನಿಂದಾಗಿ ಪ್ರಸಿದ್ಧವಾಗಿರುವ ಈ ದೇಗುಲದಲ್ಲಿ ಒಟ್ಟು 10 ದಿನಗಳ ಕಾಲ ಗಣೇಶೋತ್ಸವ ನಡೆಯಲಿದೆ.
ಬೆಳಗ್ಗೆ 5.30ರಿಂದ ರಾತ್ರಿ 10 ಗಂಟೆಯವರೆಗೆ ಪೂಜೆಗಳು ನಡೆಯಲಿವೆ. ಈ ವಿನಾಯಕನ ದರ್ಶನ ಪಡೆಯಲಿಚ್ಛಿಸುವವರು https://www.youtube.com/watch?v=zrz2f1pzPrs&feature=emb_title ಗೆ ಭೇಟಿ ನೀಡಬಹುದು.