CONNECT WITH US  

ಜಪ್ಪುವಿನಲ್ಲಿ ಒಳಚರಂಡಿ ಸಮಸ್ಯೆ:ದೂರು

ಮಹಾನಗರ: ಜಪ್ಪು-ಬಪ್ಪಾಲ್‌-ಕುಡ್ಪಾಡಿ ಪ್ರದೇಶದ ಒಳಚರಂಡಿಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಹಾನಗರ ಪಾಲಿಕೆಯು ಈ ಬಗ್ಗೆ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು 59-ಜಪ್ಪು ವಾರ್ಡ್‌ ಬಿಜೆಪಿ ಅಧ್ಯಕ್ಷ ಭರತ್‌ ಕುಮಾರ್‌ ಎಸ್‌. ಅವರು ಪಾಲಿಕೆಯ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಒಳಚರಂಡಿಯ ತ್ಯಾಜ್ಯ ನೀರಿನ ಹರಿವಿಗೆ ವೈಜ್ಞಾನಿಕವಾದ ವ್ಯವಸ್ಥೆಯನ್ನು ಮಾಡದಿರುವುದರಿಂದ ತೆರೆದ ಚರಂಡಿಯಲ್ಲಿಯೇ ತ್ಯಾಜ್ಯದ ನೀರು ನದಿಯಂತೆ ಹರಿದು ಸುತ್ತಮುತ್ತಲ ಪ್ರದೇಶದಲ್ಲಿ ದುರ್ನಾತ ಬೀರಿ, ವಾತಾವರಣ ಕಲುಷಿತಗೊಂಡು ಬಹುತೇಕ ಬಾವಿಗಳ ನೀರು ಬಳಸದಂತಾಗಿದೆ. ಮಲೇರಿಯಾ, ಡೆಂಗ್ಯೂ ಮುಂತಾದ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸ್ಥಳೀಯ ಪಾಲಿಕೆ ಸದಸ್ಯರ ಗಮನಕ್ಕೂ ಈ ವಿಚಾರವನ್ನು ತರಲಾಗಿದ್ದರೂ ಈ ವರೆಗೆ ಸೂಕ್ತ ಕ್ರಮಕೈಗೊಂಡಿಲ್ಲ. ಈ ಒಳಚರಂಡಿಯ ಕಳಪೆ ಕಾಮಗಾರಿಯ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Trending videos

Back to Top