CONNECT WITH US  

ಕಿಚ್ಚ ಸುದೀಪ್ ಹೊಸ ಚಿತ್ರ ರಿಲೀಸ್'ಗೆ ಮುನ್ನವೇ ದಾಖಲೆ ಬೆಲೆಗೆ ಮಾರಾಟ

ಬಹುಭಾಷಾ ತಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ2(ಟೈಟಲ್ ಫೈನಲ್ ಆಗಿಲ್ಲ) ಚಿತ್ರದ ಡಬ್ಬಿಂಗ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ.

ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಚಿತ್ರೀಕರಣವಾಗುತ್ತಿರುವ ಕಾಲಿವುಡ್ ನಿರ್ದೇಶಕ ಕೆ.ಎಸ್ ರವಿಕುಮಾರ್'ರ ಕೋಟಿಗೊಬ್ಬ2 ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್'ನ್ನು ಹೈದರಾಬಾದ್ ಮೂಲದ ಅದಿತ್ಯ ಮ್ಯೂಸಿಕ್ ಸಂಸ್ಥೆ 1.30 ಕೋಟಿ ರೂ. ದಾಖಲೆಯ ಮೊತ್ತಕ್ಕೆ ಖರೀದಿಸಿದ್ದಾರೆ.

ಸ್ಯಾಂಡಲ್ ವುಡ್ ಚಿತ್ರದ ಡಬ್ಬಿಂಗ್ ಹಕ್ಕು ಈ ಮೊತ್ತಕ್ಕೆ ಮಾರಾಟವಾಗಿರುವುದು ಇದೇ ಮೊದಲಾಗಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್'ರೊಂದಿಗೆ ಘಟಾನುಘಟಿ ನಟರುಗಳಾದ ಪ್ರಕಾಶ್ ರಾಜ್, ಮುಖೇಶ್ ತಿವಾರಿ, ರವಿಶಂಕರ್ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್'ಗೆ ಚಿರಪರಿಚಿತ ನಟರು ಚಿತ್ರದಲ್ಲಿ ಇರುವುದರಿಂದ ಹಿಂದಿಗೆ ದಾಖಲೆಯ ಮೊತ್ತಕ್ಕೆ ಚಿತ್ರ ಮಾರಾಟವಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

ಅಲ್ಲದೆ ಕಾಲಿವುಡ್'ನಲ್ಲೂ ಚಿತ್ರದ ಬಗ್ಗೆ ತೀವ್ರ ಕುತೂಹಲವಿದ್ದು ಚಿತ್ರದ ವಿತರಣೆಗೆ ಈಗಾಗಲೇ ಅನೇಕ ವಿತರಣಾ ಸಂಸ್ಥೆ ಮುಂದೆ ಬಂದಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ತಮಿಳು ನಿರ್ದೇಶಕ ರವಿ ಕುಮಾರ್  ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ತಮಿಳಿನಲ್ಲಿ 'ಮುಡಿಂಜ ಇವನೆ ಪುಡಿ'(ಸಾಧ್ಯವಾದರೆ ಇವನ ಹಿಡಿ) ಶೀರ್ಷಿಕೆ ಫೈನಲ್ ಮಾಡಿದ್ದಾರೆ.

ಈ ಬಹುಭಾಷಾ ಚಿತ್ರದಲ್ಲಿ ಇದೇ ಮೊದಲ ಬಾರಿ ಕಿಚ್ಚ ಸುದೀಪ್'ಗೆ ನಾಯಕಿಯಾಗಿ ನಿತ್ಯಮೆನನ್ ನಟಿಸಿದ್ದಾರೆ. ಬಿಡುಗಡೆ ಮುನ್ನವೇ ಸೌಂಡ್ ಮಾಡುತ್ತಿರುವ ಈ ಚಿತ್ರವನ್ನು ಹೊಸ ವರ್ಷದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿದೆ.

*ಕಪ್ಪು ಮೂಗುತ್ತಿ


Trending videos

Back to Top