CONNECT WITH US  

ನೆರೆ ದುಸ್ಸಾಹಸ:ಹಾವೇರಿಯಲ್ಲಿ ಇಬ್ಬರು,ಮೈಸೂರಿನಲ್ಲಿ ಓರ್ವ ನೀರುಪಾಲು

ಹಾವೇರಿ: ತಾಲೂಕಿನ ನಾಗನೂರು ಗ್ರಾಮದಲ್ಲಿ ಹರಿಯುವ ವರದಾ ನದಿಗೆ ಅಡ್ಡಲಾಗಿರುವ ಸೇತುವೆಯಲ್ಲಿ  ಲಾರಿಯೊಂದು ಕೊಚ್ಚಿ ಹೋಗಿ ಇಬ್ಬರು ನೀರಪಾಲಾಗಿರುವ ಅವಘಡ ಗುರುವಾರ ರಾತ್ರಿ ನಡೆದಿದೆ. ಲಾರಿಯಲ್ಲಿದ್ದ ಓರ್ವ ದಡ ಸೇರಿ ಪಾರಾಗಿದ್ದಾನೆ. 

 ಮೇಲಿಂದ ನೀರು ಹರಿಯುತ್ತಿದ್ದರೂ ಸೇತುವೆ ಮೇಲೆ ಲಾರಿ ಚಲಾಯಿಸಿದ್ದು ಈ ವೇಳೆ  ಚಾಲಕ ಲಕ್ಷ್ಮಣ ದೊಡ್ಡ ತಳವಾರ (25) ಮತ್ತು ಕ್ಲೀನರ್‌ ಬಸವರಾಜ್‌ ಸೋಮಣ್ಣ ವರ(29) ನೀರುಪಾಲಾಗಿದ್ದಾರೆ. ಇನ್ನೋರ್ವ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾನೆ. 

ಇಬ್ಬರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. 

ಮೈಸೂರು ಈಜಲಿಳಿದ ಓರ್ವ ನಾಪತ್ತೆ

 ಎಚ್‌.ಡಿ.ಕೋಟೆಯ ಮಾದಾಪುರ ಸೇತುವೆ ಬಳಿ ಈಜಲೆಂದು ಕಪಿಲಾ ನದಿಯ ನೆರೆಗೆ ಧುಮುಕಿದ ಮೂವರು ಯುವಕರ ಪೈಕಿ ಓರ್ವ ಕೊಚ್ಚಿ ಹೋಗಿದ್ದಾನೆ. 

24 ವರ್ಷದ ಉಮೇಶ್‌ ಎನ್ನುವವ ಕೊಚ್ಚಿ ಹೋಗಿದ್ದು, ಜೊತೆಯಲ್ಲಿದ್ದ ಸ್ನೇಹಿತರಾದ ಚಿಕ್ಕನಾಯ್ಕ , ಸುರೇಶ್‌ ಪಾರಾಗಿದ್ದಾರೆ. 

ಎಚ್‌.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನೀರು ಪಾಲಾಗಿರುವ ಉಮೇಶ್‌ಗಾಗಿ ಶೋಧ ನಡೆಸಲಾಗುತ್ತಿದೆ. 


Trending videos

Back to Top