Police: ಬಾಲಕಿ ಗರ್ಭಿಣಿ: ವೃದ್ಧನ ಸೆರೆ- ಬಾಲಕಿಯ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
Team Udayavani, Sep 17, 2023, 11:17 PM IST
ಸಕಲೇಶಪುರ: ವೃದ್ಧನೋರ್ವ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ವಿಷಯ ತಿಳಿದು ಬಾಲಕಿಯ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೀಸೆ ಮಂಜಯ್ಯ (73) ಎಂಬಾತನನ್ನು ಬಂಧಿಸಲಾಗಿದೆ. ಈತನು ಬಾಲಕಿಯನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇತ್ತೀಚೆಗೆ ಬಾಲಕಿಯ ದೇಹದಲ್ಲಿ ಉಂಟಾದ ಬದಲಾವಣೆಯನ್ನು ಗಮನಿಸಿ ಪೋಷಕರು ವೈದ್ಯರಿಂದ ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ವಿಷಯ ತಿಳಿದು ಆಘಾತಕ್ಕೊಳಗಾದ ಬಾಲಕಿಯ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು, ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏಕಾಂಗಿ ಪ್ರತಿಭಟನೆಯಿಂದ ಗುರುತಿಸಿಕೊಂಡಿದ್ದ
ತಾಲೂಕಿನಲ್ಲಿ ಏಕಾಂಗಿ ಪ್ರತಿಭಟನೆ ನಡೆಸುತ್ತ ಗುರುತಿಸಿಕೊಂಡಿದ್ದ ಆರೋಪಿ ಮೀಸೆ ಮಂಜಯ್ಯ, ಅಸಹಾಯಕ ಮಹಿಳೆಯರಿಗೆ ವಿಧವಾ ವೇತನ, ಪಿಂಚಣಿ ಮಾಡಿಸಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಎಂಬ ಆರೋಪಗಳೂ ಇವೆ.