ಇನ್ಫೋಸಿಸ್‌ನಲ್ಲಿ ಹೊಸ ವಿವಾದ: ನಾರಾಯಣ ಮೂರ್ತಿ ಅಸಮಾಧಾನ

Team Udayavani, Apr 3, 2017, 11:31 AM IST

Narayan Murthy-700.jpg

ಬೆಂಗಳೂರು :  ಇನ್‌ಫೋಸಿಸ್‌ ಕಂಪೆನಿಯೊಳಗಿನ ವಿವಾದಗಳು ದುರದೃಷ್ಟವಶಾತ್‌ ಇನ್ನೂ ಮುಗಿದಂತೆ ಕಾಣುವುದಿಲ್ಲ.

ಚೀಫ್ ಆಪರೇಟಿಂಗ್‌ ಆಫೀಸರ್‌ (ಸಿಓಓ) ಯು ಬಿ ಪ್ರವೀಣ್‌ ರಾವ್‌ ಅವರಿಗೆ ಅಗಾಧ ಮೊತ್ತದ ಪರಿಹಾರ ಏರಿಕೆಗೆ ಕಳೆದ ಫೆಬ್ರವರಿ ತಿಂಗಳಲ್ಲಿ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿರುವುದನ್ನು  ಸ್ಥಾಪಕ ಎನ್‌ ಆರ್‌ ನಾರಾಯಣ ಮೂರ್ತಿ ಪ್ರಶ್ನಿಸಿದ್ದಾರೆ.

ನಿರ್ದೇಶಕರ ಮಂಡಳಿಯ ಈ ಕ್ರಮವು ಸರಿಯಾದುದಲ್ಲ ಮತ್ತು ಇದರಿಂದ ಕಂಪೆನಿಯ ನೌಕರರಲ್ಲಿ ಆಡಳಿತ ವರ್ಗ ಮತ್ತು ನಿರ್ದೇಶಕ ಮಂಡಳಿಯ ಮೇಲಿರುವ ವಿಶ್ವಾಸವು ಕೊರೆದುಹೋಗಲಿದೆ ಎಂದು ನಿನ್ನೆ ಭಾನುವಾರ ಹೇಳಿದ್ದಾರೆ. 

ಪಿಟಿಐಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ನಾರಾಯಣ ಮೂರ್ತಿ ಅವರು ತಮ್ಮ ಅಭಿಪ್ರಾಯವನ್ನು ಹೊರಡೆಡಹಿದ್ದಾರೆ. ಇನ್‌ಫೋಸಿಸ್‌ನಲ್ಲಿ ಈಗಿರುವ ಕಳಪೆ ಆಡಳಿತ ಮಟ್ಟದ ಪರಿಸ್ಥಿತಿಯಲ್ಲಿ, ಉನ್ನತ ಆಡಳಿತೆಯ ಒಬ್ಬ ವ್ಯಕ್ತಿಗೆ ಮಂಡಳಿಯು ಈ ರೀತಿಯ ಔದಾರ್ಯ ತೋರಿಸಿದಲ್ಲಿ ಅದರಿಂದ ವ್ಯತ್ಯಸ್ತ ವೇತನದ ಗುರಿಯನ್ನು ಕಾಯ್ದುಕೊಳ್ಳುವುದು ಅಸಾಧ್ಯವಾದೀತು ಎಂದು ಮೂರ್ತಿ ನಿಷ್ಠುರವಾಗಿ ಹೇಳಿದ್ದಾರೆ. 

ಕಂಪೆನಿಯ ಹೆಚ್ಚಿನ ನೌಕರರಿಗೆ ಶೇ.6ರಿಂದ ಶೇ.8ರಷ್ಟು ಪರಿಹಾರವನ್ನು ಕೊಟ್ಟಿರುವಾಗ ಉನ್ನತ ಆಡಳಿತೆಯ ಅಧಿಕಾರಿಗೆ ಶೇ.60ರಿಂದ ಶೇ.70ರಷ್ಟು ಪರಿಹಾರ ಮೊತ್ತವನ್ನು ಏರಿಸುವುದು ಸರಿಯಲ್ಲ ಎಂದು ಮೂರ್ತಿ ಹೇಳಿದ್ದಾರೆ. 

“ಪ್ರವೀಣ್‌ ಬಗ್ಗೆ ನನಗೆ ತುಂಬಾ ಒಲುಮೆ ಇದೆ. ಆತನನ್ನು 1985ರಲ್ಲಿ ನಾನೇ ನೇಮಕ ಮಾಡಿದ್ದೆ. ಇನ್‌ಫೋಸಿಸ್‌ನಲ್ಲಿ ನಾನಿರುವಷ್ಟು ಕಾಲವೂ ಆತನನ್ನು ಬೆಳೆಸಿದ್ದೆ. ಆದರೆ ಅನಂತರ ಆತನನ್ನು ಬದಿಗೆ ಒತ್ತಲಾಯಿತು. 2013ರಲ್ಲಿ ನಾನು ಇನ್‌ಫೋಸಿಸ್‌ ಗೆ ಮರಳಿದಾಗ ಆತ ಕಂಪೆನಿಯ ಕಾರ್ಯಕಾರಿ ಮಂಡಳಿಯಲ್ಲಿಯೂ ಇರಲಿಲ್ಲ. ಬಳಿಕ ಆತನನ್ನು ಮಂಡಳಿಗೆ ಸೇರಿಸಿಕೊಳ್ಳಲಾಯಿತು; ವಿಶಾಲ್‌ ಸಿಕ್ಕಾ ಅವರನ್ನು ಕಂಪೆನಿಯ ಸಿಇಓ ಹುದ್ದೆಗೆ ನೇಮಕ ಮಾಡಿಕೊಂಡಾಗ ಪ್ರವೀಣ್‌ ಅವರನ್ನು ಸಿಓಓ ಹುದ್ದೆಗೆ ಏರಿಸಲಾಯಿತು. ಹಾಗಿರುವಾಗ ಆತನಿಗೆ ಈಗ ಶೇ.60-70ರಷ್ಟು ಪರಿಹಾರ ಏರಿಸಿರುವ ಬಗೆಗಿನ ನನ್ನ ಆಕ್ಷೇಪಕ್ಕೂ ವೈಯಕ್ತಿಕವಾಗಿ ಪ್ರವೀಣ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ಮೂರ್ತಿ ಹೇಳಿದ್ದಾರೆ. 

ಟಾಪ್ ನ್ಯೂಸ್

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.