“ಟ್ರಾಫಿಕ್‌ ವಾರ್ಡನ್‌’ ವ್ಯವಸ್ಥೆಗೆ ಶೀಘ್ರ ಹೊಸ ರೂಪ

ಬೆಂಗಳೂರು ಮಾದರಿ "ಟಿಡಬ್ಲ್ಯುಒ' ಅನುಷ್ಠಾನಕ್ಕೆ ತಯಾರಿ

Team Udayavani, Mar 16, 2022, 3:49 PM IST

“ಟ್ರಾಫಿಕ್‌ ವಾರ್ಡನ್‌’ ವ್ಯವಸ್ಥೆಗೆ ಶೀಘ್ರ ಹೊಸ ರೂಪ

ಮಹಾನಗರ : ನಗರದ “ಟ್ರಾಫಿಕ್‌ ವಾರ್ಡನ್‌’ ವ್ಯವಸ್ಥೆ ಪುನಃ ರಚನೆ ಮಾಡಲು ನಿರ್ಧ ರಿಸಲಾಗಿದ್ದು, ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ದೊರೆಯುವ ನಿರೀಕ್ಷೆಯಿದೆ.
ನಗರದಲ್ಲಿ 1995 ರಿಂದ ಟ್ರಾಫಿಕ್‌ ವಾರ್ಡನ್‌ ವ್ಯವಸ್ಥೆ ಇತ್ತು. ಆದರೆ ಕಳೆದ 5-6 ವರ್ಷಗಳಿಂದ ವಿವಿಧ ಕಾರಣಗಳಿಗೆ ಅದಕ್ಕೆ ಸರಕಾರದ ಮಾನ್ಯತೆ ದೊರೆತಿರಲಿಲ್ಲ. ಆದಾಗ್ಯೂ ಸೇವೆ ಮುಂದುವರಿದಿತ್ತು. ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಟ್ರಾಫಿಕ್‌ ವಾರ್ಡನ್‌ ವ್ಯವಸ್ಥೆ ಭಾಗಶಃ ಲಭ್ಯವಾಗುತ್ತಿದೆ.

ಏನಿದು ಟ್ರಾಫಿಕ್‌ ವಾರ್ಡನ್‌?
ಸಂಚಾರ ನಿರ್ವಹಣೆಯಲ್ಲಿ ಸ್ವಯಂಸೇವಕರಾಗಿ ತೊಡಗಿಸಿ ಕೊಂಡು ಸಾರ್ವಜನಿಕರು, ಪೊಲೀಸರಿಗೆ ನೆರವಾಗುವವರು ಟ್ರಾಫಿಕ್‌ ವಾರ್ಡನ್‌ಗಳು. ದಿನದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವ ಸಮಯ, ಸ್ಥಳಗಳಲ್ಲಿ ಇವರ ಸೇವೆ ಪಡೆದುಕೊಳ್ಳಲಾಗುತ್ತದೆ. ಮಂಗಳೂರಿನಲ್ಲಿ ಜೋಸೆಫ್ ಗೊನ್ಸಾಲ್ವಿಸ್‌ ಅವರು ಈ ವ್ಯವಸ್ಥೆ ಆರಂಭಿಸಿದ್ದರು.

ಬೆಂಗಳೂರು ಮಾದರಿ ಪುನಃ ರಚನೆ
ಬೆಂಗಳೂರಿನಲ್ಲಿ ಮಾದರಿ ಯಲ್ಲಿ ಯೇ ನಗರದಲ್ಲಿಯೂ ಟ್ರಾಫಿಕ್‌ ವಾರ್ಡನ್‌ ವ್ಯವಸ್ಥೆ ರೂಪಿ ಸುವ ಉದ್ದೇಶ ಹೊಂದಲಾಗಿದೆ. ನಗರಕ್ಕೆ ಸುಮಾರು ಸದ್ಯ ಕನಿಷ್ಠ 100 ಮಂದಿ ಟ್ರಾಫಿಕ್‌ ವಾರ್ಡನ್‌ಗಳ ಅಗತ್ಯ ಇರುವುದನ್ನು ಕಂಡುಕೊಳ್ಳಲಾಗಿದ್ದು, ವಾರ್ಡನ್‌ ಸೇವೆಗೆ ಆಹ್ವಾನ, ಆಯ್ಕೆ ಪ್ರಕ್ರಿಯೆ ಶೀಘ್ರ ನಡೆಯಲಿದೆ. ನಿವೃತ್ತ ಉಪನ್ಯಾಸಕ, ಎನ್‌ಸಿಸಿ ಹಿರಿಯ ಅಧಿಕಾರಿ ಸುರೇಶ್‌ನಾಥ್‌ ಅವರನ್ನು ಈಗಾಗಲೇ ಚೀಫ್ ಟ್ರಾಫಿಕ್‌ ವಾರ್ಡನ್‌ ಆಗಿ ಆಯ್ಕೆ ಮಾಡಲಾಗಿದೆ.

ಟ್ರಾಫಿಕ್‌ ವಾರ್ಡನ್‌ ಆರ್ಗನೈಜೇಷನ್‌
ಸರಕಾರದ ನಿಯಮದಂತೆ ಟ್ರಾಫಿಕ್‌ ವಾರ್ಡನ್‌ ಆರ್ಗನೈಜೇಶನ್‌(ಟಿಡಬ್ಲ್ಯುಒ) ಇರಬೇಕು. ಆದರೆ ಮಂಗಳೂರಿನಲ್ಲಿ ಇದುವರೆಗೆ ಟ್ರಾಫಿಕ್‌ ವಾರ್ಡನ್‌ ಸ್ಕ್ವಾ$Âಡ್‌(ಟಿಡಬ್ಲ್ಯು ಎಸ್‌) ಇತ್ತು. ಮುಂದೆ ಟಿಡಬ್ಲ್ಯುಒ ಜಾರಿಗೆ ಬರಲಿದೆ. ಎಲ್ಲ ಟ್ರಾಫಿಕ್‌ ವಾರ್ಡನ್‌ಗಳು ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್‌ ಸಮವಸ್ತ್ರ ಧರಿಸಿ ಸೇವೆ ನೀಡಲಿದ್ದಾರೆ.

ಸಂಚಾರ ವ್ಯವಸ್ಥೆ ಸುಗಮ
ನಗರದ ಟ್ರಾಫಿಕ್‌ ವಾರ್ಡನ್‌ ವ್ಯವಸ್ಥೆ ಯನ್ನು ಪುನಃ ರಚಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಿಂದ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಸುಗಮವಾಗಲಿದೆ. ಸರಕಾರದ ಎಲ್ಲ ನಿಯಮ ಗಳಂತೆಯೇ ಪುನಃ ರಚನೆಯಾಗಲಿದೆ.
– ನಟರಾಜ್‌ ಎಂ.ಎ., ಎಸಿಪಿ, ಸಂಚಾರಿ ಪೊಲೀಸ್‌ ವಿಭಾಗ, ಮಂಗಳೂರು

ಮುಂದಿನ ತಿಂಗಳು ಆರಂಭ
ಹೊಸ ಟ್ರಾಫಿಕ್‌ ವಾರ್ಡನ್‌ ವ್ಯವಸ್ಥೆಗೆ ಈಗಾಗಲೇ ನಗರ ಪೊಲೀಸರ ಅನುಮತಿ ದೊರೆತಿದ್ದು, ಸರಕಾರ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ತಿಂಗಳಲ್ಲಿ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ. ಪಾಂಡೇಶ್ವರದಲ್ಲಿರುವ ಪೊಲೀಸ್‌ ಇಲಾಖೆಯ ಒಂದು ಹಳೆಯ ಕಟ್ಟಡವಿರುವ ಜಾಗವನ್ನು ಟ್ರಾಫಿಕ್‌ ವಾರ್ಡನ್‌ ಆರ್ಗನೈಜೇಶನ್‌ನ ಕಚೇರಿಗೆ ಒದಗಿಸಿಕೊಡುವುದಾಗಿಯೂ ಇಲಾಖೆ »ರವಸೆ ನೀಡಿದೆ.
-ಎಂ.ಎಲ್‌. ಸುರೇಶನಾಥ್‌, ನಿಯೋಜಿತ ಚೀಫ್ ಟ್ರಾಫಿಕ್‌ ವಾರ್ಡನ್‌

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.