ಮಹಿಳೆಯರು ಸೂತಕದಿಂದ ಹೊರ ಬರಲಿ

Team Udayavani, Mar 9, 2018, 3:46 PM IST

gul-2.jpg

ಕಲಬುರಗಿ: ಮಹಿಳೆಯರು ನಾನು ಮಹಿಳೆ.. ನಾನು ದುರ್ಬಲೆ.. ನಾನು ಅಬಲೆ.. ನಾನು ಅಡುಗೆ ಮನೆಯಲ್ಲಿಯೇ ಇರಬೇಕು.. ಕೆಲಸ ಮಾಡುತ್ತಲೇ ಇರಬೇಕು.. ಮತ್ತು ಗಂಡಸಿನ ಆಸೆ ತೀರಿಸಲಿಕ್ಕಾಗಿಯೇ ಇರಬೇಕು ಎನ್ನುವ ಸೂತಕದ ಭಾವನೆಯಿಂದ ಹೊರ ಬನ್ನಿ.. ಜಗತ್ತು ನೋಡಿ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಹಾಗೂ ಹೋರಾಟಗಾರ್ತಿ ಕೆ.ನೀಲಾ ಕರೆ ನೀಡಿದರು.

ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಡಾನಬಾಸ್ಕೋ, ದಿವ್ಯ ಜೀವನ ನೆಟ್‌ವರ್ಕ್‌, ಜೀವನ ಜ್ಯೋತಿ, ಮಾರ್ಗದರ್ಶಿ ಹಾಗೂ ಸೇವಾ ಸಂಗಮ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣನ್ನು ಜ್ಞಾನ, ವಿವೇಕ, ಶ್ರಮ ಮತ್ತು ಸಹಭಾಗಿಣಿ ಎನ್ನದೆ ಭೋಗದ ವಸ್ತುವಾಗಿ ನೋಡುವುದು ಸರಿಯಲ್ಲ. ಮನೆಯಲ್ಲಿ ಗಂಡಸಿಗೆ ಇಲ್ಲದ ನಿರ್ಭಂದನೆಗಳು ಹೆಣ್ಣಿಗೆ ಸೀಮಿತವಾಗಿದ್ದವು. ರಾತ್ರಿಯಾದರೆ ತಿರುಗಬೇಡಿ.. ನಗಬೇಡಿ.. ಅಂತಹ ಬಟ್ಟೆ ಬೇಡ.. ಇಂತಹ ಬಟ್ಟೆ ಬೇಡ.. ಗಂಡು ಮಕ್ಕಳೊಂದಿಗೆ ಮಾತನಾಡುವಂತೆ ಇಲ್ಲ.. ಬಾಗಿಲಲ್ಲಿ ನಿಲ್ಲುವಂತಿಲ್ಲ.. ಹೀಗೆ ಹತ್ತು ಹಲವು ಕಟ್ಟುಪಾಡುಗಳನ್ನು ಅವ್ವ, ಅಜ್ಜಿ ಹಾಕುತ್ತಿದ್ದ ದಿನಗಳಲ್ಲೇ ಇನ್ನೂ ನಾವಿದ್ದೇವೆ. ಆದರಾಚೆಗೆ ನಮಗೆ ನೋಡಲು ಸಾಧ್ಯವಾಗಬೇಕು. ಅದನ್ನು ಪುರುಷರು ಕೂಡ ಮಾಡಬೇಕು. ಆಗಲೇ ಸಮಾನತೆ ಬರುತ್ತದೆ. ಬರದಿದ್ದರೆ ಸಮಾನತೆ ಸಿಗುವವರೆಗೆ ನಾವು ಹೋರಾಟ ಮಾಡಬೇಕು ಎಂದರು.

ಇವತ್ತಿನ ದಿನಾಚರಣೆಗೆ ಪುರುಷರು ಬರಬೇಕಿತ್ತು. ಏಕೆಂದರೆ ನಾವು ಮಾತನಾಡುವುದು ನಮ್ಮೊಂದಿಗೆ ಅಲ್ಲ.. ಅವರೊಂದಿಗೆ.. ಅವರಲ್ಲವೇ.. ನಮ್ಮನ್ನು ಅರ್ಥ ಮಾಡಿಕೊಳ್ಳಬೇಕಾದವರು.. ಅವರಲ್ಲವೇ.. ತಮ್ಮೆತ್ತರಕ್ಕೆ ನಾವು ಹೋದಾಗ ಗೌರವಿಸಬೇಕಾದವರು.. ಹಾಗಿದ್ದಾಗ ಹೆಣ್ಣು ಮಕ್ಕಳೇ ಕುಂತು ಮಹಿಳಾ ಸ್ವಾತಂತ್ರ್ಯದ ಕುರಿತು ಮಾತನಾಡಿದರೆ ಏನು ಚೆನ್ನಾಗಿರುತ್ತದೆ ಎಂದು ಪ್ರಶ್ನಿಸಿದ ಅವರು, ಕೇವಲ ಮಾ.8 ಒಂದೇ ದಿನ ನಮ್ಮದಾಗಿ ಉಳಿದ 364 ದಿನಗಳು ಅವರಿಗಾಗಿ ಕಳೆಯುವಂತಾಗಬಾರದರು.
 
ನಮಗಾಗಿ 365 ದಿನಗಳು ಬೇಕು. ಅದಕ್ಕಾಗಿ ನಾವು ಚರ್ಚಿಸಬೇಕಿದೆ. ಆ ದಿನಗಳನ್ನು ಹೇಗೆ ಕಳೆಯಬೇಕು. ಎಂತಹ ಸಾಧನೆಗಳನ್ನು ಮಾಡಬೇಕು. ಅದಕ್ಕಾಗಿ ಏನು ತಯಾರಿಗಳನ್ನು ಮಾಡಿಕೊಳ್ಳಬೇಕು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ ಮಾತನಾಡಿ, ಮಹಿಳೆ ತನಗಾಗುತ್ತಿರುವ ಶೋಷಣೆ, ದೌರ್ಜನ್ಯ, ಅಸಮಾನತೆ ವಿರುದ್ಧ ಧನಿ ಎತ್ತಿ ತನಗೆ ಬೇಕಾದ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಮುನ್ನಡೆಯಬೇಕು. ಬಾಲ್ಯವಿವಾಹ, ಅತ್ಯಾಚಾರ, ವರದಕ್ಷಿಣೆ, ಲೈಂಗಿಕ ಕಿರುಕುಳ ವಿರುದ್ಧ ನಮ್ಮ ಹೋರಾಟ ನಡೆಯಬೇಕು ಎಂದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, ಇಂದಿನ ಮಹಿಳೆಯರು ಆರ್ಥಿಕ ಕ್ಷೇತ್ರದಲ್ಲಿ ಮತ್ತು ರಾಜಕೀಯ ಕ್ಷೇತ್ರಗಳತ್ತ ಮುನ್ನಡೆಯಬೇಕು. ಮಹಿಳಾ ಸಬಲೀಕರಣ ಎಂದರೆ ಕೇವಲ ಅಡುಗೆ ಮನೆಯಿಂದ ಉದ್ಯಮದತ್ತ ನೋಡುವುದಲ್ಲ.. ಬದಲಿಗೆ ಕೆ.ಲ್ಯಾಂಪನಂತಹ ದೊಡ್ಡ ಸಾಧನೆಗಳನ್ನು ಮಾಡಬೇಕು. ಮಹಿಳೆಯ ಆದರ ಮತ್ತು ಗೌರವ ಕುಟುಂಬದಿಂದಲೇ ಆರಂಭವಾಗಬೇಕು. ಗಂಡು-ಹೆಣ್ಣು ಎನ್ನುವ ಭೇದ ಹೋಗಬೇಕು ಎಂದರು.

ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಅಂಬಾರಾಯ ಕಡ್ಲಾ, ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ಮಹಾದೇವಿ, ಸೇವಾ ಸಂಗಮದ ಪುಷ್ಪಾವತಿ ಠಾಕೂರ, ಸ್ನೇಹಾ ಸಂಸ್ಥೆಯ ಅಧ್ಯಕ್ಷೆ ಮನೀಷಾ ಚವ್ಹಾಣ, ಸುಗ್ರಾಮ ಸಂಘಟನೆಯ ಪರವೀನಾ ಬೇಗಂ, ಜೀವನ ಜ್ಯೋತಿ ಅಧ್ಯಕ್ಷೆ ಕೆರೆಮ್ಮಾ ನಾಟೀಕಾರ, ದೇವದಾಸಿ ಸಂಘದ ಹುಲೆಗೆಮ್ಮಾ ಇದ್ದರು.

ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು. ಶ್ರೀಕಾಂತ ಕುಲಕರ್ಣಿ ಸ್ವಾಗತಿಸಿದರು. ಶಿವಲೀಲಾ ಕಾರ್ಯಕ್ರಮ ನಿರೂಪಿಸಿದರು. ಭರತೇಶ ಶೀಲವಂತ ವಂದಿಸಿದರು. 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.