CONNECT WITH US  

"ಅವತಾರ್‌ ಪುರುಷ'ನಿಗೆ ಆಶಿಕಾ ನಾಯಕಿ

ಮತ್ತೆ ಒಂದಾದ ರ್‍ಯಾಂಬೋ- 2 ಜೋಡಿ

ಶರಣ್‌ ನಾಯಕರಾಗಿರುವ "ಅವತಾರ್‌ ಪುರುಷ' ಚಿತ್ರದ ಫ‌ಸ್ಟ್‌ಲುಕ್‌ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಆಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಚಿತ್ರಕ್ಕೆ  ನಾಯಕಿಯ ಆಯ್ಕೆಯಾಗಿದೆ. ಆಶಿಕಾ ರಂಗನಾಥ್‌ "ಅವತಾರ್‌ ಪುರುಷ' ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಮತ್ತೂಮ್ಮೆ ಈ ಜೋಡಿ ತೆರೆಮೇಲೆ ಬರಲಿದೆ. ಹೌದು, ಆಶಿಕಾ ರಂಗನಾಥ್‌ "ಅವತಾರ್‌ ಪುರುಷ' ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಈಗಾಗಲೇ ಶರಣ್‌ ಹಾಗೂ ಆಶಿಕಾ "ರ್‍ಯಾಂಬೋ-2' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಈ ಜೋಡಿ ಮೋಡಿ ಮಾಡಿತ್ತು. ಅದರಲ್ಲೂ "ಚುಟು ಚುಟು ಅಂತೈತಿ ...' ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಈಗ "ಅವತಾರ್‌ ಪುರುಷ'ದಲ್ಲಿ ಮತ್ತೆ ಒಂದಾಗಿರುವುದರಿಂದ ಸಿನಿಮಾದ ನಿರೀಕ್ಷೆ ಕೂಡಾ ಹೆಚ್ಚಿದೆ.  ಈ ಚಿತ್ರವನ್ನು ಸುನಿ ನಿರ್ದೇಶನ ಮಾಡುತ್ತಿದ್ದು, ಪುಷ್ಕರ್‌ ನಿರ್ಮಾಪಕರು. ಸಾಮಾನ್ಯವಾಗಿ ಸುನಿ ಸಿನಿಮಾಗಳಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ಆಶಿಕಾ ಕೂಡಾ ಖುಷಿಯಾಗಿದ್ದಾರೆ.

ಇಲ್ಲೂ ಅವರ ಪಾತ್ರ ತುಂಬಾ ಭಿನ್ನವಾಗಿದೆಯಂತೆ. ಚಿತ್ರದಲ್ಲಿ ರಾಮಾಯಣದಲ್ಲಿ ಬರುವ ತ್ರಿಶಂಕು ಸ್ವರ್ಗ ಮತ್ತು ಮಹಾಭಾರತದ ಒಂದು ಎಳೆಯನ್ನು ಇಟ್ಟುಕೊಂಡು, ಅದನ್ನು ಇಂದಿನ ಕಾಲಮಾನಕ್ಕೆ ಅನ್ವಯಿಸಿದರೆ ಹೇಗಿರುತ್ತದೆ ಎಂಬ ಪರಿಕಲ್ಪನೆಯಲ್ಲಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಚಿತ್ರದಲ್ಲಿ ಶರಣ್‌ ಜ್ಯೂನಿಯರ್‌ ಆರ್ಟಿಸ್ಟ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್‌ರಾಜ್‌ ಸಂಗೀತವಿದೆ. 


Trending videos

Back to Top