ಟ್ಯಾಟು ಹಾಕುವಾಗ ಇರಲಿ ನಿಮ್ಮಲ್ಲಿ ಎಚ್ಚರ!


Team Udayavani, May 28, 2020, 11:16 AM IST

ಟ್ಯಾಟು ಹಾಕುವಾಗ ಇರಲಿ ನಿಮ್ಮಲ್ಲಿ ಎಚ್ಚರ!

ಟ್ಯಾಟು ಇತ್ತೀಚಿನ ಟ್ರೆಂಡ್‌. ಈ ಹಿಂದೆ ಹಚ್ಚೆ ಹಾಕಿಕೊಳ್ಳುವ ಸಂಪ್ರದಾಯವಿತ್ತು. ಹಣೆಗೆ, ಕೈಗೆ ಹಚ್ಚೆ ಹಾಕಿಕೊಳ್ಳುತ್ತಿದ್ದರು. ಆದರೆ ಕಾಲ ಬದಲಾದಂತೆ ಟ್ಯಾಟು ಟ್ರೆಂಡ್‌ ಹುಟ್ಟಿಕೊಂಡಿದೆ. ಇದು ಹಚ್ಚೆಗಿಂತಲೂ ಹೆಚ್ಚು ಆಕರ್ಷಕವಾಗಿದ್ದು, ವಿವಿಧ ಬಣ್ಣಗಳಲ್ಲಿಯೂ ಟ್ಯಾಟು ಹಾಕಿಕೊಳ್ಳಬಹುದರಿಂದ ಇದು ಬಹಳಷ್ಟು ಜನಪ್ರಿಯವಾಗಿದೆ. ಸೆಲೆಬ್ರಿಟಿಗಳಿಂದ ಹಿಡಿದು, ಸಾಮಾನ್ಯ ಜನರವರೆಗೂ ಈ ಟ್ಯಾಟು ಇಂದು ಜನಪ್ರಿಯವಾಗಿದೆ. ತಮ್ಮ ಇಷ್ಟದ ವ್ಯಕ್ತಿಯ ಹೆಸರು ಹಾಕಿಕೊಳ್ಳುವುದು, ಚಿಹ್ನೆ, ಅಥವಾ ಕಪಲ್ಸ್‌ಗಳು ಕಪಲ್‌ ಟ್ಯಾಟೂ ಹಾಕಿಕೊಳ್ಳುವುದು ಇಂದಿನ ಟ್ರೆಂಡ್‌. ಸಾಮಾನ್ಯವಾಗಿ ಕುತ್ತಿಗೆ, ಕೈ, ಕಾಲುಗಳಿಗೆ ಇನ್ನು ಕೆಲವರು ಮೈ ಪೂರ್ತಿ ಟ್ಯಾಟೂ ಚಿತ್ತಾರವನ್ನು ಬಿಡಿಸುತ್ತಾರೆ. ಆದರೆ ನೀವು ನೆನಪಿಟ್ಟುಕೊಳ್ಳಿ. ಟ್ಯಾಟು ಉದ್ಯಮ ಇಂದು ಆಧಾಯದ ದಂಧೆಯಾಗಿದೆ. ಇಂದು ಗಲ್ಲಿ ಗಲ್ಲಿಯಲ್ಲಿ ಟ್ಯಾಟು ಹಾಕುವವರು ಸಿಗುತ್ತಾರೆ. ಕೆಲವರು ಕಡಿಮೆ ಬೆಲೆಗೆ ಟ್ಯಾಟು ಹಾಕಿಸಿಕೊಂಡರೆ ಇನ್ನು ಕೆಲವರು ಹೆಚ್ಚಿನ ಬೆಲೆ ತೆರುತ್ತಾರೆ. ಟ್ಯಾಟೂ ಹಾಕಿಸುವಾಗ ಕಡಿಮೆಯೆಂದರೂ 100ಕ್ಕಿಂತ ಹೆಚ್ಚು ಸಲ ಸೂಜಿಯಿಂದ ಚುಚ್ಚುತ್ತಾರೆ. ಇನ್ನು ದೊಡ್ಡ ಹಚ್ಚೆಯಾದರೆ 500ಕ್ಕೂ ಹೆಚ್ಚು ಸಲ ಚುಚ್ಚುತ್ತಾರೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಟ್ಯಾಟೂ ಚುಚ್ಚುವಾಗ ಸೂಜಿ ಟ್ಯಾಟೂ ಹಾಕಿಸಿಕೊಳ್ಳುವವರ ರಕ್ತದೊಂದಿಗೆ ಸಂಪರ್ಕ ಹೊಂದುತ್ತದೆ, ಇನ್ನು ಟ್ಯಾಟೂ ಹಾಕಲು ಬೇರೆ-ಬೇರೆ ಬಗೆಯ ಸೂಜಿಗಳನ್ನು ಬಳಸಲಾಗುವುದು.

ಕಡಿಮೆ ಬೆಲೆಯಲ್ಲಿ ಟ್ಯಾಟೂ ಹಾಕಿಸುತ್ತಾರೆ ಎಂದು ಬೀದಿ ಬದಿಯಲ್ಲಿ ಹಾಕಿಸಿದರೆ ಏಡ್ಸ್‌, ಹೆಪಟೈಟಿಸ್‌ ಬಿ ಮುಂತಾದ ರೋಗ ಹರಡುವ ಸಾಧ್ಯತೆ ಇದೆ. ಇದರಿಂದ ಟ್ಯಾಟೂ ಹಾಕಿಸುವವರು ಆರೋಗ್ಯದ ಕಡೆ ತುಂಬಾ ಗಮನ ಕೊಡಬೇಕು.

ಸೂರ್ಯನ ಕಿರಣಗಳಿಗೆ ಒಡ್ಡಬಾರದು: ಟ್ಯಾಟೂ ಹಾಕಿಸಿದ ಬಳಿಕ ಕೆಲ ದಿನಗಳ ಕಾಲ ಟ್ಯಾಟೂವನ್ನು ಸೂರ್ಯನ ಪ್ರಖರ ಕಿರಣಗಳಿಗೆ ಒಡ್ಡಬಾರದು. ಟ್ಯಾಟೂ ಹಾಕಿಸಿಕೊಂಡ ನಂತರ ಆ ಸ್ಥಳದಲ್ಲಿ ಕೊಂಚ ತುರಿಕೆಯುಂಟಾದರೂ ಯಾವುದೇ ಕಾರಣಕ್ಕೂ ಉಜ್ಜಕೂಡದು. ಚರ್ಮ ಸಿಪ್ಪೆ ಬಿಟ್ಟಿದೆಯೆಂದು ಅದನ್ನು ಕೈಗಳಿಂದ ಕೀಳಕೂಡದು. ಇನ್ನು ಆ ಭಾಗಕ್ಕೆ ಯಾವುದೇ ಕ್ರೀಮ್‌ ಆಗಲಿ, ಲೋಷನ್‌ ಆಗಲಿ ಹಚ್ಚಲು ಹೋಗಬೇಡಿ.

ಈಜಾಡಬೇಡಿ: ನೀವು ಈಜು ಪ್ರೇಮಿಯಾಗಿದ್ದರೆ ಟ್ಯಾಟು ಹಾಕಿಕೊಂಡ ಬಳಿಕ ನೀವು ಸಾರ್ವಜನಿಕ ಈಜುಕೊಳದಲ್ಲಿ ಈಜಾಡಲು ಹೋಗಬೇಡಿ. ಈ ನೀರಿನಲ್ಲಿ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ನೀವು ಈಜಾಡುವುದನ್ನು ನಿಲ್ಲಿಸುವುದು ಉತ್ತಮ.

1. ನೀರು ಸುರಿಯಬೇಡಿ:
ನೀವು ಟ್ಯಾಟು ಹಾಕಿದ 10 ದಿನಗಳವರೆ ಟ್ಯಾಟೂ ಮೇಲೆ ನೇರವಾಗಿ ನೀರನ್ನು ಸುರಿಯಬೇಡಿ. ತಣ್ಣೀರಿನಿಂದ ಹಗುರುವಾಗಿ ತೊಳೆದು ಮೃದುವಾದ ಟಿಶ್ಯೂ ಪೇಪರಿನಲ್ಲಿ ಸ್ವತ್ಛಗೊಳಿಸಿ ವ್ಯಾಸಲೀನ್‌ ಹಚ್ಚಿಕೊಳ್ಳಿ.

2. ಸನ್ ಸ್ಕ್ರೀನ್‌ ಲೋಷನ್‌ ಹಚ್ಚದಿರಿ
ನೀವು ಟ್ಯಾಟೂ ಹಾಕಿಕೊಂಡ ಬಳಿಕ ನೀವು ಇದರ ಮೇಲೆ ಸನ್ ಸ್ಕ್ರೀನ್‌ ಲೋಷನ್‌ ಹಚ್ಚಬೇಡಿ. ಚರ್ಮ ಗುಣವಾಗಲು ಕನಿಷ್ಠ ಎರಡರಿಂದ ಮೂರು ದಿನಗಳಾದರು ಅಗತ್ಯವಾಗಿ ಬೇಕಾಗುತ್ತದೆ.

3. ಟ್ಯಾಟೂ ಬೇಡ ಎಂದೆನಿಸಿದರೆ:
ಕೆಲವರು ಟ್ಯಾಟೂ ಹಾಕಿಕೊಳ್ಳುತ್ತಾರೆ, ದಿನಗಳೆದಂತೆ ಅದು ಬೇಡವೆನಿಸುತ್ತದೆ. ಆದರೆ ಟ್ಯಾಟೂ ಹಾಕುವ ನೋವಿಗಿಂತ ಅದನ್ನು ತೆಗಿಸುವ ನೋವೇ ಜಾಸ್ತಿ ಇರುತ್ತದೆ. ಒಂದು ವೇಳೆ ನೀವು ಟ್ಯಾಟೂವನ್ನು ಸಂಪೂರ್ಣವಾಗಿ ತೆಗೆಯಬೇಕೆಂದು ನಿರ್ಧರಿಸಿದರೆ ನೀವು ಚರ್ಮ ವೈದ್ಯರನ್ನು ಸಂಪರ್ಕಿಸಿ, ಬಳಿಕ ಚಿಕಿತ್ಸೆ ಪಡೆಯುವುದು ಉತ್ತಮ.

4. ಟ್ಯಾಟೂ ಹಾಕುವಾಗ ಗಮನಿಸಬೇಕಾದ ಅಂಶಗಳು:
ತಾತ್ಕಾಲಿಕ ಟ್ಯಾಟೂ ಹಾಕಿಸಿಕೊಳ್ಳುವುದಾದರೆ ಅಲರ್ಜಿ ಬಗ್ಗೆ ಗಮನಕೊಡಿ. ಟ್ಯಾಟೂ ಹಾಕಿಸಿದ ಬಳಿಕ ತುರಿಕೆ ಕಾಣಿಸಿಕೊಂಡರೆ ತಕ್ಷಣ ತೆಗೆಯಬಹುದಾದಂಥ ಟ್ಯಾಟೂ ಬಳಸಿ. ಶಾಶ್ವತ ಟ್ಯಾಟೂ ಅಂತಾದರೆ ಅದನ್ನು ಹಾಕಿಸಿಕೊಳ್ಳಲು ನೀವು 18 ವರ್ಷ ಮೀರಿರಬೇಕು. ತ್ವಚೆ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹವಿದ್ದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದರೆ ಹೆಪಟೈಟಿಸ್‌ ಹಾಗೂ ಟೆಟಾನಸ್‌ ಇಂಜೆಕ್ಷನ್‌ ಪಡೆದುಕೊಳ್ಳುವುದು ಉತ್ತಮ.

ಟ್ಯಾಟೂ ಹಾಕಿಸಲು ಪರಿಣಿತ ಕಲಾವಿದರ ಬಳಿ ಹೋಗಿ. ಅವರು ಈ ಸಂಬಂಧ ಪ್ರಮಾಣಪತ್ರ ಹೊಂದಿದ್ದಾರೆಯೇ ಎಂದು ಪರೀಕ್ಷಿಸಿದ ಬಳಿಕವಷ್ಟೇ ಹಾಕಿಸಿ.

– ಪೂರ್ಣಿಮಾ ಪೆರ್ಣಂಕಿಲ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.