US: ಅಮೆರಿಕಕ್ಕೆ ಹಿಂದೂ ಅಧ್ಯಕ್ಷ ಇದ್ದರೆ ತಪ್ಪೇನು?-ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ
Team Udayavani, Dec 14, 2023, 8:38 PM IST
ನ್ಯೂಯಾರ್ಕ್: ಹಿಂದು ಮತ್ತು ಕ್ರಿಶ್ಚಿಯನ್ ಕೆಲವೊಂದು ವಿಚಾರಗಳಲ್ಲಿ ಸಮಾನ ಭಾವನೆಗಳನ್ನು ಹೊಂದಿವೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ. “ಸಿಎನ್ಎನ್’ ಸುದ್ದಿ ವಾಹಿನಿ ಆಯೋಜಿಸಿದ್ದ ಟೌನ್ಹಾಲ್ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು “ಹಿಂದೂ ಧರ್ಮದ ವ್ಯಕ್ತಿ ಅಮೆರಿಕದ ಅಧ್ಯಕ್ಷ ಹುದ್ದೆಗೆ ಸೂಕ್ತ ವ್ಯಕ್ತಿಯಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಕ್ಕೆ ವಿವರಣೆಯುಕ್ತ ಉತ್ತರ ನೀಡಿದ್ದಾರೆ.
ಅಮೆರಿಕದಲ್ಲಿ ಕ್ರಿಶ್ಚಿಯನ್ ಧರ್ಮದ ತತ್ವಗಳನ್ನು ಪ್ರಚಾರಗೊಳಿಸಲು ತಾವೊಬ್ಬ ಸೂಕ್ತ ವ್ಯಕ್ತಿ ಅಲ್ಲವೆಂದು ಒಪ್ಪಿಕೊಂಡ ಅವರು, “ನಾನು ಹಿಂದೂ ಧರ್ಮಕ್ಕೆ ಸೇರಿದವನು ಅಲ್ಲವೆಂದು ಸಾಬೀತು ಮಾಡಲು ಹೋಗುವುದಿಲ್ಲ. ಆದರೆ, ಎರಡೂ ಧರ್ಮಗಳು ಕೆಲವೊಂದು ಸಮಾನ ಭಾವನೆಗಳನ್ನು ಹೊಂದಿವೆ ಎಂದರು.
“ನಾನು ಹೊಂದಿರುವ ಧಾರ್ಮಿಕ ನಂಬಿಕೆಗಳ ಪ್ರಕಾರ ಇಲ್ಲಿ ಇರುವವರಿಗೆ ಎಲ್ಲ ನೈತಿಕ ಹೊಣೆಗಳಿವೆ. ಏಕೆಂದರೆ ನಮ್ಮ ದೇಹದ ಒಳಗೆ ದೇವರು ಇದ್ದಾನೆ ಎಂಬ ನಂಬಿಕೆಯನ್ನು ಹೊತ್ತವನು ನಾನು. ಅವನು ನಮ್ಮೊಳಗಿದ್ದುಕೊಂಡೇ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದಾನೆ. ಹೀಗಾಗಿ ನಾವೆಲ್ಲರೂ ಸಮಾನರು’ ಎಂದಿದ್ದಾರೆ.
ಸಾಮಾನ್ಯ ಕುಟುಂಬ ವರ್ಗದಲ್ಲಿ ಬೆಳೆದು ಬಂದ ತಮಗೆ ಮದುವೆ ಎಂಬ ವ್ಯವಸ್ಥೆ ಪವಿತ್ರದ್ದು, ಕುಟುಂಬ ವ್ಯವಸ್ಥೆ ಸಮಾಜಕ್ಕೆ ಆಧಾರ ಸ್ತಂಭ ಎಂಬ ಬೋಧನೆ ತಮಗೆ ಆಗಿದೆ ಎಂದಿದ್ದಾರೆ. ಅವರ ಉತ್ತರ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ