CONNECT WITH US  

ಪೈಲ್ವಾನ್‌ಗಾಗಿ ಬಂದ ಸುನೀಲ್‌ ಶೆಟ್ಟಿ

"ಕನ್ನಡ ಮೂಲದ ಬಾಲಿವುಡ್‌ ನಟರೊಬ್ಬರು ನಮ್ಮ ಚಿತ್ರದಲ್ಲಿ ನಟಿಸಲಿದ್ದಾರೆ' ಎಂದು ಈ ಹಿಂದೆಯೇ "ಪೈಲ್ವಾನ್‌' ನಿರ್ದೇಶಕ ಕೃಷ್ಣ ಹೇಳಿದ್ದರು. ಈಗ ಅದರಂತೆ ಬಾಲಿವುಡ್‌ ನಟರೊಬ್ಬರು ಸುದೀಪ್‌ ಅಭಿನಯದ "ಪೈಲ್ವಾನ್‌' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಆ ನಟ ಬೇರಾರು ಅಲ್ಲ, ಸುನೀಲ್‌ ಶೆಟ್ಟಿ. ಹೌದು, "ಪೈಲ್ವಾನ್‌' ಚಿತ್ರದಲ್ಲಿ ಸುನೀಲ್‌ ಶೆಟ್ಟಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ಸುನೀಲ್‌ ಶೆಟ್ಟಿ ವಿಲನ್‌ ಪಾತ್ರ ಮಾಡುತ್ತಿದ್ದಾರೆನ್ನಲಾಗಿದೆ. ಸುನೀಲ್‌ ಶೆಟ್ಟಿ ಹಾಗೂ ಸುದೀಪ್‌ ಮದ್ಯೆ ಆತ್ಮೀಯತೆ ಇದೆ. ಅದಕ್ಕೆ ಕಾರಣ ಸಿಸಿಎಲ್‌. ಸೆಲೆಬ್ರೆಟಿ ಕ್ರಿಕೆಟ್‌ ಲೀಗ್‌ ಮೂಲಕ ಸುನೀಲ್‌ ಶೆಟ್ಟಿ ಹಾಗೂ ಸುದೀಪ್‌ ಸ್ನೇಹಿತರಾಗಿದ್ದರು. ಈಗ ಸುನೀಲ್‌ ಶೆಟ್ಟಿ ಮೊದಲ ಬಾರಿಗೆ ಸುದೀಪ್‌ ಸಿನಿಮಾ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.

ಈ ಹಿಂದೆಯೇ "ಅಲೋನ್‌' ಸಿನಿಮಾಕ್ಕೆ ಸುನೀಲ್‌ ಶೆಟ್ಟಿ ಬರುತ್ತಾರೆಂದು ಹೇಳಲಾಗಿತ್ತು. ಆದರೆ ಬಂದಿರಲಿಲ್ಲ. ಈಗ "ಪೈಲ್ವಾನ್‌' ಮೂಲಕ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುನೀಲ್‌ ಶೆಟ್ಟಿ ನಟಿಸುತ್ತಿರುವುದರಿಂದ ಸುದೀಪ್‌ ಕೂಡಾ ಖುಷಿಯಾಗಿದ್ದಾರೆ. "ಸುನೀಲ್‌ ಶೆಟ್ಟಿಯವರು ಬರುತ್ತಿರುವುದರಿಂದ ನಾನು ಎಕ್ಸೆ„ಟ್‌ ಆಗಿದ್ದೇನೆ' ಎಂದು ಟ್ವೀಟ್‌ ಮಾಡಿದ್ದಾರೆ.

"ಪೈಲ್ವಾನ್‌' ಚಿತ್ರವನ್ನು ಈ ಹಿಂದೆ "ಹೆಬ್ಬುಲಿ' ಚಿತ್ರ ನಿರ್ದೇಶಿಸಿದ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಈ ಬಾರಿ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಇವರದ್ದೇ. ಚಿತ್ರದಲ್ಲಿ ಆಕಾಂಕ್ಷಾ ಸಿಂಗ್‌ ನಾಯಕಿಯಾಗಿದ್ದು, ಕಬೀರ್‌ ಸಿಂಗ್‌ ದುಹಾನ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಇಂದಿನಿಂದ ಆರಂಭವಾಗಲಿದೆ. 

Trending videos

Back to Top