ಗಾಂಧಿನಗರಕ್ಕೆ ಮತ್ತೊಬ್ಬ “ಜಟ್ಟಿ’


Team Udayavani, Feb 18, 2019, 5:26 AM IST

jatti.jpg

ಕನ್ನಡದಲ್ಲಿ ಈಗಾಗಲೇ ಸುದೀಪ್‌ ಅಭಿನಯದ “ಪೈಲ್ವಾನ್‌’ ಹಾಗೂ ದುನಿಯಾ ವಿಜಯ್‌ ಅಭಿನಯದ “ಕುಸ್ತಿ’ ಸಿನಿಮಾಗಳ ಬಗ್ಗೆ ಆಗಾಗ್ಗೆ ಸುದ್ದಿಯನ್ನು ಕೇಳಿರುತ್ತೀರಿ. ಈಗ ಅಂಥದ್ದೇ ಸಾಲಿಗೆ ಸೇರುವ “ಜಟ್ಟಿ’ ಎಂಬ ಹೆಸರಿನಲ್ಲಿ ಚಿತ್ರವಾಗಿ ತೆರೆಗೆ ಬರುತ್ತಿದೆ. ಅಂದಹಾಗೆ, ಚಿತ್ರದ ಶೀರ್ಷಿಕೆ “ಜಟ್ಟಿ’ ಅಂತಿದ್ದರೂ, ಇದು ಸುದೀಪ್‌ ಚಿತ್ರಕ್ಕಾಗಲಿ ಅಥವಾ ದುನಿಯಾ ವಿಜಯ್‌ ಚಿತ್ರಕ್ಕಾಗಲಿ ಸಂಬಂಧಿಸಿದ್ದಲ್ಲ.

ಈ ಚಿತ್ರದ ಕಥಾ ಹಂದರಕ್ಕೆ ಸೂಕ್ತವಾಗುತ್ತದೆ ಎನ್ನುವ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ “ಜಟ್ಟಿ’ ಎನ್ನುವ ಶೀರ್ಷಿಕೆಯನ್ನು ಇಟ್ಟುಕೊಂಡಿದೆ. ಇನ್ನು ಈ “ಜಟ್ಟಿ’ ಚಿತ್ರದ ಮೂಲಕ ವಿಲಾಸ್‌ ಪಾಟೀಲ್‌ ಎಂಬ ಯುವನಟ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಇತ್ತೀಚೆಗೆ “ಜಟ್ಟಿ’ ಚಿತ್ರದ ಟೈಟಲ್‌ ಪೋಸ್ಟರ್‌ನ್ನು ಬಿಡುಗಡೆ ಮಾಡಿದ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ತೆರೆದಿಟ್ಟಿತು. 

ಸುಮಾರು 40 ವರ್ಷದ ಹಿಂದೆ ವಿಜಯಪುರದ ಹಳ್ಳಿಯೊಂದರಲ್ಲಿದ್ದ “ಜಟ್ಟಿ’ಯೊಬ್ಬನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಬಹುತೇಕ ಉತ್ತರ ಕರ್ನಾಟಕದ ಸೊಗಡಿರುವ ಈ ಚಿತ್ರದಲ್ಲಿ ಜಟ್ಟಿ ಮತ್ತು ಕುಸ್ತಿಯ ಕುರಿತಾದ ಹಲವು ಸಂಗತಿಗಳು ಇರಲಿವೆ ಎನ್ನುತ್ತದೆ ಚಿತ್ರತಂಡ. “ಜಟ್ಟಿ’ ಚಿತ್ರವನ್ನು ನಿರ್ದೇಶಕ ಬಿ.ರಾಮಮೂರ್ತಿ ಮಾರ್ಗದರ್ಶನದಲ್ಲಿ ವಿಲಾಸ್‌ ಪಾಟೀಲ್‌ ನಿರ್ದೇಶಿಸುತ್ತಿದ್ದಾರೆ.

ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ಕಸರತ್ತು ನಡೆಸಿರುವ ವಿಲಾಸ್‌ ಪಾಟೀಲ್‌ ಕುಸ್ತಿ ಕಲಿತುಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರಂತೆ. ಚಿತ್ರದಲ್ಲಿ “ಜಟ್ಟಿ’ಯ ಪತ್ನಿಯಾಗಿ, ನಾಯಕಿಯ ಪಾತ್ರದಲ್ಲಿ ರಕ್ಷಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ನಿರ್ದೇಶಕ ಬಿ. ರಾಮಮೂರ್ತಿ, ಗುರು ಪ್ರಸಾದ್‌ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ.

“ಜಟ್ಟಿ’ ಚಿತ್ರದ ಹಾಡುಗಳಿಗೆ ಪ್ರವೀಣ್‌ ಡಿ. ರಾವ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ದೃಶ್ಯಗಳನ್ನು ಶ್ಯಾಮ್‌ ಸಾಲ್ವನ್‌ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ನಂದಿ ಬಸವೇಶ್ವರ ಪೊ›ಡಕ್ಷನ್‌ ಹೌಸ್‌ ಬ್ಯಾನರ್‌ನಲ್ಲಿ ಎಂ.ಆರ್‌ ಪಾಟೀಲ್‌ “ಜಟ್ಟಿ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ವರ್ಷಾಂತ್ಯದೊಳಗೆ “ಜಟ್ಟಿ’ ತೆರೆಮೇಲೆ ತೊಡೆ ತಟ್ಟಲಿದ್ದಾನೆ ಎನ್ನುತ್ತದೆ ಚಿತ್ರತಂಡ.  

ಟಾಪ್ ನ್ಯೂಸ್

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.