ರಗಡ್‌ ಚಿತ್ರಕ್ಕಾಗಿ ವಿನೋದ್‌ ಸಿಕ್ಸ್‌ಪ್ಯಾಕ್‌


Team Udayavani, Nov 23, 2017, 11:09 AM IST

Vinod-Prabhakar-(3).jpg

ಒಂದು ಸಿನಿಮಾ ಅಂದಮೇಲೆ ಆ ಹೀರೋ, ಅಲ್ಲಿರುವ ಪಾತ್ರಕ್ಕೆ ತಕ್ಕಂತೆ ತಯಾರಾಗಲೇಬೇಕು. ಹಾಗಿದ್ದರೆ ಮಾತ್ರ ಆ ಹೀರೋ ಪರಿಪೂರ್ಣ ನಟ ಅನಿಸಿಕೊಳ್ಳೋದು. ಅದಕ್ಕಾಗಿಯೇ ಒಂದಷ್ಟು ಹೀರೋಗಳು ಪಾತ್ರಕ್ಕೆ ಏನೆಲ್ಲಾ ಬೇಕೋ ಹಾಗೆ ತಯಾರಾಗುವುದುಂಟು. ಈಗ ವಿನೋದ್‌ಪ್ರಭಾಕರ್‌ ಕೂಡ ಹೊಸ ಚಿತ್ರದ ಪಾತ್ರವೊಂದಕ್ಕೆ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ. ಅದು ತಮ್ಮ ಹೊಸ ಚಿತ್ರ “ರಗಡ್‌’ಗಾಗಿ. ಹೌದು, ವಿನೋದ್‌ಪ್ರಭಾಕರ್‌ ಅಭಿನಯದ ಈ ಚಿತ್ರಕ್ಕೆ ಬುಧವಾರವಷ್ಟೇ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಅವರದು ರಫ್ ಅಂಡ್‌ ಟಫ್ ಪಾತ್ರ. ಅದಕ್ಕಾಗಿ ಅವರು ದೇಹವನ್ನು ದಂಡಿಸಿದ್ದಾರೆ. ಇದೇ ಮೊದಲ ಸಲ ಅವರು ಸಿಕ್ಸ್‌ ಪ್ಯಾಕ್‌ ಮಾಡಿಕೊಂಡಿದ್ದಾರೆ.

ಹಾಗಂತ ಫಿಟ್‌ ಇರಲಿಲ್ಲವೆಂದಲ್ಲ, ಅವರು ಕಟ್ಟುಮಸ್ತ್ ಆಗಿದ್ದರೂ, ಪಾತ್ರಕ್ಕಾಗಿ ಪ್ಯಾಕ್‌ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಈಜುವುದನ್ನೂ ಕಲಿತಿದ್ದಾರೆ. ವಿನೋದ್‌ ಪ್ರಭಾಕರ್‌ ಅವರಿಗೆ ಅಷ್ಟಾಗಿ ಸ್ವಿಮ್ಮಿಂಗ್‌ ಬರಲ್ಲ. ಪಾತ್ರ ಅದನ್ನು ಡಿಮ್ಯಾಂಡ್‌ ಮಾಡಿದ ಹಿನ್ನೆಲೆಯಲ್ಲಿ ವಿನೋದ್‌, ಚೆನ್ನೈನಲ್ಲಿ ಈಜು ಕಲಿತಿದ್ದಾರೆ.

ಅಲ್ಲೇ ವರ್ಕೌಟ್‌ ಕೂಡ ಮಾಡಿದ್ದಾರೆ. ಈ ಚಿತ್ರದಲ್ಲಿ ಆರಂಭದ ದೃಶ್ಯವೇ ಅಂಡರ್‌ ವಾಟರ್‌ನಲ್ಲಿ ಇರುವಂಥದ್ದು. ನೀರಲ್ಲಿ ಸುಮಾರು 30 ಸೆಕೆಂಡ್‌ಗಳ ಕಾಲ ಇರುವ ದೃಶ್ಯ ಬರುವ ಹಿನ್ನೆಲೆಯಲ್ಲಿ ವಿನೋದ್‌ ಪ್ರಭಾಕರ್‌, ತಾನೇ ಅಂಡರ್‌ವಾಟರ್‌ ನಲ್ಲಿ ಕುಳಿತುಕೊಳ್ಳುವುದಾಗಿ ನಿರ್ಧರಿಸಿ, ಈ ತಯಾರಿ ಮಾಡಿಕೊಂಡಿದ್ದಾರೆ. ನಿರ್ದೇಶಕರು ಸಿಜಿ ಮಾಡುವ ಯೋಚನೆ ಮಾಡಿದರೂ, ಅದಕ್ಕೆ ಒಪ್ಪದ ವಿನೋದ್‌, ಎಷ್ಟೇ ಕಷ್ಟವಾದರೂ ಸರಿ, ನಾನು ತರಬೇತಿ ಪಡೆಯುವುದಾಗಿ ಹೇಳಿ, ಆ ದೃಶ್ಯ ಎದುರಿಸಲು ಸಜ್ಜಾಗಿದ್ದಾರೆ.

ಚೆನ್ನೈನಲ್ಲಿ ನುರಿತ ತರಬೇತುದಾರರಿಂದ ಈಜು ಕಲಿತು, ಅಂಡರ್‌ವಾಟರ್‌ ನಲ್ಲಿ ಇರುವುದನ್ನೂ ಪಕ್ವ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯವಾಗಿ ಯೋಗ ಅಗತ್ಯ. ಈಗಾಗಲೇ ವಿನೋದ್‌ಪ್ರಭಾಕರ್‌ ಯೋಗ ಮಾಡುತ್ತಲೇ ಬಂದಿದ್ದಾರೆ. ಯೋಗ ಅವರಿಗೆ ಹೊಸದೇನಲ್ಲ. ಆ ಯೋಗ, ಅಂಡರ್‌ವಾಟರ್‌ನ ದೃಶ್ಯಕ್ಕೂ ಸಹಕಾರಿಯಾಗಲಿದೆ ಎಂಬುದು ಅವರ ಮಾತು. ಅಂದಹಾಗೆ, “ರಗಡ್‌’ನಲ್ಲಿ ವಿನೋದ್‌ ಪ್ರಭಾಕರ್‌ ಪಾತ್ರ ಏನು, ಅವರಿಲ್ಲಿ ಏನಾಗಿರುತ್ತಾರೆ, ಎಂಬಿತ್ಯಾದಿ ಪ್ರಶ್ನೆಗಳಿಗೆ ನಿರ್ದೇಶಕರಿಂದ ಬಂದ ಉತ್ತರ ಸಸ್ಪೆನ್ಸ್‌ ಸಸ್ಪೆನ್ಸ್‌ ಮತ್ತು ಸಸ್ಪೆನ್ಸ್‌!

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.