ಗುಣಮಟ್ಟದ ತಾಂತ್ರಿಕ ಶಿಕ್ಷ ಣ ಆಗುತ್ತೆ ಗಗನ ಕುಸುಮ!

Team Udayavani, Feb 22, 2019, 11:47 AM IST

22-february-17.jpg

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ಹಾಗೂ ಹಾಸನದಲ್ಲಿ ಹೊಸ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆ ವಿಷಯ ಉತ್ತರ ಕರ್ನಾಟಕದ ಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಗೊಂದಲ ಹುಟ್ಟು ಹಾಕುತ್ತಿದೆ.

ಈಗಲೇ ಉತ್ತರ ಕರ್ನಾಟಕದ ಬಹುತೇಕ ಎಂಜಿನಿಯರಿಂಗ ಕಾಲೇಜ್‌ ಗಳಲ್ಲಿ ಪ್ಲೇಸ್‌ಮೆಂಟ್‌ ಸರಿಯಾಗಿ ಆಗುತ್ತಿಲ್ಲ. ಕಂಪನಿಗಳು ಬಂದರೂ ಒಂದೆರಡು ಕಾಲೇಜುಗಳಿಗೆ ಮಾತ್ರ ಸೀಮಿತ. ಹೆಸರಾಂತ ಕಂಪನಿಗಳು ಬರುವುದೂ ಬಹಳ ಕಡಿಮೆ. ಈಗ ಪ್ರತಿಷ್ಠಿತ ಕಂಪನಿಗಳ ಪ್ಲೇಸ್‌ ಮೆಂಟ್‌ ಬೆಂಗಳೂರು ಭಾಗದ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮಾತ್ರ ಆಗುತ್ತಿದೆ. ಎಲ್ಲವೂ ಬೆಂಗಳೂರು ಕೇಂದ್ರಿಕೃತವಾಗುತ್ತಿವೆ. ಇಂತಹ ಸ್ಥಿತಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಭಜನೆ ಮಾಡಿದರೆ ಈ ಭಾಗದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆದಾಡಬೇಕಾಗುತ್ತದೆ ಎಂಬುದು ಎಂಜಿನಿಯರಿಂಗ್‌ ಶಿಕ್ಷಣ ತಜ್ಞರ ಆತಂಕ.

ಈಗ ರಾಜ್ಯದಲ್ಲಿ ಒಂದೇ ತಾಂತ್ರಿಕ ವಿಶ್ವವಿದ್ಯಾಲಯ ಇರುವುದರಿಂದ ಎಲ್ಲೇ ಪಾಸಾಗಲಿ ಒಂದೇ ಪದವಿ ಹಾಗೂ ಒಂದೇ ರೀತಿಯ ಮೌಲ್ಯಮಾಪನ ಇದೆ. ಏಕರೂಪ ಶಿಕ್ಷಣ ವ್ಯವಸ್ಥೆ ಇದೆ. ಇಂತಹುದರಲ್ಲೂ ಅವಕಾಶಗಳು ಸಿಗುವಲ್ಲಿ ತಾರತಮ್ಯ ಕಾಣುತ್ತಿದ್ದೇವೆ. ಹೀಗಿರುವಾಗ ಸರಕಾರ ವಿಶ್ವವಿದ್ಯಾಲಯ ವಿಭಜನೆ ಮಾಡಿದರೆ ಗುಣಮಟ್ಟದಲ್ಲಿ ತಾರತಮ್ಯ ಕಾಣುತ್ತೇವೆ. ಸರಕಾರದ ಅನಾದರವೂ ಹೆಚ್ಚಾಗುತ್ತದೆ. ಈ ಭಾಗದ ಸಮಸ್ಯೆಗಳ ಕಡೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಅನುದಾನ ಬಿಡುಗಡೆಗೆ ವಿಳಂಬವಾಗುತ್ತದೆ. ಇದನ್ನೆಲ್ಲ ನೋಡಿದರೆ ಸರಕಾರವೇ ವಿದ್ಯಾರ್ಥಿಗಳಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದ್ದರೂ ಈಗಲೇ ಅನೇಕ ಸೌಕರ್ಯ ಹಾಗೂ ಅವಕಾಶಗಳು ಬೆಂಗಳೂರು ಭಾಗಕ್ಕೆ ಸೀಮಿತವಾಗಿವೆ. ಬೆಂಗಳೂರು ಭಾಗದ ವಿದ್ಯಾರ್ಥಿಗಳು ಇಲ್ಲಿಯ ಕಾಲೇಜುಗಳಿಗೆ ಬರಲು ಆಸಕ್ತಿ ತೋರಿಸುತ್ತಿಲ್ಲ. ಅಲ್ಲಿ ಕಾಲೇಜುಗಳ ಸಂಖ್ಯೆಯೂ ಸಾಕಷ್ಟಿದೆ. ಈಗ ಹಾಸನದಲ್ಲಿ ಹೊಸ ತಾಂತ್ರಿಕ ವಿವಿ ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡರೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕೇವಲ ಉತ್ತರ ಕರ್ನಾಟಕದ 50 ರಿಂದ 60 ಕಾಲೇಜುಗಳ ವಿಶ್ವವಿದ್ಯಾಲಯವಾಗಿ ಉಳಿಯಲಿದೆ. ಆಗ ಗುಣಮಟ್ಟದ ವಿಭಜನೆಯಾಗುತ್ತದೆ ಎಂಬುದು ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಅಸಮಾಧಾನ. ಬೆಂಗಳೂರು ಭಾಗದ ಕಾಲೇಜುಗಳಿಗೆ ಹೋಲಿಸಿದರೆ ಇಲ್ಲಿನ ಕಾಲೇಜುಗಳಲ್ಲಿ ಸೌಲಭ್ಯ, ವಿದ್ಯಾರ್ಥಿಗಳ ಸಾಧನೆ, ಅವಕಾಶ ಕಡಿಮೆ. ಎಲ್ಲವೂ ಬೆಂಗಳೂರು ಭಾಗಕ್ಕೆ ಕೇಂದ್ರೀಕೃತವಾಗುವುದರಿಂದ ಸಹಜವಾಗಿಯೇ ಈ ಭಾಗದ ಕಾಲೇಜುಗಳ ಕಡೆಗೆ ಜನರು ನೋಡುವ ದೃಷ್ಟಿ ಬೇರೆಯೇ ಆಗಿರುತ್ತದೆ. ಈ ವ್ಯತ್ಯಾಸವನ್ನು ನಿವಾರಿಸುವತ್ತ ಸರಕಾರ ಮೊದಲು ಗಮನ ನೀಡಬೇಕು. ಅದನ್ನು ಬಿಟ್ಟು ಬೇರೆ ತಾಂತ್ರಿಕ ವಿಶ್ವವಿದ್ಯಾಲಯ ಮಾಡಿದರೆ ಆಗ ಉತ್ತರ ಕರ್ನಾಟಕದ ವಿಶ್ವವಿದ್ಯಾಲಯ ಹಾಗೂ ಇಂಜನಿಯರಿಂಗ್‌ ಕಾಲೇಜ್‌ಗಳ ಕಡೆಗೆ ನೋಡುವ ದೃಷ್ಟಿಯೇ ಬದಲಾಗುತ್ತದೆ. ನಮ್ಮವರು ಅವಕಾಶಗಳಿಂದ ಮತ್ತಷ್ಟು ವಂಚಿತರಾಗುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳೆದು ಈ ಹಂತಕ್ಕೆ ಬಂದು ನಿಲ್ಲಲು 20ವರ್ಷ ತೆಗೆದುಕೊಂಡಿತು. ಈಗ ಸಾವಿರಾರು ಕೋಟಿ ಖರ್ಚು ಮಾಡಿ ಹಾಸನದಲ್ಲಿ ಮತ್ತೊಂದು  ವಿವಿ ಸ್ಥಾಪನೆ ಮಾಡಿದರೆ ಅದು ಬೆಳೆಯಲು ಮತ್ತೆ 20 ವರ್ಷ ಬೇಕು. ಈ ಅವಧಿಯಲ್ಲಿ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗುತ್ತದೆ. ಎರಡೂ ವಿವಿಗಳು ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಎಂಜಿನಿಯರಿಂಗ್‌ ಕಾಲೇಜುಗಳ ಪ್ರಾಧ್ಯಾಪಕರ ಅಭಿಪ್ರಾಯ.

ಮತ್ತೊಂದು  ತಾಂತ್ರಿಕ ವಿಶ್ವವಿದ್ಯಾಲಯ ಮಾಡುವುದು ದೊಡ್ಡ ವಿಷಯವಲ್ಲ. ಆದರೆ ಈಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಈಗಾಗಲೇ ಸಾಕಷ್ಟು ಗೊಂದಲದಲ್ಲಿ ಬಿದ್ದಿದೆ. ಅದನ್ನು ಸರಿಪಡಿಸುವ ಕ್ರಮಕ್ಕೆ ಸರಕಾರ ಮುಂದಾಗಬೇಕು. ತಾಂತ್ರಿಕ ಶಿಕ್ಷಣದ ಗುಣಮಟ್ಟ ಮೊದಲಿನ ಹಾಗೆ ಉಳಿದಿಲ್ಲ. ವಿದ್ಯಾರ್ಥಿಗಳು ಎಂಜನಿಯರಿಂಗ್‌ ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಮೂಲ ಸೌಲಭ್ಯಗಳಿಂದ ಸೊರಗುತ್ತಿವೆ. ಸಂಶೋಧನೆಗಳು ಕಡಿಮೆಯಾಗುತ್ತಿವೆ. ಇದಾವುದರ ಕಡೆಗೂ ಸರಕಾರದ ಆಸಕ್ತಿ ಇಲ್ಲ ಎಂಬುದು ಎಬಿವಿಪಿ ಮುಖಂಡ ಪೃಥ್ವಿಕುಮಾರ ಆರೋಪ. 

ಅನುದಾನ ಕಡಿತ ಆತಂಕ
ಈಗ ವಿಟಿಯು ವ್ಯಾಪ್ತಿಯಲ್ಲಿರುವ 217 ಕಾಲೇಜ್‌ಗಳಲ್ಲಿ 20 ಕಾಲೇಜ್‌ಗಳು ಸ್ವಾಯತ್ತ ಸ್ಥಾನಮಾನ ಪಡೆದಿವೆ. ಈ ಕಾಲೇಜುಗಳಿಂದ ವಿವಿಗೆ ಬರುವ ಆದಾಯ ಕಡಿಮೆಯಾಗುತ್ತಿದೆ. ಇದೇ ವೇಳೆ ವಿಟಿಯು ವಿಭಜನೆಯಾದರೆ ಉತ್ತರ ಕರ್ನಾಟಕದಲ್ಲಿ ಉಳಿಯುವ ಕಾಲೇಜ್‌ಗಳ ಸಂಖ್ಯೆ 50 ರಿಂದ 60 ಮಾತ್ರ. ಬೆಂಗಳೂರು ಭಾಗದ 160 ಕಾಲೇಜ್‌ಗಳಿಂದ ಬರುವ ಆದಾಯ ಆಗ ಶಾಶ್ವತವಾಗಿ ನಿಂತು ಹೋಗುತ್ತದೆ. ಶಿಕ್ಷಣದ ಗುಣಮಟ್ಟದಲ್ಲಿ ಸಹ ಸಾಕಷ್ಟು ವ್ಯತ್ಯಾಸ ಆಗಲಿದೆ ಎಂಬುದು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಸದಸ್ಯ ಸಂಜೀವ ಕುಬಕಡ್ಡಿ ಅಭಿಪ್ರಾಯ.

ತಾರತಮ್ಯ ವೃದ್ಧಿ
ಹಾಸನದಲ್ಲಿ ಹೊಸ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆ ಆದರೆ ಗುಣಮಟ್ಟದ ಶಿಕ್ಷಣದ ವಿಭಜನೆ ಆಗುತ್ತದೆ. ಭೌಗೋಳಿಕವಾಗಿ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ವಿಭಜನೆಯಾಗುತ್ತದೆ. ಮೊದಲೇ ಉತ್ತರ ಕರ್ನಾಟಕದ ಭಾಗದ ಜನರಿಗೆ ಸರಕಾರದ ನೌಕರಿ ಸಿಗುತ್ತಿಲ್ಲ. ಈಗ ವಿವಿ ವಿಭಜನೆ ಆದರೆ ಇಲ್ಲಿನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ಎಂಬುದು ಗಗನಕುಸುಮವಾಗಲಿದೆ. ಆಗ ತಾರತಮ್ಯದ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎನ್ನುತ್ತಾರೆ ಹೀರಾ ಶುಗರ್‌ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎಸ್‌.ಸಿ. ಕಮತೆ.

 ಕೇಶವ ಆದಿ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.