CONNECT WITH US  

ಗೀತೆಯಲ್ಲಿದೆ ಸಕಲ ಸಮಸ್ಯೆಗೆ ಪರಿಹಾರ

ಕಲಬುರಗಿ: ದ್ವಾಪರ ಯುಗದಲ್ಲಿ ಪಾಂಡವ ಮತ್ತು ಕೌರವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಬೋಧಿಸಿದ ಗೀತೆಯಲ್ಲಿ ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಟಗಿ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಡಾ| ಎಸ್‌. ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಅವತಾರ ಪುರುಷ ಹಾಗೂ ಗೀತಾ ಬೋಧಕ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಮನಸ್ಸು ಕುರುಕ್ಷೇತ್ರವಿದ್ದಂತೆ. ಮನಸ್ಸಿನಲ್ಲಿ ಯಾವಾಗಲೂ ಯುದ್ಧ ನಡೆದಿರುತ್ತದೆ. ಅದನ್ನು ಹಿಡಿತದಲ್ಲಿರಿಸಿ ಸತ್ಕಾರ್ಯ ಮಾಡುವಲ್ಲಿ ತೊಡಗಬೇಕು. ಮನಸ್ಸಿನ ಹೊಯ್ದಾಟದಲ್ಲಿ ಒಳ್ಳೆಯದನ್ನು- ಕೆಟ್ಟದ್ದನ್ನು ಅರ್ಥೈಸಿಕೊಂಡು ಯಾರಿಗೂ ಕೆಡಕನ್ನು ಮಾಡದೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಲು ಗೀತಾ ಸಾರವು ಸಹಕಾರಿಯಾಗಿದೆ ಎಂದರು. ಗಾಂಧೀಜಿ ಅವರು ಶ್ರೀಕೃಷ್ಣನ ಗೀತಾ ಸಾರದಿಂದ ಪ್ರಭಾವಿತರಾಗಿ ಅಹಿಂಸಾ ಮಾರ್ಗ ತುಳಿದು ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿಯಶಸ್ವಿಯಾದರು. ಗೀತಾ ಸಾರವು ಗಾಂಧೀಜಿಗೆ ಧೈರ್ಯ ತುಂಬುವ ನಿಧಿ ಯಾಗಿತ್ತು
ಎಂದು ಹೇಳಿದರು. ಜಿಲ್ಲಾ ಯಾದವ ಸಂಘದ ಅಧ್ಯಕ್ಷ ರವೀಂದ್ರ ಉದನೂರ, ಗಣ್ಯರಾದ ಆನಂದ ಶೀಲ,
ಕಲ್ಲಪ್ಪ ಯಾದವ, ರವೀಂದ್ರನಾಥ ಚವ್ಹಾಣ, ಆರ್‌.ಆರ್‌. ಯಾದವ, ವಾಸುದೇವ ಮುಡಬೋಳ, ಶರಣಬಸಪ್ಪ ಕುಲಕರ್ಣಿ, ಶಂಕರ ಕಟ್ಟಿಮನಿ, ವೆಂಕಟೇಶ ಕೊಂಡ, ಸುಭಾಶ ರಾಜಂ, ಶ್ರೀಮಂತ ಅಡ್ವೊಕೇಟ್‌, ಕನ್ನಡ ಮತ್ತು ಸಂಸ್ಜೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಶ್ರೀಕೃಷ್ಣನ ಭಾವಚಿತ್ರದ ಭವ್ಯ ಮೆರವಣಿಗೆ ವಿವಿಧ ಜನಪದ ಕಲಾ ತಂಡಗಳ ಮೂಲಕ ನಗರದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಿಂದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದ ವರೆಗೆ ನಡೆಯಿತು. 


Trending videos

Back to Top