CONNECT WITH US  

ಉದಯ ಕಾಮಿಡಿಗೆ 9ರ ಸಂಭ್ರಮ

"ಉದಯ ವಾಹಿನಿ'ಯಲ್ಲಿ ಮೊದಲು ಶುರುವಾದ "ಉದಯ ಕಾಮಿಡಿ'ಗೆ ಈಗ ಒಂಭತ್ತರ ವಸಂತ. ಕಳೆದ 9 ವರ್ಷಗಳಿಂದ ವಿವಿಧ ಹಾಸ್ಯ ಕಾರ್ಯಕ್ರಮ ಕೊಡುವ ಮೂಲಕ ಕಿರುತೆರೆ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ "ಉದಯ ಕಾಮಿಡಿ', ಈಗ ಇನ್ನಷ್ಟು ಹೊಸ ಬಗೆಯ ಕಾರ್ಯಕ್ರಮ ಕೊಡುವಲ್ಲಿ ನಿರತವಾಗಿದೆ. ಈಗಾಗಲೇ ಟಾಪ್‌ 10  9, ಬ್ಲಾಕ್‌ ಬಸ್ಟರ್‌ ಮಿಡ್‌ ಡೇ ಟಾಕೀಸ್‌, ನಗಲೇಬೇಕು, ಸಿಕ್ಕಾಪಟ್ಟೆ ನಕ್ಕುಬಿಡಿ, ಕಿರಿಕ್‌ ಗ್ಯಾಂಗ್‌, ಸೂಪರ್‌ ಸುಬ್ಬಲಕ್ಷ್ಮೀ, ಸೆಲ್ಫಿ ಸೀನ್‌ ಹಾಸ್ಯ ಕಾರ್ಯಕ್ರಮಗಳು ಮನಗೆದ್ದಿವೆ.

"ಉದಯ ಕಾಮಿಡಿ' ಯಶಸ್ವಿ 9 ವರ್ಷ ಪೂರೈಸಿ, ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕ ದ್ವಾರಕೀಶ್‌, ಹಾಸ್ಯ ನಟ ಸಾಧು ಕೋಕಿಲ, ಹಿರಿಯ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಹಾಸ್ಯ ಕಲಾವಿದ ದೊಡ್ಡಣ್ಣ ಅವರು ಶುಭಕೋರಿದ್ದಾರೆ. ಸತತವಾಗಿ ಜನರನ್ನು ರಂಜಿಸುವಲ್ಲಿ ಯಶಸ್ವಿಯಾದ ಉದಯ ಕಾಮಿಡಿ  ಮತ್ತಷ್ಟು ಹೊಸ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರನ್ನು ರಂಜಿಸಲು ಈಗ ಮುಂದಾಗಿದೆ ಎಂಬುದು ವಾಹಿನಿ ಮುಖ್ಯಸ್ಥರ ಮಾತು.

Trending videos

Back to Top