ಗುಜರಾತ್ನಲ್ಲಿ ವಿಶ್ವದ ಮೊದಲ ಸಾಂಪ್ರದಾಯಿಕ ಔಷಧ ಶೃಂಗಸಭೆ
Team Udayavani, Jul 28, 2023, 9:51 PM IST
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್ಒ) ವತಿಯಿಂದ ಭಾರತದ ಸಹಯೋಗದಲ್ಲಿ ಮುಂದಿನ ತಿಂಗಳು ಗುಜರಾತ್ನಲ್ಲಿ ವಿಶ್ವದಲ್ಲೇ ಮೊದಲ “ಡಬ್ಲೂಎಚ್ಒ ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ’ ಆಯೋಜಿಸಲಾಗಿದೆ.
ಗುಜರಾತ್ನ ಗಾಂಧಿನಗರದಲ್ಲಿ ಆ.17 ಮತ್ತು 18ರಂದು ಈ ಶೃಂಗಸಭೆ ನಡೆಯಲಿದೆ. ಇದರಲ್ಲಿ ವಿಶ್ವದ 40ಕ್ಕೂ ಹೆಚ್ಚು ಆರೋಗ್ಯ ಸಚಿವರು ಭಾಗವಹಿಸಲಿದ್ದಾರೆ. ಆರೋಗ್ಯಕ್ಕೆ ಸಾಂಪ್ರದಾಯಿಕ ಔಷಧಗಳ ಕೊಡುಗೆಯ ಕುರಿತು ಪುರಾವೆಗಳು, ಮಾಹಿತಿ ಮತ್ತು ನಾವೀನ್ಯತೆಗಳನ್ನು ಹಂಚಿಕೊಳ್ಳಲು ಈ ಶೃಂಗಸಭೆಯು ವೇದಿಕೆಯಾಗಲಿದೆ. ಇನ್ನೊಂದೆಡೆ, ಆ.19ರಂದು ಜಿ20 ಜಂಟಿ ಹಣಕಾಸು, ಆರೋಗ್ಯ ಸಚಿವರ ಸಭೆಯನ್ನು ಆಯೋಜಿಸಲಾಗಿದೆ.