Maruti Suzuki: ಮಾರುತಿ ಸುಜುಕಿ ಕಾರುಗಳ ಬೆಲೆ ಶೇ.0.45ರಷ್ಟು ಏರಿಕೆ
Team Udayavani, Jan 16, 2024, 11:02 PM IST
ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ, ತನ್ನ ಕಾರುಗಳ ಬೆಲೆಯನ್ನು ಮಂಗಳವಾರ ಶೇ.0.45ರಷ್ಟು ಏರಿಕೆ ಮಾಡಿದೆ. ತನ್ನ ಸಣ್ಣ ಕಾರುಗಳಿಗೆ ಬೇಡಿಕೆ ತಗ್ಗಿರುವ ನಡುವೆಯೇ ಕಂಪನಿ ಈ ನಿರ್ಧಾರ ತಾಳಿದೆ. ಸರಕು ವೆಚ್ಚ ಹೆಚ್ಚಳವಾಗಿರುವ ಕಾರಣ, ಜನವರಿಯಿಂದ ಕಾರುಗಳ ಬೆಲೆ ಕೊಂಚ ಏರಿಕೆಯಾಗಲಿದೆ ಎಂದು ಈ ಹಿಂದೆಯೇ ಕಂಪನಿ ತಿಳಿಸಿತ್ತು.
ಇನ್ನೊಂದೆಡೆ, 2023ರ ಡಿಸೆಂಬರ್ನಲ್ಲಿ ತನ್ನ ಸಣ್ಣ ಕಾರುಗಳಿಗೆ ಕಂಪನಿ ಶೇ.40ರಿಂದ 45ರಷ್ಟು ರಿಯಾಯಿತಿ ನೀಡಿತ್ತು. ಕಳೆದ ವರ್ಷದ ಜನವರಿಯಲ್ಲಿ ಕಂಪನಿ ತನ್ನ ಕಾರು ಗಳ ಬೆಲೆ ಯನ್ನು ಶೇ.1.1ರಷ್ಟು ಹೆಚ್ಚಳ ಮಾಡಿತ್ತು.