ಡೊನಾಲ್ಡ್‌ ಟ್ರಂಪ್‌ಗೆ ಮೂವರು ಭಾರತೀಯರ ಪ್ರಬಲ ಪ್ರತಿಸ್ಪರ್ಧೆ

Team Udayavani, Jul 31, 2023, 7:30 AM IST

trump

ವಾಷಿಂಗ್ಟನ್‌: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಡೆಮೋಕ್ರಾಟ್‌ನಿಂದ ಸ್ಪರ್ಧಿಸಲು ಹಾಲಿ ಅಧ್ಯಕ್ಷ ಜೋ ಬೈಡೆನ್‌ಗೆ, ರಿಪಬ್ಲಿಕನ್‌ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಪ್ರತಿಸ್ಪರ್ಧಿ ಎಂಬ ಮಾತು ಎಲ್ಲ ಕಡೆಯೂ ಕೇಳಿ ಬರುತ್ತಿದೆ. ಇದರ ನಡುವೆ ಟ್ರಂಪ್‌ಗೆ ತಮ್ಮದೇ ಪಕ್ಷದಿಂದ ಭಾರತೀಯ ಮೂಲದ ಮೂವರು ಪ್ರತಿಸ್ಪರ್ಧಿಗಳಾಗಿದ್ದಾರೆ. ವಿವೇಕ್‌ ರಾಮಸ್ವಾಮಿ, ನಿಕ್ಕಿ ಹ್ಯಾಲೆ, ಹರ್ಷವರ್ಧನ್‌ ಸಿಂಗ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಇದು ತೀವ್ರ ಕುತೂಹಲ ಕೆರಳಿಸಿದೆ.

ನಿಕ್ಕಿ ಹ್ಯಾಲೆ
ದಕ್ಷಿಣ ಕೊರೊಲಿನಾದ ಮಾಜಿ ಗವರ್ನರ್‌ ಆಗಿರುವ ನಿಕ್ಕಿ ಹ್ಯಾಲೆ, ಮೂಲತಃ ಭಾರತೀಯಳು. ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತವಾಧಿಯಲ್ಲಿ ವಿಶ್ವಸಂಸ್ಥೆಯ ರಾಯಭಾರಿಯಾಗಿದ್ದವರು. ಅಲ್ಲದೇ, ರಿಪಬ್ಲಿಕನ್‌ ಪಕ್ಷದಲ್ಲಿಯೂ ಉನ್ನತ ಸ್ಥಾನದಲ್ಲಿರುವ ಹಾಗೂ ಪ್ರೈಮರಿ ಹಂತದಲ್ಲಿ ಸ್ಪರ್ಧಿಸಲು ಮುಂದಾಗಿರುವ ಏಕೈಕ ಮಹಿಳೆ! ಈವರೆಗೆ ಯಾವುದೇ ಚುನಾವಣೆಯಲ್ಲಿ ಸೋಲನ್ನು ಕಂಡಿರದ ನಿಕ್ಕಿ, ಅಮೆರಿಕ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಲು ಸಜ್ಜುಗೊಂಡಿರುವ ಉತ್ಸಾಹಿ. 2020ರ ಚುನಾವಣೆಯಲ್ಲಿ ಸೋತ ಟ್ರಂಪ್‌, ಮತದಾರರು ತನ್ನನ್ನು ವಂಚಿಸಿದ್ದರಿಂದ ನನಗೆ ನಷ್ಟವಾಗಿದೆ ಎಂದು ಹೇಳಿಕೊಂಡಿದ್ದರು. ಆ ಹೇಳಿಕೆಯನ್ನು ಸ್ವತಃ ನಿಕ್ಕಿ ವಿರೋಧಿಸಿ, ಜನಪರವಾಗಿ ವಾದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಮೆರಿಕದಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ನಿಕ್ಕಿ ಬೆನ್ನಿಗಿದ್ದು, ಆಕೆಯ ಚುನಾವಣೆ ವೆಚ್ಚಕ್ಕಾಗಿ ಈಗಾಗಲೇ 6 ಸಾವಿರ ಡಾಲರ್‌ಗಳವರೆಗೆ ದೇಣಿಗೆಯನ್ನೂ ಸಂಗ್ರಹಿಸಿ ಕೊಟ್ಟು ಪ್ರೋತ್ಸಾಹಿಸುತ್ತಿವೆ.

ವಿವೇಕ್‌ ರಾಮಸ್ವಾಮಿ
ರಿಪಬ್ಲಿಕನ್‌ ಪಕ್ಷದ ವತಿಯಿಂದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮುಂದಡಿ ಇಟ್ಟಿರುವ ಮತ್ತೋರ್ವ ಭಾರತೀಯ ವಿವೇಕ್‌ ರಾಮಸ್ವಾಮಿ! ಯಶಸ್ವಿ ಟೆಕ್‌ ಉದ್ಯಮಿಯಾಗಿರುವ ವಿವೇಕ್‌, ಮೂಲತಃ ಕೇರಳದವರಾಗಿದ್ದು, ಅಮೆರಿಕ ರಿಪಬ್ಲಿಕನ್‌ ಪಕ್ಷದ ಶೇ.9ರಷ್ಟು ನಾಯಕರ ಬೆಂಬಲವನ್ನು ಹೊಂದಿದ್ದಾರೆ. 37 ವರ್ಷದ ವಿವೇಕ್‌ ಅಮೆರಿಕವನ್ನು ಚೀನಾದ ಮೇಲಿನ ಅವಲಂಬನೆಯಿಂದ ಸಂಪೂರ್ಣ ಹೊರತರುವ ಗುರಿ ಹೊಂದಿದ್ದು, ಅಮೆರಿಕದ ಬಗೆಗಿನ ಅವರ ಅಭಿಮಾನದಿಂದಲೇ ಪ್ರಜೆಗಳ ಮನಗೆದ್ದಿದ್ದಾರೆ. ಈಗಾಗಲೇ ಚುನಾವಣೆಗಾಗಿ ಪ್ರಚಾರಕ್ಕೆ ಮುಂದಾಗಿರುವ ವಿವೇಕ್‌ ಈ ಸಿದ್ಧತೆಗಳಿಗಾಗಿ ತಮ್ಮ ಸ್ವಂತ 16 ದಶಲಕ್ಷ ಡಾಲರ್‌ ಹಣವನ್ನು ವ್ಯಯಿಸಿದ್ದಾರೆ.

ಹರ್ಷವರ್ಧನ್‌
ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಹರ್ಷವರ್ಧನ್‌ ಅವರ ಪೂರ್ವಜರು ಭಾರತೀಯರು. ಬೇರು ಭಾರತದ್ದಾದರೂ ಅಮೆರಿಕನ್ನರ ಮೇಲೆ ಅತೀವ ಅಭಿಮಾನ ಹೊಂದಿರುವ ಹರ್ಷ, ದೇಶದಲ್ಲಿನ ಮೂಲ ನಾಗರಿಕರಿಗೆ ಪ್ರಾಶಸ್ತ್ಯ ನೀಡುವ ಗುರಿ ಹೊಂದಿದ್ದಾರೆ. ಅಲ್ಲದೇ, ನ್ಯೂಜೆರ್ಸಿ ರಿಪಬ್ಲಿಕನ್‌ ಸ್ಟೇಟ್‌ ಅನ್ನು ಪುನಸ್ಥಾಪಿಸಲು ಕೆಲಸ ಮಾಡಿರುವ ಹರ್ಷ ಅಮೆರಿಕ ಮೊದಲು ಎನ್ನುವ ಸಿದ್ಧಾಂತವನ್ನೇ ತಮ್ಮ ಚುನಾವಣೆ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.

ಟ್ರಂಪ್‌ ಮಾನಹಾನಿ ಅರ್ಜಿ ವಜಾ
2020 ಚುನಾವಣೆಯಲ್ಲಿ ಧೋಖಾ ನಡೆದಿದೆ ಎಂಬ ಟ್ರಂಪ್‌ ಅವರ ವಾದವೇ ದೊಡ್ಡ ಸುಳ್ಳು ಎಂದು ವರದಿ ಮಾಡಿದ್ದ ಮಾಧ್ಯಮ ಸಂಸ್ಥೆ ಸಿಎನ್‌ಎನ್‌ ವಿರುದ್ಧ ಟ್ರಂಪ್‌ 475 ದಶಲಕ್ಷ ಡಾಲರ್‌ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆದರೀಗ ಫ್ಲೋರಿಡಾ ಜಿಲ್ಲಾ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.

ಟಾಪ್ ನ್ಯೂಸ್

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.