CONNECT WITH US  

ಹೆಲ್ಮೆಟ್‌ ಧರಿಸಿ ಜೀವ ರಕ್ಷಿಸಿಕೊಳ್ಳಿ: ಪ್ರಭು

ಚಿಕ್ಕೋಡಿ: ಪಟ್ಟಣದಲ್ಲಿ ಹೆಲ್ಮೆಟ್‌ ಧರಿಸಬೇಕೆಂದು ಬೈಕ್‌ ಸವಾರರಿಗೆ ಡಿವೈಎಸ್‌ಪಿ ಪ್ರಭು ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದರು.

ಚಿಕ್ಕೋಡಿ: ಬೈಕ್‌ ಸವಾರರು ತಮ್ಮ ಅತ್ಯಮೂಲ್ಯ ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಎಂದು ಚಿಕ್ಕೋಡಿ ಪ್ರಭಾರಿ ಡಿವೈಎಸ್‌ಪಿ ಡಿ.ಟಿ. ಪ್ರಭು ಹೇಳಿದರು.

ಶುಕ್ರವಾರ ಪಟ್ಟಣದ ಸಂಚಾರ ಪೊಲೀಸ್‌ ಠಾಣೆ, ಸಿವಿಲ್‌ ಪೊಲೀಸ್‌ ಠಾಣೆ, ಹೆಸ್ಕಾಂ, ಕಂದಾಯ, ಆರೋಗ್ಯ, ಶಿಕ್ಷಣ, ಸಾರಿಗೆ ಮತ್ತು ಪುರಸಭೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಹೆಲ್ಮೆಟ್‌ ಜಾಗೃತಿ ಅಭಿಯಾನದಲ್ಲಿ ಬೈಕ್‌ ಸವಾರರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿ ನಂತರ ಅವರು ಮಾತನಾಡಿದರು.

ತಾಲೂಕು ವೈದ್ಯಾಧಿ ಕಾರಿ ಡಾ| ವಿ.ವಿ. ಶಿಂಧೆ ಮಾತನಾಡಿ, ರಸ್ತೆ ಅಪಘಾತಗಳಲ್ಲಿ ನೂರಕ್ಕೆ 90ರಷ್ಟು ಜನ ತಲೆಗೆ ಪೆಟ್ಟಾಗಿ ಮೃತಪಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್‌ ಧರಿಸಿದರೆ ಅಪಘಾತ ಸಂಭವಿಸಿದಾಗ ಮೃತಪಡುವ ಪ್ರಮಾಣ ಕಡಿಮೆ ಇರುತ್ತದೆ. ಬೈಕ್‌ ಸವಾರರು ವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಎಂದರು.

ತಹಶೀಲ್ದಾರ್‌ ಸಿ.ಎಸ್‌. ಕುಲಕರ್ಣಿ ಮಾತನಾಡಿ, ನಮ್ಮ ಸುರಕ್ಷೆತೆಗಾಗಿ ಹೆಲ್ಮೆಟ್‌ ಧರಿಸುವ ಮೂಲಕ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಪೊಲೀಸ್‌, ಹೆಸ್ಕಾಂ ಸಿಬ್ಬಂದಿಗಳು ಬೈಕ್‌ ಮೂಲಕ ಪಟ್ಟಣದ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ಸಂಚರಿಸಿ ಹೆಲ್ಮೆಟ್‌ ಕುರಿತು ಜಾಗೃತಿ ಮೂಡಿಸಿದರು. ಈ ವೇಳೆ ಸಿಪಿಐ ಮಲ್ಲನಗೌಡ ನಾಯ್ಕರ, ಉಪನ್ಯಾಸಕ ಎನ್‌.ವಿ. ಶಿರಗಾಂವಕರ, ಪಿಎಸ್‌ಐ ಸಂಗಮೇಶ ಹೊಸಮನಿ, ಸಂಚಾರ ಪೊಲೀಸ್‌ ಠಾಣೆ ಪಿಎಸ್‌ಐ ಅವಟೆ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಗಜ್ಜಿ ಇತರರು ಇದ್ದರು.


Trending videos

Back to Top