Politics: ಬಾರಾಮತಿಯಲ್ಲಿ ಸುಪ್ರಿಯಾ ಸುಳೆ ವರ್ಸಸ್ ಅಜಿತ್ ಪವಾರ್ ಪತ್ನಿ?
Team Udayavani, Feb 17, 2024, 10:02 PM IST
ನವದೆಹಲಿ/ಮುಂಬೈ: ಎನ್ಸಿಪಿ ಸ್ಥಾಪಕ ಶರದ್ ಪವಾರ್ ಕುಟುಂಬದ ಭದ್ರಕೋಟೆ ಬಾರಾಮತಿ ಕ್ಷೇತ್ರವು ಲೋಕಸಭೆ ಚುನಾವಣೆಯಲ್ಲಿ ಬಲುದೊಡ್ಡ ಕದನಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಏಕೆಂದರೆ, ಇದೇ ಕ್ಷೇತ್ರದಿಂದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಅವರು ಶರದ್ ಪುತ್ರಿ ಸುಪ್ರಿಯಾ ಸುಳೆ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂದು ವರದಿಗಳು ಹೇಳಿವೆ. ಬಾರಾಮತಿಯಿಂದ ಸುಪ್ರಿಯಾ ವಿರುದ್ಧ ಇದೇ ಮೊದಲ ಬಾರಿಗೆ ತನ್ನ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಅಜಿತ್ ಪವಾರ್ ಶುಕ್ರವಾರವೇ ಸುಳಿವು ನೀಡಿದ್ದಾರೆ.
ಸುಪ್ರಿಯಾ 2009ರಿಂದಲೂ ಸತತ 3 ಅವಧಿಗೆ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರಿಯಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ ಎಂದಿದ್ದಾರೆ.