CONNECT WITH US  
echo "sudina logo";

ಕವನಗಳು

ಎರಡು ಮನಗಳ ನಡುವೆ ಬೀದಿ, ಇದು ಕವಿತೆಯ ಹಾದಿ

ಅಪ್ಪ ಇರುತ್ತಿದ್ದ ಕೊಠಡಿಯನ್ನೊಮ್ಮೆ
ಗಮನಿಸಿದೆ
ಹೊಳೆವ ಬೆಳಕು ಕಿಟಕಿಯಿಂದ ಹರಿದು ಬರುತ್ತಿದೆ
ಎಲ್ಲದೂ ಬೆಳ್ಳಗೆ
ಹೊಳೆಯುತ್ತಿದೆ, ಹೊಸತು
ಎನ್ನುವಂತೆ.

ನಾನಲ್ಲ ಶಿಲುಬೆಗೇರಿದ ದಿವ್ಯ ಪುರುಷ,
ವಿಷ ಕುಡಿದ ಕೆಚ್ಚೆದೆಯ ಧೀರ;
ನಾನಲ್ಲ ಕರ್ಪೂರದಂತುರಿದ ಸಂತ,
ಬಿಚ್ಚುಗತ್ತಿಯ ಬಂಡುಕೋರ.

ನಾನೊಬ್ಬ ಸಾಮಾನ್ಯ ಗಣಿತಶಾಸ್ತ್ರಜ್ಞ,
ಬಾಂದಳದ...

ಮೀನ್ಮನೆಯ ಮೀನಿನ ಹಾಗೆ :
ಬದುಕು ಕಟ್ಟುತ್ತೇವೆ
ನಮಗೆ ಕಟ್ಟಿಕೊಟ್ಟ
ಚೌಕಟ್ಟಿನೊಳಗೆ,
ಬಾಯಗಲಿಸಿ ಬರುತ್ತೇವೆ
ನೀವು ಎಸೆಯುವ
ಒಂದಷ್ಟು ಹನಿ ಪ್ರೀತಿಗೆ.

ತಾನು ತುಂಬ ಸಣ್ಣವನು
ಎಂದುಕೊಂಡವನು
ಬೃಹತ್‌ ಬಂಡೆಯನು ಕೆತ್ತಿದ

ಪಾದಪದ್ಮಕೆ ನಮಿಸಿ
ಬಳ್ಳಿಯನೇರಿ.....
ಕಣ್ಣು  ತುಟಿ ಗಲ್ಲ
ಮುಂಗುರುಳ ಮುಡಿಸಿ
ಮಂದಹಾಸವ
...

ಮತ್ತೆ ಮತ್ತೆ ಹಾಕುತ್ತ ಇರು ಲಗ್ಗೆ
ಶೃಂಗದುತ್ತುಂಗಕ್ಕೆ
ನುಗ್ಗು, ದೇವೇಂದ್ರನಾಸ್ಥಾನಕ್ಕೆ
ಎಲ್ಲೆಲ್ಲಿ ಪಾದ ಎತ್ತಿಡಬೇಕು
ಅಲ್ಲೆಲ್ಲ ಹಾಕುತ್ತ ಇರು ಚಾಣದ ಟಾಕು
ಮೂಡಿಸುತ್ತಿರು...

ಮಿತಿ
ಹನಿ ಹನಿಗೂಡಿ ಹಳ್ಳವಾಗಿ
ಸರಭರ ಸಳಪಳ ಹರಿದುಹೋಗಿ
ಉಪ್ಪಿನೊಡಲಲ್ಲಿ ಕಾಣೆಯಾಗುತ್ತದೆ
ಕಡಲಾಗುವದಿಲ್ಲ

""ಅಜ್ಜೀ, ಆಕಾಶ ಅಂದ್ರೆ
ಈಥರ್‌-ಅನಿಲ ಗುತ್ಛ''

""ಇಲ್ಲ ಮಗು, ಅದು ಬೆಳಕಿನ ಹಾದಿ
ನಮ್ಮ ಬದುಕಿನ ಗಾಳಿ ನಿನ್ನ ಭವಿಷ್ಯದ ನಾಡಿ
ದೇವರುಗಳ ಬೀದಿ''

1
 ""ಆಕಾಶದಿಂದೆರಗಿತ್ತು ಮೃತ್ಯು,
ಬದಲಾದದ್ದು ಆಗಲೇ ಜಗತ್ತು''- ಎಂದೆಲ್ಲ
    ಹೊಂಚುತ್ತ ಬಂದ ಹಿರಿಯಣ್ಣ ದೊರೆ ಹೇಳು-
ಕೋಟಿ ಜನಜಂಗುಳಿಯನ್ನು ಕ್ಷಣದಲ್ಲಿ...

ಕೊಲ್ಲ ಬೇಡ ನಲ್ಲೆ  ಹೀಗೆ 
ನಗುವಿನಲ್ಲೆ ನನ್ನನು 
ದಡದ ಆಚೆ ನಿಂತುಕೊಂಡು 
ಹೊಡೆಯಬೇಡ  ಕಣ್ಣನು 

ಪ್ರೀತಿ ಈಗ ಸುಲಭವಲ್ಲ 
ನೂರು ಕಷ್ಟ ಕೋಟಲೆ 
ದೋಣಿ ಇಲ್ಲ ತೆಪ್ಪವಿಲ್ಲ...

ಪ್ರೀತಿಯಿಂದ ಆವರಿಸು ದೇವರೆ
ಪ್ರೀತಿಯಿರದ ಹಾದಿಯಲ್ಲಿ ನಡೆದರೆ-
ಮನಸು ಹೊತ್ತಿ ಉರಿದು ನರಕ ಇಲ್ಲಿಯೆ
ನಮ್ಮ ನಡೆಸು ಪ್ರೀತಿ ಹರಿಯುವಲ್ಲಿಯೆ
 
ಪ್ರೀತಿಯಿಂದ ಬಂಧನಗಳು ಅಳಿಯಲಿ...

ಬಾ ಮಗಳೇ ಬಾ
ಹೇಳುವೆನು ಇವತ್ತೂಂದು
ಹೊಸ ಬಗೆಯ ಕತೆ
ಪುಟ್ಟ ದಿಟ್ಟ ಎದೆಯೊಳಗೆ
ರಕ್ತ ಚಿಮ್ಮಿ ಹೂವಾಗಿ
ಅರಳಿಕೊಂಡ ಬಗೆ.

ಅಕೋ! ನೋಡು ಅÇÉೇ
ಪೊದೆ ಗುಲಾಬಿ ಗಿಡ...

ಅÇÉೊಂದು ಕೇರಿ
ಡೋಲು, ತಮಟೆ, ನಗಾರಿಗಳು
ಸರಹದ್ದು ಗಳ ಮೀರಿ

ಗುಡಿಸಿ ಗುಡಿಸಿ ನುಣ್ಣಗಾದ ಮನೆಯಂಗಳದಿ
ಇಹಪರದ ಇರುವಿಕೆಯಿಲ್ಲದ ಮಗುವಿನಾಟಕ್ಕೆ
ಈ ಸದ್ದು ಗಳು ದಣಿದಿವೆ.

ಹಲವು ಮಸಕು ತೆರೆಗಳನು
ಖಾಸಗಿ ಲೋಕಕೆ‌ ಹೊದಿಸಿರುವೆ
ಬೇಕಾಗಿ ಎನಲಾರೆ.
ಬೇಡವಾಗಿಯೂ ಕೂಡ 
ಹಾಗೆ ಮಾಡಬೇಕಾಗಿದೆ

ಎಲ್ಲರೂ ಕಟ್ಟುವ,
ಎಲ್ಲರಿಗೂ ಕಟ್ಟುವ,
ಎಲ್ಲೆಡೆಯೂ ಕಟ್ಟುವ 
ಕವನವ ನನಗೆ ನೀ 
ಕಟ್ಟಬೇಡ ಅಂದಳು ಹುಡುಗಿ:
ಕಟ್ಟಿ, ಕೊಟ್ಟ ಕವನವ ಮಾತಿಲ್ಲದೆ 
ಮುಡಿಗೇರಿಸಿದ ಹುಡುಗಿ...

ಕವಲೊಡೆದ ಬದುಕಿನ ಮುಸ್ಸಂಜೆ
ಮಳೆಗರೆಯುತ್ತಿದೆ ಎಲ್ಲರೆದೆಯೊಳಗೆ
ಸಮಾಧಿಗೊಂಡ ಭಾವಗಳ ಜೊತೆಗೂಡಿ
ಕಾಲದ ಒಡನಾಟಕ್ಕೆ ಅಸ್ವಸ್ಥಗೊಂಡ ಆತ್ಮಗಳು
ಎದುರುಗೊಳ್ಳಲು ಹಂಬಲಿಸುತ್ತಿವೆ
...

ನಿಮ್ಮ ಕತ್ತಲೆಯ ದಿನಗಳಲಿ
ನಾನು ದೀಪ ಹಚ್ಚುತ್ತೇನೆ
ಬೆಳಕು ಬೆಳದಿಂಗಳು ಮೂಡಿ 
ನಗುವ ನಕ್ಷತ್ರಗಳಾಗುವಿರೆ‌ಂದು

ನಿಮ್ಮನ್ನು ಮತ್ತೇ ಮತ್ತೇ
ಮಾತಿಗೆಳೆದು ಕೂರಿಸುತ್ತೇನೆ
...

ತಾನು ತುಂಬಾ ಸಣ್ಣವನು
ಎಂದುಕೊಂಡವನು
ಬೃಹತ್‌ ಗೊಮ್ಮಟನನ್ನು ಕೆತ್ತಿದ

ಪಾದಪದ್ಮಕೆ ನಮಿಸಿ
ನಾಗರಗಳ ಮಣಿಸಿ
ಬಯಕೆ ಬಳ್ಳಿಯನೇರಿ.... 
ಕಣ್ಣು  ತುಟಿ ಗಲ್ಲ
...

ಎಂದಿನಿಂದಲೂ ಚಹಾ ಸೇವಿಸುವ
ಖಯಾಲಿಯೋ, ತುಡಿತವೋ ಕಾಡಿ
ವಯಸ್ಸು ಸವೆಸಿದವಳಲ್ಲ ನಾನು.
ಜೀವಿತದ ಒಂದು ಅಚಾನಕ ತಿರುವಿನಲ್ಲಿ
ವಿಶೇಷತೆಯನೇನನೂ ಪ್ರದರ್ಶಿಸದೆ,
ನನ್ನ ಮರೆವಿನಲ್ಲಿ ಅದರ...

ನನ್ನ ಮೂಗಿನ ದೌರ್ಭಾಗ್ಯ
ಯಾವ ಪರಿಮಳವೂ ಆಗುವುದಿಲ್ಲ
ದಟ್ಟ ಸುವಾಸನೆಗೆ ಮೂಗರಳಿಸಿದೆನೋ
ರಾತ್ರಿಯೊಳಗೆ ಗಂಟಲುನೋವು, ಜ್ವರ!
ಘಮಘಮ ಮಲ್ಲಿಗೆ ಹೂ
ಅಯ್ಯೋ ತಲೆನೋವು!
ಗಂಡ...

Back to Top