ಹದಗೆಟ್ಟ ಕಂಡ್ಲೂರು-ಅಂಪಾರು ರಾ.ಹೆ.

Team Udayavani, Aug 30, 2018, 6:00 AM IST

2908kdpp1a.jpg

ಕಂಡ್ಲೂರು: ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಕಂಡ್ಲೂರಿನಿಂದ ಅಂಪಾರಿಗೆ ಹೋಗುವ ರಸ್ತೆಯ ಅಲ್ಲಲ್ಲಿ ಹೊಂಡ -ಗುಂಡಿಗಳಿಂದಾಗಿ ವಾಹನ ಸವಾರರು ನಿತ್ಯ ಸರ್ಕಸ್‌ ಮಾಡಿ ಸಂಚರಿಸುವ ಪರಿಸ್ಥಿತಿ ಬಂದೊದಗಿದೆ. ಸುಮಾರು 5 ಕಿ.ಮೀ. ದೂರದ ರಸ್ತೆಯುದ್ದಕ್ಕೂ ಅನೇಕ ಕಡೆಗಳಲ್ಲಿ ರಸ್ತೆ ಹದಗೆಟ್ಟಿದೆ.

ರಾಜ್ಯ ಹೆದ್ದಾರಿಯ ಕಂಡ್ಲೂರಿನಿಂದ ಆರಂಭಗೊಂಡು ದೂಪದಕಟ್ಟೆ, ಮುಳ್ಳುಗುಡ್ಡೆ, ನೆಲ್ಲಿಕಟ್ಟೆ, ಅಂಪಾರುವರೆಗೆ ಅಲ್ಲಲ್ಲಿ ಹೊಂಡ- ಗುಂಡಿಗಳಿಂದಾಗಿ ರಸ್ತೆಯ ಡಾಮರೇ ಮಾಯವಾದಂತಿದೆ.  

ಅಪಘಾತ ವಲಯ
ಹದಗೆಟ್ಟ ಈ ರಸ್ತೆಯಲ್ಲಿ ತೆರಳುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಮಳೆಗಾಲಕ್ಕೆ ಮುನ್ನವೇ ರಸ್ತೆಯ ಅಲ್ಲಲ್ಲಿ ಹೊಂಡ- ಗುಂಡಿಗಳು ಕಾಣಿಸಿಕೊಂಡಿದ್ದರೂ, ಅದಕ್ಕೆ ತೇಪೆ ಹಾಕುವ ಕಾರ್ಯ ಮಾತ್ರ ಆಗಿರಲಿಲ್ಲ. ಈಗ ಈ ರಸ್ತೆಯಲ್ಲಿ ಮತ್ತಷ್ಟು ದೊಡ್ಡ – ದೊಡ್ಡ ಹೊಂಡಗಳಿದ್ದು, ಈ ಪ್ರದೇಶವೀಗ ಅಪಘಾತ ವಲಯವಾಗಿ ಮಾರ್ಪಾಡಾಗಿದೆ. 

ಸಾವಿರಕ್ಕೂ ಹೆಚ್ಚು ವಾಹನ ಸಂಚಾರ
ಕುಂದಾಪುರದಿಂದ ಬಾಳೇಬರೇ ಘಾಟಿ ಮೂಲಕವಾಗಿ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ – 52 ಇದಾಗಿದೆ. ಕುಂದಾಪುರದಿಂದ ಬಸ್ರೂರು, ಕಂಡ್ಲೂರು, ಅಂಪಾರು, ಹೊಸಂಗಡಿ, ನಗರವಾಗಿ ತೀರ್ಥಹಳ್ಳಿಗೆ ತೆರಳಲು ಈ ರಾಜ್ಯ ಹೆದ್ದಾರಿಯೇ ರಹದಾರಿಯಾಗಿದೆ. ನಿತ್ಯ ಸಾವಿರಕ್ಕೂ ಹೆಚ್ಚು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ದಿನಂಪ್ರತಿ ನೂರಾರು ಬಸ್‌ಗಳು, ಶಾಲಾ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. 

ಘನ ವಾಹನದಿಂದ ಸಂಚಕಾರ
ಇನ್ನೆರಡು ದಿನ ಮಳೆ ಬಂದರೆ ಈ ರಸ್ತೆ ಸಂಪೂರ್ಣ ಹಾಳಾಗುತ್ತದೆ. ಕುಂದಾಪುರದಿಂದ ಬಸ್ರೂರು, ಬಳ್ಕೂರುವರೆಗೆ ರಸ್ತೆ ಚೆನ್ನಾಗಿದ್ದರೂ, ಕಂಡ್ಲೂರಿನಿಂದ ಈಚೇಗೆ ಕೆಟ್ಟು ಹೋಗಿದೆ. ಸಂಚಾರವೇ ದುಸ್ತರವಾಗಿದೆ. ದೂಪದಕಟ್ಟೆ ಬಳಿಯಂತೂ ಪ್ರತೀ ವರ್ಷ ಹದಗೆಡುತ್ತದೆ. ಘನ ವಾಹನಗಳ ಸಂಚಾರದಿಂದ ಈ ರಸ್ತೆ ಮತ್ತಷ್ಟು ಹಾಳಾಗಿದೆ. 
– ರಾಜು ದೇವಾಡಿಗ, ಹಳ್ನಾಡು

ಮಳೆಗಾಲ ಮುಗಿದಾಕ್ಷಣ ಡಾಮರು ಕಾಮಗಾರಿ
ಕಳೆದ ವರ್ಷ ಸಿಆರ್‌ಎಫ್‌ ಅನುದಾನದಡಿ 10 ಕೋ.ರೂ. ಮಂಜೂರಾಗಿದ್ದು, ಇದರ ಕಾಮಗಾರಿ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ವಿಸ್ತರಣೆ, ಡಾಮರೀಕರಣ ಆಗಿದೆ. ಮಳೆಗಾಲ ಮುಗಿದ ತತ್‌ಕ್ಷಣ ಕಂಡ್ಲೂರು, ಅಂಪಾರು ಭಾಗದಲ್ಲಿಯೂ ಡಾಮರೀಕರಣ ಆಗಲಿದೆ. 
 – ರಾಘವೇಂದ್ರ ನಾಯ್ಕ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ (ಪ್ರಭಾರ),  ಕುಂದಾಪುರ ಉಪ ವಿಭಾಗ

ಟಾಪ್ ನ್ಯೂಸ್

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

car-parkala

Road Mishap ಬೈಕ್‌ ಅಪಘಾತ: ಸವಾರ ಸಾವು

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

car-parkala

Road Mishap ಬೈಕ್‌ ಅಪಘಾತ: ಸವಾರ ಸಾವು

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Kundapura ವಿದ್ಯಾರ್ಥಿ ಶವ ಬೀಚ್‌ನಲ್ಲಿ ಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.