Udayavni Special

ಬೇವಿನ ಮರದಲ್ಲಿ ಹಾಲಿನ ನೊರೆಯಂತೆ ನೀರು : ಕೆಜಿಎಫ್ ತಾ.ಐವಾರಹಳ್ಳಿ ಗ್ರಾಮದಲ್ಲಿ ಘಟನೆ

Team Udayavani, Jan 17, 2021, 11:15 AM IST

ಬೇವಿನ ಮರದಲ್ಲಿ ಹಾಲಿನ ನೊರೆಯಂತೆ ನೀರು : ಕೆಜಿಎಫ್ ತಾ.ಐವಾರಹಳ್ಳಿ ಗ್ರಾಮದಲ್ಲಿ ಘಟನೆ

ಬೇತಮಂಗಲ: ಬೇವಿನ ಮರದ ಕೊಂಬೆಯಲ್ಲಿ ಸತತವಾಗಿ 10 ದಿನಗಳಿಂದ ಹಾಲಿನಂತೆ ನೊರೆ ನೀರು ಸುರಿಯುತ್ತಿದ್ದು, ಇದು ದೇವರ ಮಹಿಮೆ ಹಾಗೂ ವಿಸ್ಮಯ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಕೆಜಿಎಫ್ ಕ್ಷೇತ್ರವಲ್ಲದೇ ಬಂಗಾರಪೇಟೆ, ಆಂಧ್ರದ ಶಾಂತಿಪುರಂ, ಕುಪ್ಪಂ ಸೇರಿದಂತೆ ಅನೇಕ ಭಾಗಗಳಿಂದ ಭಕ್ತರು ಭೇಟಿ ನೀಡಿ ಬೇವಿನ ಮರದಿಂದ ಹಾಲಿನ ನೊರೆಯಂತೆ ಸುರಿಯುತ್ತಿರುವ ನೀರು ವೀಕ್ಷಿಸಿ ದೇವರ ತೀರ್ಥವೆಂದು ತಲೆ ಮೇಲೆ ಚೆಲ್ಲಿಕೊಳ್ಳುತ್ತಾ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಶುಭವೋ, ಅಶುಭವೋ!: ಈ ವಿಸ್ಮಯ ಘಟನೆಯೂ ಕೆಜಿಎಫ್ ತಾಲೂಕಿನ ಕಂಗಾಂಡ್ಲಹಳ್ಳಿ ಗ್ರಾಪಂನ ಐವಾರಹಳ್ಳಿ ಗ್ರಾಮದ ರೈತ ರಮೇಶ್‌ ಅವರಿಗೆ ಸೇರಿದ ಜಮೀನಿನಲ್ಲಿ ನಡೆಯುತ್ತಿದ್ದು, ಸುಮಾರು 10 ದಿನಗಳಿಂದ ಮರದಿಂದ ನೀರು ಸುರಿಯುತ್ತಿದೆ. ಇದರಿಂದ ನಮಗೆ ಶುಭವೋ- ಅಶೋಭವೋ ಎಂಬ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಪಂಡಿತರು, ಜೋತಿಷ್ಯರ ಬಳಿ ಜಮೀನು ಮಾಲೀಕ ರಮೇಶ್‌ ಕೇಳಿದಾಗ ಇದೊಂದು ಶುಭ ಗಳಿಗೆ ಮಂಗಳವಾರ ಅಥವಾ ಬುಧವಾರದೊಳಗೆ ಇಲ್ಲಿ ಯಾವುದೋ ಶಕ್ತಿ
ದೇವತೆಯ ವಿಗ್ರಹವು ಹುಟ್ಟುತ್ತದೆ ಎಂದು ತಿಳಿಸಿರುವುದಾಗಿ ರಮೇಶ್‌ ಉದಯವಾಣಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಸಾಲ ವಾಪಸ್‌ ಕೇಳಿದ ವೃದ್ಧೆಯನ್ನೇ ಕೊಂದು ಬಾವಿಗೆ ಎಸೆದ್ರು : ಇಬ್ಬರು ಆರೋಪಿಗಳು ಸೆರೆ

ಲೈಟ್‌ ವ್ಯವಸ್ಥೆ: ಈ ವಿಸ್ಮಯ ನೋಡಲು ಜನರು ಸಾಗರೋಪದಿಯಲ್ಲಿ ಆಗಮಿಸುತ್ತಿದ್ದು, ಈ ಮರದ ಸುತ್ತಲೂ ಮರದ ತುಂಡುಗಳಿಂದ ಬೇಲಿ ನಿರ್ಮಿಸಿ ರಾತ್ರಿ ವೇಳೆಯಲ್ಲೂ ಭಕ್ತರ ಆಗಮಿಸುತ್ತಿರುವ ಹಿನ್ನೆಲೆ ವಿದ್ಯುತ್‌ ವ್ಯವಸ್ಥೆ ಮಾಡಿದ್ದಾರೆ. ಬೇವಿನ
ಮರಕ್ಕೆ ಪೂಜೆ ಸಲ್ಲಿಸಿ ಹನಿ-ಹನಿಯಾಗಿ ಬರುತ್ತಿರುವ ನೀರನ್ನು ತಲೆಯ ಮೇಲೆ ಚೆಲ್ಲಿಕೊಂಡು ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂತು.

ಸ್ಪಷ್ಟನೆ ನೀಡಲಿ: ಇಲ್ಲಿ ಪ್ರತಿನಿತ್ಯ ಸಾರ್ವಜನಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ತಕ್ಷಣ ಸಂಬಂಧಿಸಿದ ಇಲಾಖೆಯ ಮೂಲಕ ತಜ್ಞರ ಮೂಲಕ ಕುಲಂಕುಶವಾಗಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಸತ್ಯಾಂಶ ತಿಳಿಸಬೇಕಿದೆ. ಇದು ದೇವರ ಅನುಗ್ರಹದಿಂದ ವಿಸ್ಮಯ ನಡೆದಿದೆಯೋ, ಅಥವಾ ಬೇರೆ ಏನಾದರೂ ಸಾಮಾಜಿಕ ಕಾರಣವೋ ಎಂಬುದರ ಬಗ್ಗೆ ಸರ್ಕಾರವು
ಜಿಲ್ಲಾಡಳಿತ ಮೂಲಕ ಸ್ಪಷ್ಟ ಸಂದೇಶ ನೀಡಬೇಕಿದೆ.

ಟಾಪ್ ನ್ಯೂಸ್

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅಭಿಮತ

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ನರವಣೆ ಅಭಿಮತ

ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್‌ ಆರೋಪ

ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್‌ ಆರೋಪ

ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ

ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

Curent bill

80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?  

Jaggesh

ದಚ್ಚು ಮಾತಿಗೆ ಜಗ್ಗೇಶ್ ಮನಸ್ಸು ಹಗುರ…ದರ್ಶನ್ ಗೆ ಧನ್ಯವಾದ ಹೇಳಿದ ನವರಸ ನಾಯಕ

ನಾಟಕ ಪಾತ್ರಧಾರಿಯ ಮೈಮೇಲೆ ಚಾಮುಂಡಿದೇವಿಯ ಆಹ್ವಾಹನೆ? ವಿಡಿಯೋ ವೈರಲ್

ನಾಟಕ ಪಾತ್ರಧಾರಿಯ ಮೈಮೇಲೆ ಚಾಮುಂಡಿ ದೇವಿಯ ಆಹ್ವಾಹನೆ? ವಿಡಿಯೋ ವೈರಲ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕ ಪಾತ್ರಧಾರಿಯ ಮೈಮೇಲೆ ಚಾಮುಂಡಿದೇವಿಯ ಆಹ್ವಾಹನೆ? ವಿಡಿಯೋ ವೈರಲ್

ನಾಟಕ ಪಾತ್ರಧಾರಿಯ ಮೈಮೇಲೆ ಚಾಮುಂಡಿ ದೇವಿಯ ಆಹ್ವಾಹನೆ? ವಿಡಿಯೋ ವೈರಲ್

ಖಾಸಗಿ ಶಾಲೆ ಆಡಳಿತ ಮಂಡಳಿ ಬಿಕ್ಕಟ್ಟು ಇತ್ಯರ್ಥಕ್ಕೆ ಸಿದ್ದರಾಮಯ್ಯ ಆಗ್ರಹ

ಖಾಸಗಿ ಶಾಲೆ ಆಡಳಿತ ಮಂಡಳಿ ಬಿಕ್ಕಟ್ಟು ಇತ್ಯರ್ಥಕ್ಕೆ ಸಿದ್ದರಾಮಯ್ಯ ಆಗ್ರಹ

ರಾಜ್ಯದ ಅಂಗನವಾಡಿಗಳ ಸ್ಥಿತಿಗತಿ ಬಗ್ಗೆ ವರದಿ ಕೇಳಿದ ಹೈಕೋರ್ಟ್‌

ರಾಜ್ಯದ ಅಂಗನವಾಡಿಗಳ ಸ್ಥಿತಿಗತಿ ಬಗ್ಗೆ ವರದಿ ಕೇಳಿದ ಹೈಕೋರ್ಟ್‌

ಕೋವಿಡ್ ಪ್ರಕರಣ : ನಗರದ ಕಲ್ಯಾಣ ಮಂಟಪಗಳಿಗೆ ಎಂಟ್ರಿ ಕೊಟ್ಟ ಮಾರ್ಷಲ್‌ಗಳು

ಹೆಚ್ಚುತ್ತಿರುವ ಕೋವಿಡ್ ಪ್ರಕರಣ : ನಗರದ ಕಲ್ಯಾಣ ಮಂಟಪಗಳಿಗೆ ಎಂಟ್ರಿ ಕೊಟ್ಟ ಮಾರ್ಷಲ್‌ಗಳು

ಡಿಸಿಎಂ ಸವದಿ ನೇತೃತ್ವದಲ್ಲಿ ಬಸವಕಲ್ಯಾಣ ಉಪಚುನಾವಣೆಗೆ ರಣತಂತ್ರ

ಡಿಸಿಎಂ ಸವದಿ ನೇತೃತ್ವದಲ್ಲಿ ಬಸವಕಲ್ಯಾಣ ಉಪಚುನಾವಣೆಗೆ ರಣತಂತ್ರ

MUST WATCH

udayavani youtube

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

udayavani youtube

ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ

udayavani youtube

ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1

udayavani youtube

ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ ! | Udayavani

udayavani youtube

ದೇಹದ ತೂಕಕ್ಕೂ, ಮೊಣಕಾಲ ಆರೋಗ್ಯಕ್ಕೂ ಸಂಬಂಧ ಇದೆಯೇ?

ಹೊಸ ಸೇರ್ಪಡೆ

ಮೂಲ್ಕಿ ನಗರ ಪಂಚಾಯತ್‌ : 30 ಲಕ್ಷ ರೂ. ಮಿಗತೆ ಬಜೆಟ್‌

ಮೂಲ್ಕಿ ನಗರ ಪಂಚಾಯತ್‌ : 30 ಲಕ್ಷ ರೂ. ಮಿಗತೆ ಬಜೆಟ್‌

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅಭಿಮತ

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ನರವಣೆ ಅಭಿಮತ

ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್‌ ಆರೋಪ

ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್‌ ಆರೋಪ

ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ

ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.