Kumble: ಜೀಪು ಢಿಕ್ಕಿ ಹೊಡೆದು ವಿದ್ಯಾರ್ಥಿ ಸಾವು
Team Udayavani, Nov 6, 2023, 1:32 AM IST
ಕುಂಬಳೆ: ಪೈವಳಿಕೆ ಲಾಲ್ಭಾಗ್ನಲ್ಲಿ ಜೀಪು ಢಿಕ್ಕಿ ಹೊಡೆದು ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ಪೈವಳಿಕೆ ಲಾಲ್ಭಾಗ್ನ ಇಬ್ರಾಹಿಂ ಅವರ ಪುತ್ರ, 10ನೇ ತರಗತಿ ವಿದ್ಯಾರ್ಥಿ ಇಫ್ರಾಸ್ (16) ಸಾವಿಗೀಡಾಗಿದ್ದಾರೆ.
ಇನ್ನೊಬ್ಬರೊಂದಿಗೆ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದಾಗ ಜೀಪು ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಇಫ್ರಾಸ್ ಗಂಭೀರ ಗಾಯಗೊಂಡಿದ್ದು, ತತ್ಕ್ಷಣ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.