ಹೊರಳು ಹಾದಿಯಲ್ಲಿದೆ ದೇಶದ ಆರೋಗ್ಯ ವ್ಯವಸ್ಥೆ


Team Udayavani, May 27, 2021, 6:50 AM IST

ಹೊರಳು ಹಾದಿಯಲ್ಲಿದೆ ದೇಶದ ಆರೋಗ್ಯ ವ್ಯವಸ್ಥೆ

– ಟಿ.ವಿ.ಮೋಹನ್‌ದಾಸ್‌ ಪೈ / ನಿಶಾ ಹೊಳ್ಳ
ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಬಹಳಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಪ್ರತಿಯೊಂದು ಭಾಗದಲ್ಲಿಯೂ ಕೂಡ ಸೋಂಕಿನಿಂದ ತತ್ತರಿಸಿದ ಕುಟುಂಬಗಳು, ಸಮುದಾಯ ಮತ್ತು ಸಮಾಜದ ಮೇಲೆ ಭಾರೀ ಸವಾಲು-ಸಂಕಷ್ಟಗಳನ್ನು ತಂದಿದೆ. ಸೋಂಕಿನ ಜತೆಗೆ, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿರುವುದೂ ಭೀತಿಗೆ ಕಾರಣವಾಗಿದೆ ಮತ್ತು ಮೂಲ ಸೌಕರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದರಿಂದ ಭಾರತ ತಾನು ಹೊಂದಿರುವ ಆರೋಗ್ಯ ವ್ಯವಸ್ಥೆಯನ್ನು ಮತ್ತೂಮ್ಮೆ ಪರಿಶೀಲನೆಗೆ ಒಳಪಡಿಸಿಕೊಳ್ಳುವ ಅನಿವಾರ್ಯತೆಯ ಲ್ಲಿದೆ. “ದ ಸಂಡೇ ಗಾರ್ಡಿಯನ್‌’ನಲ್ಲಿ 2020 ರ ಎ. 4ರಂದು ಪ್ರಕಟವಾಗಿದ್ದ “ಗ್ರ್ಯಾಂಡ್‌ ರಿಕನ್‌ಸ್ಟ್ರಕ್ಷನ್‌ ಬಜೆಟ್‌ ಫಾರ್‌ ಇಂಡಿಯಾ’ ಎಂಬ ಲೇಖನದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ, ಮೊದಲ ಹಂತದ ಸೋಂಕಿನ ಬಳಿಕದ ಬೆಳವಣಿಗೆ, ಬಂಡವಾಳ ಹೂಡಿಕೆಯ ಬಗ್ಗೆ ಹಲವು ಸಲಹೆಗಳನ್ನು ನೀಡಲಾಗಿತ್ತು. ಕೊರೊನಾದ ಎರಡನೇ ಅಲೆ ಯಾವ ರೀತಿ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು, ಜನರನ್ನು ಸಾಂಕ್ರಾಮಿಕ ರೋಗಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಪಾಠವನ್ನೂ ಕಲಿಸಿದೆ.

ಮೂಲ ಸೌಕರ್ಯಗಳ ಕೊರತೆ
ಕೊರೊನಾ ಸೋಂಕಿನ ಎರಡನೇ ಅಲೆಯು ದೇಶದ 138 ಕೋಟಿ ಜನರಿಗೆ ಅಗತ್ಯವಾಗಿರುವ ಆರೋಗ್ಯ ವ್ಯವಸ್ಥೆ ನೀಡಲು ಸೂಕ್ತ ಮೂಲ ಸೌಕರ್ಯ ಹೊಂದಿಲ್ಲ ಎನ್ನುವುದು ಜಾಹೀರುಗೊಳಿಸಿದೆ. ಸರಕಾರದ ವತಿಯಿಂದ ಸೂಕ್ತವಾದ ಆರೋಗ್ಯ ಕಾಪಾಡಿಕೊಳ್ಳುವ ವ್ಯವಸ್ಥೆ ಇಲ್ಲದೇ ಇರುವುದರಿಂದ ಜನರು ಖಾಸಗಿ ಆಸ್ಪತ್ರೆಗಳನ್ನೇ ಆಶ್ರಯಿಸುವಂತಾಗಿದೆ. ಅಲ್ಲಿ ಅವರು ಹೆಚ್ಚಿನ ಮೊತ್ತವನ್ನು ಚಿಕಿತ್ಸೆಗಾಗಿ ವಿನಿಯೋಗ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಮತ್ತು 2020ರಲ್ಲಿ ಸೋಂಕಿನಿಂದಾಗಿ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದರಿಂದ ಜನರ ಸಂಪಾದನೆಗೆ ಕೂಡ ತೊಂದರೆಯಾಗಿದೆ. ಹೀಗಾಗಿ, ಮತ್ತೆ ಉತ್ತಮ ಚಿಕಿತ್ಸೆ ಪಡೆಯಲು ಹೆಚ್ಚು ವೆಚ್ಚ ಮಾಡಬೇಕಾಗಿರುವುದು ಮತ್ತಷ್ಟು ಆರ್ಥಿಕ ಸಂಕಷ್ಟವನ್ನು ಜನರಿಗೆ ತಂದೊಡ್ಡಿದೆ. ಹಲವು ಸಂಶೋಧನ ವರದಿಗಳಲ್ಲಿ ಉಲ್ಲೇಖೀಸಿರುವಂತೆ ನಿರೀಕ್ಷಿಸಲಾರದ ರೀತಿಯಲ್ಲಿ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ವೆಚ್ಚ ಮಾಡಬೇಕಾದ ಸ್ಥಿತಿ ಉಂಟಾಗಿರುವುದರಿಂದ ಜನಸಂಖ್ಯೆಯ ಶೇ.40ರಷ್ಟು ಮಂದಿ ಬಡತನದ ವ್ಯವಸ್ಥೆಗೆ ಕುಸಿಯಲಿದ್ದಾರೆ. ಪ್ರಧಾನಮಂತ್ರಿಗಳ ಆಯುಷ್ಮಾನ್‌ ಭಾರತ್‌ ಆರೋಗ್ಯ ವಿಮೆ ಯೋಜನೆ ಆರೋಗ್ಯ ವೆಚ್ಚದ ಒಂದಷ್ಟು ಅಂಶವನ್ನು ಭರಿಸುವಂತೆ ಮಾಡುತ್ತಿದ್ದರೂ ಎಲ್ಲರಿಗೂ ಕೈಗೆಟಕುವಂತೆ ಆರೋಗ್ಯ ವ್ಯವಸ್ಥೆ ಕಲ್ಪಿಸುವುದಕ್ಕೆ ಇನ್ನೂ ಹಲವು ಸಮಯ ಬೇಕಾದೀತು.

ಟಿ.ವಿ.ಮೋಹನ್‌ದಾಸ್‌ ಪೈ
ಟಿ.ವಿ.ಮೋಹನ್‌ದಾಸ್‌ ಪೈ ಅವರು ಆರಿನ್‌ ಕ್ಯಾಪಿಟಲ್‌ನ ಅಧ್ಯಕ್ಷ. ಇದರ ಜತೆಗೆ 3ಒನ್‌4 ಕ್ಯಾಪಿಟಲ್‌, ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ನ ಅಧ್ಯಕ್ಷರೂ ಆಗಿದ್ದಾರೆ. ಹವೇಲ್ಸ್‌ ಇಂಡಿಯಾದ ಆಡಳಿತ ಮಂಡಳಿ ಸದಸ್ಯ, ಫಿಕ್ಕಿಯ ಕೌಶಲ್ಯ ಮತ್ತು ಉನ್ನತ ಶಿಕ್ಷಣ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ಅವರು, ಸೆಬಿಯ ಹಲವು ಸಮಿತಿಗಳ ಅಧ್ಯಕ್ಷರೂ ಆಗಿದ್ದಾರೆ. ಅಕ್ಷಯ ಪಾತ್ರ ಫೌಂಡೇಶನ್‌ ಸ್ಥಾಪಕ ಟ್ರಸ್ಟಿಯೂ ಆಗಿರುವ ಅವರು, ಇನ್ಫೋಸಿಸ್‌ನ ಮುಖ್ಯ ಹಣಕಾಸು ಅಧಿಕಾರಿಯೂ ಆಗಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ಅವರಿಗೆ “ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2004ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಬೆಂಗಳೂರು ವಿವಿಯಿಂದ ಕಾನೂನು ಪದವಿ ಮತ್ತು ಲೆಕ್ಕಪತ್ರ ಪರಿಶೋಧಕರ ಪರೀಕ್ಷೆಯಲ್ಲಿ ಅವರು ರ್‍ಯಾಂಕ್‌ ಪಡೆದಿದ್ದಾರೆ.

– ನಿಶಾ ಹೊಳ್ಳ
ಬೆಂಗಳೂರಿನಲ್ಲಿರುವ ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮಾಲೆಕ್ಯುಲರ್‌ ಪ್ಲಾಟ್‌ಫಾರ್ಮ್ನ ಟೆಕ್ನಾಲಜಿ ಫೆಲೋ ಆಗಿದ್ದಾರೆ. ಅವರು ಎಂಜಿನಿಯರ್‌, ಬರಹಗಾರ್ತಿ ಮತ್ತು ಸಂಶೋಧಕಿಯೂ ಆಗಿ ದ್ದಾರೆ. ಹೊಸ ದಿ ಲ್ಲಿಯಲ್ಲಿರುವ ಆಬ್ಸರ್ವ್‌ ರಿಸರ್ಚ್‌ ಫೌಂಡೇಷನ್‌ನ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದಾರೆ. ಬೆಂಗಳೂರಿನ ಆರ್‌.ವಿ. ಕಾಲೇಜಿನಿಂದ ಎಂಜಿನಿಯರಿಂಗ್‌ ಪದವಿ, ಅಮೆರಿಕದ ಪೆನ್ಸಿಲ್ವೇನಿ ಯಾದಲ್ಲಿರುವ ಕಾರ್ನಗಿ ಮೆಲ್ಲನ್‌ ವಿವಿಯಿಂದ ಕೆಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅರ್ಥಶಾಸ್ತ್ರ ಮತ್ತು ನೀತಿ, ಟೆಕ್ನಾಲಜಿ ಇಂಟರ್‌ಸೆಕ್ಷನ್‌ ಕ್ಷೇತ್ರಗಳಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ. “ಯುವರ್‌ ಸ್ಟೋರಿ’ ಮಾಧ್ಯಮ ಸಂಸ್ಥೆಯಲ್ಲಿ ಕನ್ಸಲ್ಟಿಂಗ್‌ ಎಡಿಟರ್‌ ಆಗಿ ದೇಶದ ಪ್ರಾಕೃತಿಕ ಸಂಪತ್ತಿನ ಬಗ್ಗೆ ಮೊದಲ ಸಮೀಕ್ಷೆ ನಡೆಸಿದ ಹೆಗ್ಗಳಿಕೆ ಅವರದ್ದು.

ದೇಶದಲ್ಲಿ ಆರೋಗ್ಯ ಮೂಲ ಸೌಕರ್ಯ ಕೊರತೆಯಲ್ಲಿ ನಾಲ್ಕು ಮುಖ್ಯ ಭಾಗಗಳಿವೆ
1. ಕೈಗೆಟಕುವ ಮತ್ತು ಪಡೆಯುವ ವ್ಯವಸ್ಥೆ
ದೇಶದ 138 ಕೋಟಿ ಮಂದಿಗೆ ಅಗತ್ಯವಾಗಿರುವ ಆಸ್ಪತ್ರೆಗಳನ್ನು ದೇಶ ಹೊಂದಿಲ್ಲ. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿನ ಕೊರತೆ ಕಾಣುತ್ತಿದೆ. ಹೌಸಿಂಗ್‌ ಡಾಟ್‌ ಕಾಮ್‌ ಇತ್ತೀಚೆಗೆ ಅಧ್ಯಯನ ನಡೆಸಿ ಪ್ರಕಟಿಸಿದ ವರದಿಯ ಪ್ರಕಾರ ದೇಶದಲ್ಲಿ ಪ್ರತಿ 1 ಸಾವಿರ ಮಂದಿಗೆ 0.5 ಮಾತ್ರ ಸರಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳನ್ನು ಸೇರಿಸಿದರೂ ಕೂಡ ಅದರ ಪ್ರಮಾಣ 0.5ರಿಂದ 1.4 ಬೆಡ್‌ಗಳ ವರೆಗೆ ಮಾತ್ರ ಹೆಚ್ಚಾಗುತ್ತದಷ್ಟೆ. ಜಗತ್ತಿನ ಅತ್ಯುತõಷ್ಟ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳು ಕೆಲವೇ ಕೆಲವು ನಗರಗಳಾಗಿರುವ ಮುಂಬೈ, ಬೆಂಗಳೂರು ಮತ್ತು ದೆಹಲಿಗೆ ಮಾತ್ರ ಸೀಮಿತವಾಗಿವೆ ಮತ್ತು ಉಳಿದ ಸ್ಥಳಗಳಲ್ಲಿ ಅಂಥ ವ್ಯವಸ್ಥೆಯ ಕೊರತೆ ಇದೆ.

2. ಆರೋಗ್ಯ ಪರಿಕರಗಳ ಕೊರತೆ
ಆರೋಗ್ಯ ಪರಿಕರಗಳಾಗಿರುವ ಆಮ್ಲಜನಕ, ಔಷಧಗಳು, ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಅಗತ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗಳಿಗೆ ಪೂರೈಕೆ ಮಾಡುವ ಬಗ್ಗೆ ಆದ್ಯತೆಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಆಮ್ಲಜನಕ ಹೆಚ್ಚಿನ ಸ್ಥಳದಲ್ಲಿ ಕೊರತೆಯಾದ ಸಂದರ್ಭದಲ್ಲಿ ಅದರ ಉತ್ಪಾದನೆ ಮಾತ್ರವಲ್ಲ ಅದರ ವಿತರಣೆ ಕೂಡ ಸವಾಲಿನಿಂದ ಕೂಡಿತ್ತು. ಅದರ ಉತ್ಪಾದನೆ ಮತ್ತು ವಿತರಣೆಯಲ್ಲಿ ಹೊಂದಿರುವ ನ್ಯೂನತೆಯನ್ನು ಭಾರತ ನಿವಾರಿಸಿಕೊಳ್ಳಬೇಕಾಗಿದೆ. ಇದರ ಜತೆಗೆ ತುರ್ತು ಅಗತ್ಯ ಬಂದಾಗ ಪೂರೈಸಲು ದಾಸ್ತಾನು ಮಾಡಿಕೊಳ್ಳಲು ಬೇಕಾಗಿರುವ ವ್ಯವಸ್ಥೆಯನ್ನೂ ಹೊಂದಬೇಕಾಗಿದೆ.

3. ಅಸಮರ್ಪಕ ಮಾನವ ಸಂಪನ್ಮೂಲ ಬಳಕೆ
ಎಪ್ಪತ್ತು ವರ್ಷಗಳಿಂದ ಈಚೆಗೆ ವೈದ್ಯಕೀಯ ಶಿಕ್ಷಣದ ಮೇಲೆ ಸರಿಯಾದ ರೀತಿಯಲ್ಲಿ ಬಂಡವಾಳ ಹೂಡಿಕೆ ಮತ್ತು ಜನರಿಗೆ ಅನುಕೂಲವಾಗುವಂಥ ನೀತಿಗಳ ಜಾರಿಗೆ ಆಸ್ಥೆ ತೋರದೇ ಇದ್ದ ಕಾರಣ ದೇಶದಲ್ಲಿ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಕ್ಷೇತ್ರದ ತಾಂತ್ರಿಕ ವ್ಯವಸ್ಥೆಯ ಪರಿಣತರು ಮತ್ತು ಅರೆ ವೈದ್ಯಕೀಯ ತಜ್ಞರ ಕೊರತೆ ಎದುರಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಪ್ರಕಾರ ವೈದ್ಯ-ರೋಗಿ, ರೋಗಿ-ನರ್ಸ್‌ ಅನುಪಾತವನ್ನು ಗಮನಿಸುವುದಾದರೆ ನಮ್ಮ ದೇಶದ ಜನಸಂಖ್ಯೆಗೆ ಅನುಗುಣವಾಗಿ 6 ಲಕ್ಷ ವೈದ್ಯರು ಮತ್ತು 20 ಲಕ್ಷ ನರ್ಸ್‌ಗಳ ಕೊರತೆ ಇದೆ.

4. ಆರೋಗ್ಯ ವ್ಯವಸ್ಥೆಗೆ ಕಡಿಮೆ ಹಣ ವಿನಿಯೋಗ
ದೇಶದ ಆರೋಗ್ಯ ವ್ಯವಸ್ಥೆಯನ್ನು ಕಟ್ಟಲು, ನಿರ್ವಹಿಸಲು ಮತ್ತು ಮೇಲ್ದರ್ಜೆಗೆ ಏರಿಸಲು ಕೋಟ್ಯಂತರ ರೂಪಾಯಿಗಳ ಅಗತ್ಯವಿದೆ. ಎಪತ್ತು ವರ್ಷಗಳ ಅವಧಿಯಲ್ಲಿ ಈ ಬಗ್ಗೆ ಆದ್ಯತೆಯನ್ನೇ ನೀಡಲಾಗಿಲ್ಲ. ಕಡಿಮೆ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಾಗಿ ಇರಿಸಿದ್ದ ಕಾರಣವೇ ಈಗ ಕೈ ಕೈ ಹಿಸುಕುವಂತಾಗಿದೆ. ಆಯುಷ್ಮಾನ್‌ ಭಾರತ ಜಾರಿಗೊಂಡ ಬಳಿಕ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆಯಾಗಿದೆ ಎಂದು ಹೇಳಬಹುದು. 1.8 ಕೋಟಿ ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಯೋಜನೆಯಿಂದ ಲಾಭ ಪಡೆದುಕೊಂಡಿದ್ದಾರೆ. ಆರೋಗ್ಯ ಕ್ಷೇತ್ರದ ಮೂಲಕ ಸೌಕರ್ಯವನ್ನು ಮೇಲ್ದರ್ಜೆಗೆ ಏರಿಸುವುದೇ ಈ ಯೋಜನೆಯ ಮೊದಲ ಆದ್ಯತೆ ಮತ್ತು ದೇಶವಾಸಿಗಳೆಲ್ಲರಿಗೂ ಅದು ಲಭ್ಯವಾಗಬೇಕು.

ಕೊರೊನಾ ಸೋಂಕು ದೇಶಕ್ಕೆ ಅಪ್ಪಳಿಸಿರುವುದರಿಂದಾಗಿ ದೇಶವಾಸಿಗಳೆಲ್ಲರಿಗೂ ಭೌತಿಕ ಮತ್ತು ಮಾನಸಿಕ ಆರೋಗ್ಯದ ಪ್ರಾಮುಖ್ಯದ ಅರಿವು ಉಂಟಾಗಿದೆ. ಪ್ರಜೆಗಳು ದೀರ್ಘಾ ವಧಿಯಿಂದ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕೆಂದು ಕಾಯುತ್ತಿದ್ದಾರೆ. ಏಕೆಂದರೆ ಅವರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಮತ್ತು ಆರೈಕೆ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ಮಧ್ಯಮ ವರ್ಗದ 30 ಕೋಟಿ ಮಂದಿ ಸಂಕಷ್ಟಮಯ ಸ್ಥಿತಿಯಲ್ಲಿ ಸೂಕ್ತ ಸಮಯದಲ್ಲಿ ವೈದ್ಯಕೀಯ ಸಹಾಯ ಸಿಗುತ್ತಿಲ್ಲ ಎಂಬ ಆತಂಕದಲ್ಲಿದ್ದಾರೆ. ವೈರಸ್‌ನ ಹಾವಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಮನಃಸ್ಥಿತಿಯಲ್ಲಿ ಎಲ್ಲರೂ ಇದ್ದಾರೆ.

ಇಂಥ ಸಂಕಷ್ಟಮಯ ಸನ್ನಿವೇಶದಲ್ಲಿ ಆಡಳಿತ ವ್ಯವಸ್ಥೆ ಮತ್ತು ಸರಕಾರ ತಮ್ಮ ರಕ್ಷಣೆಗೆ ಬಂದಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಜನರಿಗೆ ಹಲವು ರೀತಿಯಲ್ಲಿ ಪರಿಹರಿಸಲಾಗದ ರೀತಿಯ ನಷ್ಟಗಳು ಉಂಟಾಗಿವೆ. ಭಾರತೀ ಯರು ಮುಂದಿನ ದಿನಗಳಲ್ಲಿ ಇಂಥ ಸಂಕಷ್ಟಕ್ಕೆ ಸಿಲುಕದಂತೆ ಇರಲು, ಮುಂದಿನ ದಿನಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಭವಿಷ್ಯದ ಕಷ್ಟದ ದಿನಗಳ ಸವಾಲುಗಳನ್ನೂ ಎದುರಿಸುವ ರೀತಿಯಲ್ಲಿ ಒಂದು ಸಮಗ್ರ ಆರ್ಥಿಕ ಮುನ್ನೋಟ ಮತ್ತು ಹಾಲಿ ಪರಿಸ್ಥಿತಿಯನ್ನು ಸುಧಾರಿಸುವ ಅತ್ಯುತõಷ್ಟ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ಮೂರು ವರ್ಷಗಳ ಅವಧಿಯಲ್ಲಿ ಅದು ಜಾರಿಯಾಗುವಂತೆ ಅದನ್ನು ಅನುಷ್ಠಾನಗೊಳಿಸಬೇಕಾಗಿದೆ.

(ಮುಂದುವರಿಯುವುದು…)

ಟಾಪ್ ನ್ಯೂಸ್

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

1-sadasd

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

vijayen

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

11-chikkamagaluru

Chikkamagaluru: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಮೂವರು ಪಾರು !

1-wqewqwqe

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayen

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

NDA ಮೈತ್ರಿಕೂಟದ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ: ಪ್ರಹ್ಲಾದ್ ಜೋಶಿ

NDA ಮೈತ್ರಿಕೂಟದ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ: ಪ್ರಹ್ಲಾದ್ ಜೋಶಿ

Road Mishap: ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು, ಮಹಿಳೆಗೆ ಗಂಭೀರ ಗಾಯ

Road Mishap: ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು, ಮಹಿಳೆಗೆ ಗಂಭೀರ ಗಾಯ

Agricultural activity ಕೋಳಿ ಸಾಕಣೆಗೆ ತೆರಿಗೆ; ಗ್ರಾ.ಪಂ.ಗಿಲ್ಲ ಅಧಿಕಾರ: ಹೈಕೋರ್ಟ್‌

Agricultural activity ಕೋಳಿ ಸಾಕಣೆಗೆ ತೆರಿಗೆ; ಗ್ರಾ.ಪಂ.ಗಿಲ್ಲ ಅಧಿಕಾರ: ಹೈಕೋರ್ಟ್‌

Supreme Court ಆದೇಶ ಪಾಲನೆಗೆ ನಿರ್ಣಯ:ಸೆ. 26ರ ವರೆಗೆ ನೀರು ಹರಿಸಲು ಸಚಿವ ಸಂಪುಟ ನಿರ್ಧಾರ

Supreme Court ಆದೇಶ ಪಾಲನೆಗೆ ನಿರ್ಣಯ:ಸೆ. 26ರ ವರೆಗೆ ನೀರು ಹರಿಸಲು ಸಚಿವ ಸಂಪುಟ ನಿರ್ಧಾರ

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

police crime

Ganesh Festival: ಲಕ್ಕಿಡಿಪ್ ಬಹುಮಾನ ಮದ್ಯದ ಬಾಟಲ್; ಯುವಕನಿಗೆ ಪೊಲೀಸರ ಎಚ್ಚರಿಕೆ

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

1-sadasd

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.