ಕೆ.ಎಲ್.ರಾಹುಲ್ ಮಹಿಳೆಯರನ್ನು ಗೌರವಿಸುತ್ತಾರೆ: ಜಿಂಟಾ
Team Udayavani, Apr 8, 2019, 6:06 AM IST
ಮೊಹಾಲಿ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಹಿಳೆಯರನ್ನು ಅಗೌರವಿಸಿದ್ದಾರೆ ಎಂಬ ಕುಖ್ಯಾತಿ ಗಳಿಸಿದ್ದ ಕೆ.ಎಲ್.ರಾಹುಲ್ ಬೆಂಬಲಕ್ಕೆ ಪಂಜಾಬ್ ಕಿಂಗ್ಸ್ ಮಾಲಕಿ ಪ್ರೀತಿ ಜಿಂಟಾ ಬಂದಿದ್ದಾರೆ.
ರಾಹುಲ್ ಮಹಿಳೆಯರನ್ನು ಬಹಳ ಗೌರವಿಸುತ್ತಾರೆ, ಅವರು ಮಹಿಳೆಯರನ್ನು ಅಗೌರವಿಸುತ್ತಾರೆ ಎಂಬ ಅಭಿಪ್ರಾಯ ಯಾಕೆ ಬಂತೋ ಗೊತ್ತಿಲ್ಲ. ನನ್ನ ಪ್ರಕಾರ ಇವೆಲ್ಲ ಪಾಠ ಕಲಿಯಲು ಒಂದು ಅವಕಾಶ ಎಂದು ಪ್ರೀತಿ ಹೇಳಿದ್ದಾರೆ.