ಸಿನಿಮಾ ನೋಡಿ ಮನೆಗೆ ವಾಪಸ್ಸಾದ ಅಂಬರೀಶ್
Team Udayavani, Sep 16, 2018, 12:03 PM IST
ಬೆಂಗಳೂರು: ರಕ್ತದೊತ್ತಡ ಕಡಿಮೆಯಾದ (ಲೋ ಬಿ.ಪಿ) ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ನಟ ಅಂಬರೀಶ್ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದು, ಶನಿವಾರ ಮನೆಗೆ ವಾಪಸಾಗಿದ್ದಾರೆ.
ಅವರ ಅಭಿನಯದ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಕ್ಕೆ ಶುಕ್ರವಾರ “ಯು’ ಪ್ರಮಾಣ ಪತ್ರ ಸಿಕ್ಕಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಅಂಬರೀಶ್ ಅವರು, ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ತಾವು ಸಿನಿಮಾ ನೋಡಬೇಕೆಂದು ಹಠ ಹಿಡಿದಿದ್ದಾರೆ. ಕೂಡಲೇ ವೈದ್ಯರು, ಸಿನಿಮಾ ವೀಕ್ಷಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಬಳಿಕ ಕಲಾವಿದರ ಸಂಘಕ್ಕೆ ತೆರಳಿ ಅಂಬರೀಶ್ ಸಿನಿಮಾ ವೀಕ್ಷಿಸಿದರು.
ಇದೇ ಖುಷಿಯಲ್ಲಿದ್ದ ಅಂಬರೀಶ್ ಅವರು ಆಸ್ಪತ್ರೆಗೆ ತೆರಳದೆ, ನೇರವಾಗಿ ಮನೆಗೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರ ಇಚ್ಛೆಯಂತೆಯೇ ವೈದ್ಯರು ಆ್ಯಂಬುಲೆನ್ಸ್ನಲ್ಲಿ ಸಿಬ್ಬಂದಿಯೊಂದಿಗೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಅಂಬರೀಶ್ ತಮ್ಮ ನಿವಾಸದಲ್ಲೇ, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ಕೆಸಿಸಿ ಪಂದ್ಯ ವೀಕ್ಷಣೆ ವೇಳೆ ಅವರು ಕುಸಿದು ಬಿದ್ದಿದ್ದರು. ಭಾನುವಾರ ನಡೆಯಬೇಕಿದ್ದ ಇದೇ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ