ದಾದಾ ವಾಪಾಸ್ ಬಂದಾ!


Team Udayavani, Jan 11, 2017, 11:10 AM IST

Dada-Is-Back-(11).jpg

“ಇದು ಮೂರು ಟ್ರ್ಯಾಕ್‌ಗಳಲ್ಲಿ ಸಾಗುವ ಕಥೆ …’  ಹೀಗೆ ಹೇಳಿ ಒಮ್ಮೆ ಪೋಸ್ಟರ್‌ ಕಡೆ ನೋಡಿದರು ಸಂತೋಷ್‌. ಅಲ್ಲಿ “ದಾದಾ’ ಎಂದು ದಪ್ಪ ಅಕ್ಷರದಲ್ಲಿ ಬರೆದಿತ್ತು. ಸಂತೋಷ್‌ ಮಾತನಾಡುತ್ತಿದ್ದ ವಿಷಯ ಕೂಡಾ “ದಾದಾ’ ಕುರಿತಾಗಿದ್ದೇ.  “ಗೊಂಬೆಗಳ ಲವ್‌’ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಸಂತೋಷ್‌ ಆ ನಂತರ “ದಾದಾ ಇಸ್‌ ಬ್ಯಾಕ್‌’ ಎಂಬ ಸಿನಿಮಾ ಆರಂಭಿಸಿದ್ದು ನಿಮಗೆ ಗೊತ್ತೇ ಇದೆ. ಈಗ ಆ ಸಿನಿಮಾದ ಚಿತ್ರೀಕರಣ ಮುಗಿದು ಬಿಡುಗಡೆಯ ಹಂತಕ್ಕೆ ಬಂದಿದೆ. “ಗೊಂಬೆಗಳ ಲವ್‌’ ಸಿನಿಮಾಕ್ಕೆ ಸಿಕ್ಕಂತಹ ಮೆಚ್ಚುಗೆ ಈ ಸಿನಿಮಾಕ್ಕೂ ಸಿಗುತ್ತದೆಂಬ ವಿಶ್ವಾಸ ಸಂತೋಷ್‌ಗಿದೆ.

“ಗೊಂಬೆಗಳ ಲವ್‌’ ಸಿನಿಮಾ ನಂತರ ಏನು ಮಾಡಬೇಕೆಂದು ಆಲೋಚಿಸುತ್ತಿದ್ದಾಗ ತಲೆಗೆ ಬಂದ ಸಬ್ಜೆಕ್ಟ್ ಇದು. ಗ್ಯಾಂಗ್‌ಸ್ಟಾರ್‌ ಸಿನಿಮಾ ಮಾಡಿದರೆ ಹೇಗೆ ಎಂದು ಯೋಚಿಸಿ ಕತೆ ಸಿದ್ಧಪಡಿಸಿದೆ. ಕಥೆಯನ್ನು ಗೆಳೆಯ ಅಜೇಯ್‌ಗೆ ಹೇಳಿದೆ. ಕಥೆ ಕೇಳಿದ ಅಜೇಯ್‌, ಇದು ಕಡಿಮೆ ಬಜೆಟ್‌ನಲ್ಲಿ ಮಾಡುವ ಸಬ್ಜೆಕ್ಟ್ ಅಲ್ಲ, ಮಾಡಿದರೆ ಚೆನ್ನಾಗಿ ಸಿನಿಮಾ ಮಾಡಬೇಕು ಎಂದು ಹೇಳಿದರು. ಈ ಹುಡುಕಾಟದಲ್ಲಿ ನಿರ್ಮಾಪಕ ಶಂಕರ್‌ ಕೈ ಜೋಡಿಸಿದರು. ಗ್ಯಾಂಗ್‌ಸ್ಟಾರ್‌ ಸಬ್ಜೆಕ್ಟ್ ಆದರೂ ಮೂರು ಶೇಡ್‌ಗಳಲ್ಲಿ ಸಾಗುತ್ತದೆ. ಗ್ಯಾಂಗ್‌ವಾರ್‌, ಫ್ಯಾಮಿಲಿ ಹಾಗೂ ಎಮೋಶನ್‌ ಸಾಗುತ್ತದೆ.

ಕ್ಲೈಮ್ಯಾಕ್ಸ್‌ ತುಂಬಾ ಭಿನ್ನವಾಗಿದ್ದು, ಎಲ್ಲರ ಮನಗೆಲ್ಲುತ್ತದೆ ಎಂಬ ವಿಶ್ವಾಸವಿದೆ’ ಎಂದರು. ಅಂದಹಾಗೆ, ಇದು ಮಾರ್ಕೇಟ್‌ನಲ್ಲಿ ನಡೆಯುವ ಕಥೆಯಂತೆ. ಚಿತ್ರದಲ್ಲಿ ತಮಿಳು ನಟ ಪಾರ್ಥಿಬನ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ಅರುಣ್‌, ಅಜೇಯ್‌, ಶ್ರಾವ್ಯ ಇಲ್ಲಿ ನಟಿಸಿದ್ದಾರೆ. ನಾಯಕ ಅರುಣ್‌ ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಸಾಕಷ್ಟು ಶೇಡ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದು, ಅನುಭವಿ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಅವರಿಗೆ ಖುಷಿ ಕೊಟ್ಟಿದೆಯಂತೆ.

“ಚಿತ್ರದ ಕ್ಲೈಮ್ಯಾಕ್ಸ್‌ ಅದ್ಭುತವಾಗಿ ಮೂಡಿ ಬಂದಿದ್ದು, ಎಲ್ಲರ ಮನತಟ್ಟುತ್ತದೆ ಎಂಬ ವಿಶ್ವಾಸವಿದೆ’ ಎಂಬುದು ಅವರ ಮಾತು. ಇನ್ನು, ಈ ಚಿತ್ರದಲ್ಲಿ ಅಜೇಯ್‌ ಕೂಡಾ ನಟಿಸಿದ್ದಾರೆ. ನಾಯಕಿ ಶ್ರಾವ್ಯ ಇಲ್ಲಿ ಗಾರ್ಮೆಂಟ್‌ ಕೆಲಸಕ್ಕೆ ಹೋಗುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕೇವಲ ಮಾಸ್‌ಗಷ್ಟೇ ಅಲ್ಲದೇ, ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಅವರಿಗಿದೆ. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಕೂಡಾ ನಟಿಸಿದ್ದಾರೆ. ನಿರ್ದೇಶಕ ಸಂತೋಷ್‌ ಸಿನಿಮಾದ ಪಾತ್ರದ ಜೊತೆಗೆ ಅವರ ಮೊದಲ ಸಿನಿಮಾ ತೋರಿಸಿದರಂತೆ. “ಸಂತೋಷ್‌ ಸಿನಿಮಾ ನೋಡಿ ಖುಷಿಯಾಯಿತು.

ತುಂಬಾ ಚಿಕ್ಕ ವಯಸ್ಸಿನಲ್ಲಿ ಸಂತೋಷ್‌ ಮನುಷ್ಯ ಸಂಬಂಧ, ಭಾವನೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಚಿತ್ರದಲ್ಲಿ ಮಾನವೀಯ ಸಂಬಂಧಗಳನ್ನು ಎತ್ತಿಹಿಡಿಯುವ ಸನ್ನಿವೇಶಗಳಿದ್ದು, ತುಂಬಾ ಸೊಗಸಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಸಂತೋಷ್‌ ಬಗ್ಗೆ ಹೇಳಿದರು ದತ್ತಣ್ಣ. ಚಿತ್ರವನ್ನು ಶಂಕರ್‌ ನಿರ್ಮಿಸಿದ್ದಾರೆ. ನಿರ್ದೇಶಕರು ಕೊಟ್ಟ ಬಜೆಟ್‌ನಲ್ಲೇ ಸಿನಿಮಾವನ್ನು ಮುಗಿಸಿದ್ದಾರೆ ಎಂದು ಖುಷಿಯಾದರು. ಚಿತ್ರಕ್ಕೆ ಅನೂಪ್‌ ಸೀಳೀನ್‌ ಸಂಗೀತ, ನಾಗೇಶ್‌ ಆಚಾರ್ಯ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.