ಪ್ರೇಮಿಗಳ ದಿನಕ್ಕೆ ಕಿರಿಕ್ ಲವ್ ಸ್ಟೋರಿಯ ಕೊಡುಗೆ !
Team Udayavani, Feb 15, 2019, 4:41 AM IST
ಈ ಬಾರಿಯ ಪ್ರೇಮಿಗಳ ದಿನಕ್ಕೆ ಹಲವಾರು ಭಾಷೆಗಳ ಪ್ರೇಮಿಗಳಿಗೂ ಪ್ರಿಯಾ ವಾರಿಯರ್ ಬಂಪರ್ ಕೊಡುಗೆಯನ್ನೇ ನೀಡಿದ್ದಾರೆ. ಪ್ರಿಯಾ ಕಣ್ಣೇಟಿನ ಮೂಲಕ ಇಡೀ ದೇಶದ ಯುವಕರನ್ನು ರೋಮಾಂಚನ ಗೊಳಿಸಿದ್ದಳಲ್ಲಾ? ಆ ಸೀನು ಹೊಂದಿರೋ ಮಲೆಯಾಳದ ಒರು ಅಡಾರ್ ಲವ್ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಿಗೆ ಡಬ್ ಆಗಿದೆ.
ಕನ್ನಡದಲ್ಲಿದು ಕಿರಿಕ್ ಲವ್ ಸ್ಟೋರಿ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಇದು ಕರ್ನಾಟಕದ ಪ್ರೇಮಿಗಳನ್ನೂ ಕೂಡಾ ಕಾತರದಿಂದ ಕಾಯುವಂತೆ ಮಾಡಿರೋದರಲ್ಲಿ ಅಚ್ಚರಿಯೇನೂ ಇಲ್ಲ.
ಅಪ್ಪಟ ಪ್ರೇಮ ಕಥಾನಕ, ಯುವ ಮನಸುಗಳ ತವಕ ತಲ್ಲಣಗಳ ಅಪರೂಪದ ಕಥೆಯನ್ನ ಕಿರಿಕ್ ಲವ್ ಸ್ಟೋರಿ ಒಳಗೊಂಡಿದೆಯಂತೆ. ಹೇಳಿ ಕೇಳಿ ಈ ಸಿನಿಮಾ ಪ್ರಚಾರ ಪಡೆದುಕೊಂಡಿದ್ದೇ ಕಣ್ಣು ಹೊಡೆಯೋ ಸೀನಿನಿಂದ. ಆದರೆ ಒಟ್ಟಾರೆ ಸಿನಿಮಾದಲ್ಲಿ ಮುಜುಗರವಾಗುವಂಥಾ ಯಾವ ಸನ್ನಿವೇಶಗಳೂ ಇಲ್ಲವಂತೆ.
ಕೇವಲ ಯುವ ಪ್ರೇಮಿಗಳು ಮಾತ್ರವಲ್ಲ, ಎಲ್ಲ ವಯೋಮಾನದ ಪ್ರೇಕ್ಷಕರನ್ನೂ ಮುದಗೊಳಿಸುವಂತೆ ಕಿರಿಕ್ ಲವ್ ಸ್ಟೋರಿ ಮೂಡಿ ಬಂದಿದೆಯಂತೆ.