CONNECT WITH US  

ಅಂಜನಿಪುತ್ರ ದೊಡ್ಡದಾಯ್ತು!

ಸಂಕ್ರಾಂತಿ ಬೋನಸ್‌ ಆಗಿ ಒಂದು ಫೈಟು, ಎರಡು ದೃಶ್ಯಗಳ ಸೇರ್ಪಡೆ

ಸಾಮಾನ್ಯವಾಗಿ ಒಂದು ಚಿತ್ರ ಉದ್ದವಾಯಿತು ಎಂದು ಪ್ರೇಕ್ಷಕರು ಬೇಸರಿಸಿಕೊಂಡರೆ, ಚಿತ್ರದವರು ತಕ್ಷಣವೇ ಎಚ್ಚೆತ್ತುಕೊಂಡು ಚಿತ್ರವನ್ನು ಟ್ರಿಮ್‌ ಮಾಡುವುದು ವಾಡಿಕೆ. ಆದರೆ, ಪುನೀತ್‌ ರಾಜಕುಮಾರ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನುಯದ "ಅಂಜನಿಪುತ್ರ'ದ ವಿಷಯದಲ್ಲಿ ಮಾತ್ರ ಅದು ಉಲ್ಟಾ ಆಗುತ್ತದೆ. ಚಿತ್ರವು ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ.

ಈ ಸಂದರ್ಭದಲ್ಲಿ ಚಿತ್ರತಂಡದವರು ಇನ್ನೂ ಎಂಟು ನಿಮಿಷಗಳ ದೃಶ್ಯಗಳನ್ನು ಚಿತ್ರಕ್ಕೆ ಸೇರಿಸಲಿದೆ. ಈಗಾಗಲೇ ಚಿತ್ರದಲ್ಲಿ ಬದಲಾವಣೆಯಾಗಿದ್ದು, ಇಂದಿನಿಂದ ಅದು ಕಾರ್ಯರೂಪಕ್ಕೆ ಬರಲಿದೆ. ಹೌದು, "ಅಂಜನಿಪುತ್ರ' ಇವತ್ತಿನಿಂದಲೇ ಇನ್ನಷ್ಟು ದೊಡ್ಡದಾಗಿದೆ. ಚಿತ್ರ 25 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಮತ್ತು ಸಂಕ್ರಾಂತಿ ಬೋನಸ್‌ ಆಗಿ ಇನ್ನೂ ಎಂಟು ನಿಮಿಷಗಳಷ್ಟು ದೃಶ್ಯಗಳನ್ನು ಚಿತ್ರಕ್ಕೆ ಸೇರಿಸಲಾಗಿದೆ.

ಅದರ ಪೈಕಿ ಒಂದು ಫೈಟು ಮತ್ತು ಎರಡು ದೃಶ್ಯಗಳೂ ಇವೆಯಂತೆ. ಅದನ್ನು ಈಗ ಹೊಸದಾಗಿ ಸೇರಿಸಲಾಗುತ್ತಿದೆ. "ಇದಕ್ಕೂ ಮುಂಚೆಯೇ ಆ ಫೈಟು ಮತ್ತು ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಆದರೆ, ಲ್ಯಾಗ್‌ ಆಗಬಹುದು ಎಂಬ ಕಾರಣಕ್ಕೆ ಬಿಟ್ಟಿದ್ದೆವು. ಈಗ ಮತ್ತೆ ಸೇರಿಸಿದ್ದು, ಭಾನುವಾರದಿಂದ ಚಿತ್ರದ ಹೊಸ ವರ್ಷನ್‌ನ ನೋಡಬಹುದು' ಎನ್ನುತ್ತಾರೆ ನಿರ್ದೇಶಕ ಎ. ಹರ್ಷ.

ಹಾಕಿದ್ದು ಬಂದಿದೆ; ಬರುವುದೆಲ್ಲಾ ಬೋನಸ್‌: ಇನ್ನು "ಅಂಜನಿಪುತ್ರ' ಚಿತ್ರದಿಂದ ಎಷ್ಟು ಲಾಭವಾಯಿತು ಎಂಬ ಪ್ರಶ್ನೆಯನ್ನು ನಿರ್ಮಾಪಕ ಎಂ.ಎನ್‌. ಕುಮಾರ್‌ ಅವರ ಮುಂದಿಟ್ಟರೆ, "ಕನ್ನಡಿಗರ ಆಶೀರ್ವಾದದಿಂದ ಚಿತ್ರಕ್ಕೆ ಹಾಕಿದ ದುಡ್ಡು ಬಂದಿದೆ, ಬರುವುದೆಲ್ಲಾ ಬೋನಸ್‌' ಎಂದು ಹೇಳುತ್ತಾರೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top