ನೀಟ್ ಪರೀಕ್ಷೆ: 100 ವಿದ್ಯಾರ್ಥಿನಿಯರ ಒಳಉಡುಪನ್ನೂ ತೆಗೆಸಿದರು! ಪೋಷಕರ ದೂರು
Team Udayavani, Jul 18, 2022, 7:04 PM IST
ತಿರುವನಂತಪುರಂ: ಅಖಿಲ ಭಾರತೀಯ ವೈದ್ಯಕೀಯ ಪ್ರವೇಶ ಪರೀಕ್ಷೆ(ನೀಟ್) ಭಾನುವಾರ ರಾಷ್ಟ್ರಾದ್ಯಂತ ನಡೆದಿದೆ.
ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರ ಒಳಉಡುಪನ್ನೂ ತೆಗೆಸಲಾಗಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಪರೀಕ್ಷಾ ಕೇಂದ್ರದೊಳಗೆ ಲೋಹದ ವಸ್ತು ತೆಗೆದುಕೊಂಡು ಹೋಗುವಂತಿಲ್ಲ ಎನ್ನುವ ನಿಯಮವಿದೆ. ಹಲವು ವಿದ್ಯಾರ್ಥಿನಿಯರು ತೊಟ್ಟಿದ್ದ ಬ್ರಾದಲ್ಲಿ ಅಂಡರ್ವೈರಿಂಗ್ ಇದ್ದು, ಅದು ಮೆಟಲ್ ಡಿಟೆಕ್ಟರ್ನಲ್ಲಿ ಡಿಟೆಕ್ಟ್ ಆಗಿದೆ. ಆ ಹಿನ್ನೆಲೆ ಸುಮಾರು 100 ವಿದ್ಯಾರ್ಥಿನಿಯರಿಗೆ ಬ್ರಾ ತೆಗೆದಿಟ್ಟು ಪರೀಕ್ಷೆ ಬರೆಸಲಾಗಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಕೇರಳದ ಕೊಲ್ಲಂನ ಪರೀಕ್ಷಾ ಕೇಂದ್ರವೊಂದರಲ್ಲಿ ಈ ರೀತಿ ಘಟನೆ ನಡೆದಿದ್ದು, ಈ ವಿಚಾರವಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಪರಿಶೀಲನೆ ಮಾಡುವ ಕೆಲಸವನ್ನು ಬೇರೊಂದು ಏಜೆನ್ಸಿಗೆ ವಹಿಸಲಾಗಿತ್ತು ಎಂದು ಪರೀಕ್ಷಾ ಕೇಂದ್ರ ಹೇಳಿದೆ.