ಮಂಗಳೂರಿನಿಂದ ಶೀಘ್ರ 6 ಮಾರ್ಗಗಳಲ್ಲಿ ಹೊಸ ವಿಮಾನ ಹಾರಾಟ

Team Udayavani, Dec 8, 2018, 10:45 AM IST

airport.jpg

ಮಂಗಳೂರು: ಕಣ್ಣೂರಿನಲ್ಲಿ ನಾಳೆಯಿಂದ ಹೊಸ ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ಕ್ಷಣಗಣನೆ ನಡೆಯುತ್ತಿರುವಾಗಲೇ ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಹೆಚ್ಚುವರಿ 6 ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟ ಪ್ರಾರಂಭಿಸಲು ಸಿದ್ಧತೆ ನಡೆದಿದೆ.

ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ದುಬಾೖ ಹಾಗೂ ಅಬುಧಾಬಿಗೆ ಸಂಚಾರ ನಡೆಸುತ್ತಿದ್ದ ಜೆಟ್‌ ಏರ್‌ಲೈನ್ಸ್‌ನ ಎರಡು ವಿಮಾನಗಳ ಹಾರಾಟವು ಡಿ.4ರಿಂದ ರದ್ದುಗೊಂಡಿದೆ. ಆದರೆ ಕಣ್ಣೂರು ವಿಮಾನ ನಿಲ್ದಾಣ ಕಾರ್ಯಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಹಜವಾಗಿಯೇ ಕರಾವಳಿಯ ಪ್ರಯಾಣಿಕರನ್ನು ಬೇಸರಗೊಳಿಸಿದೆ. ಆದರೆ ಇದರ ಬೆನ್ನಲ್ಲೇ ಇಂಡಿಗೋ ಏರ್‌ಲೈನ್ಸ್‌ ಮಂಗಳೂರಿನಿಂದ 2 ಹೊಸ ಮಾರ್ಗಗಳಲ್ಲಿ ಹಾರಾಟ ಪ್ರಾರಂಭಿಸಲು ಸಿದ್ಧವಾಗಿರುವುದು ಕೊಂಚ ಖುಷಿ ತಂದಿದೆ.
ಇಂಡಿಗೋ ಮಂಗಳೂರು- ತಿರುವನಂತಪುರ ಹಾಗೂ ಮಂಗಳೂರು-ಕೊಚ್ಚಿ ಮಾರ್ಗ ದಲ್ಲಿ ಡಿ. 10ರ ನಂತರ ಹಾರಾಟ ಪ್ರಾರಂಭಿಸುವ ಸಾಧ್ಯತೆ ಇದೆ.

ಆಶಾದಾಯಕ ವಿಷಯವೆಂದರೆ, ಮಂಗಳೂರು ಏರ್‌ಪೋರ್ಟ್‌ನಿಂದ ಹೆಚ್ಚುವರಿಯಾಗಿ ಆರು ಮಾರ್ಗಗಳಲ್ಲಿ ಹಾರಾಟ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಇಂಡಿಗೋ ಏರ್‌ಲೈನ್ಸ್‌ನ 2 ಹೊಸ ಮಾರ್ಗಗಳ ಸೇವೆ ಜತೆಗೆ ಏರ್‌ ಇಂಡಿಯಾ ಏರ್‌ಲೈನ್ಸ್‌ ಮಂಗಳೂರು-ದಿಲ್ಲಿ, ಮಂಗಳೂರು-ಪುಣೆ, ಮಂಗಳೂರು-ಗೋವಾ ಹಾಗೂ ಮಂಗಳೂರು-ಬೆಂಗಳೂರು ಮಧ್ಯೆ ವಿಮಾನಯಾನಕ್ಕೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಈ ಸಂಬಂಧ ಸಂಸದ ನಳಿನ್‌ ಈಗಾಗಲೇ ವಿಮಾನಯಾನ ಸಚಿವರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. 

ಕೆನರಾ ಚೇಂಬರ್‌ನಿಂದ ಸಚಿವರ ಭೇಟಿ
ಮಂಗಳೂರು ನಿಲ್ದಾಣದಲ್ಲಿ ಹೆಚ್ಚುವರಿ ವಿಮಾನಯಾನ ಸೇವೆ, ರನ್‌ವೇ ವಿಸ್ತರಣೆ ಸಹಿತ ಕೆಲವು ಮೂಲಸೌಕರ್ಯ, ಅತ್ಯಾಧುನಿಕ ತಾಂತ್ರಿಕ ಸೇವೆ ಒದಗಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕೂಡ ಹೇಳಿದೆ. ಕೆನರಾ ಚೇಂಬರ್‌ನ ನಿಯೋಗವು ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಕೆನರಾ ಚೇಂಬರ್‌ ಅಧ್ಯಕ್ಷ ಅಬ್ದುಲ್‌ ಅಮೀದ್‌, “ಕಣ್ಣೂರು ಏರ್‌ಪೋರ್ಟ್‌ ಉದ್ಘಾಟನಾ ಸಮಾರಂಭಕ್ಕೆ ಹೋಗುತ್ತಿದ್ದೇವೆ. ಈ ವೇಳೆ, ಸಚಿವ ಸುರೇಶ್‌ ಪ್ರಭು ಅವರನ್ನು ಭೇಟಿ ಮಾಡಿ ಮಂಗಳೂರು ವಿಮಾನ ನಿಲ್ದಾಣದ ಬೇಡಿಕೆಗಳನ್ನೂ ಮಂಡಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಏರ್‌ಪೋರ್ಟ್‌ಗೆ  ರೈಲು ಸಂಪರ್ಕ ರಸ್ತೆ: ನಳಿನ್‌
ಕೆಂಜಾರು ರೈಲು ನಿಲ್ದಾಣದಿಂದ ಮಳವೂರುವರೆಗಿನ 2 ಕಿ.ಮೀ. ದೂರಕ್ಕೆ ಹೊಸ ರಸ್ತೆ ನಿರ್ಮಿಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊಂಕಣ ಹಾಗೂ ಕಣ್ಣೂರು-ಕಾಸರಗೋಡು ಭಾಗದಿಂದ ರೈಲಿನಲ್ಲಿ ಬರುವವರಿಗೆ ನೇರ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ. “ಉದಯವಾಣಿ’ಯು ತನ್ನ ಅಭಿಯಾನದಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಪ್ರತಿಕ್ರಿಯಿಸಿರುವ ನಳಿನ್‌, “ಇದೊಂದು ಉತ್ತಮ ಸಲಹೆ. ಕಾರ್ಯರೂಪಕ್ಕೆ ತರಲು ಕಷ್ಟವಿಲ್ಲ. ಆದರೆ, ಎರಡು ಕಿ.ಮೀ. ರಸ್ತೆ ನಿರ್ಮಿಸಲು ಬೇಕಾದ ಭೂಮಿಯನ್ನು ರಾಜ್ಯ ಸರಕಾರ ಸ್ವಾಧೀನ ಮಾಡಿಕೊಡಬೇಕಿದೆ. ಆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಮಾತನಾಡುವೆ. ಹಾಗೆಯೇ ವಿಮಾನಯಾನ ಸಚಿವರೊಂದಿಗೂ ಚರ್ಚಿಸುವೆ’ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ,”ಮಂಗಳೂರು ಏರ್‌ಪೋರ್ಟ್‌ನಿಂದ ಏರ್‌ ಇಂಡಿಯಾ ಮತ್ತು ಇಂಡಿಗೋ ಏರ್‌ಲೈನ್‌ನಿಂದ ಆರು ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಬಹುತೇಕ ತಯಾರಿ ಮುಗಿದಿದೆ. ಏರ್‌ ಇಂಡಿಯಾ ಏಕ್ಸ್‌ಪ್ರೆಸ್‌ನ ಮಂಗಳೂರು-ಕುವೈಟ್‌ ವಿಮಾನದ ಹಾರಾಟ ಸಮಯ ಬದಲಿಸಬೇಕೆಂದು ಗಲ್ಫ್ ಕನ್ನಡಿಗರ ಬಹುದಿನಗಳ ಬೇಡಿಕೆ. ಈ ವಿಷಯವನ್ನು ಸಚಿವರ ಗಮನಕ್ಕೆ ತರಲಾಗುವುದು’ ಎಂದರು.

ಡಿ.11ಕ್ಕೆ ವಿಮಾನಯಾನ ಸಚಿವರು ಮಂಗಳೂರಿಗೆ
ಕೇಂದ್ರ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರು ಡಿ.11ಕ್ಕೆ ಮಂಗಳೂರಿಗೆ ಆಗಮಿಸುತ್ತಿದ್ದು, ಆ ವೇಳೆ, ನಮ್ಮ ಏರ್‌ಪೋರ್ಟ್‌ನಲ್ಲಿ ಹೊಸ ವಿಮಾನಯಾನ ಸೇವೆ ಪ್ರಾರಂಭಿಸುವ, ಪ್ರಯಾಣಿಕರ ಕೆಲವು ಕುಂದು-ಕೊರತೆ ಬಗ್ಗೆ ಚರ್ಚಿಸುವುದಾಗಿ ಮಂಗಳೂರು ವಿಮಾನ ನಿಲ್ದಾಣ ಸಲಹಾ ಸಮಿತಿ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ನಿರ್ಧರಿಸಿದ್ದಾರೆ. 

ಮಂಗಳೂರಿನಿಂದ ವಾರದಲ್ಲಿ ವಿದೇಶಕ್ಕೆ ಹಾರಾಡುವ ವಿಮಾನ ‌

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸ್ಪೈಸ್‌ ಜೆಟ್‌
ದುಬಾೖ 14 ದುಬಾೖ 07
ಬಹ್ರೈನ್‌-ಕುವೈಟ್‌ 03
ದಮಾಮ್‌ 03
ಮಸ್ಕತ್‌ 03
ಅಬುಧಾಬಿ 04
ದೋಹಾ 03
ಮಂಗಳೂರಿನಿಂದ ಪ್ರತಿದಿನ ದೇಶದೊಳಗೆ ಹಾರಾಟ
ಮುಂಬಯಿ ಬೆಂಗಳೂರು
ಏರ್‌ ಇಂಡಿಯಾ 01 ಸ್ಪೈಸ್‌ ಜೆಟ್‌ 03
ಇಂಡಿಗೊ  02 ಜೆಟ್‌ ಏರ್‌ವೇಸ್ 03
ಜೆಟ್‌ ಏರ್‌ವೇಸ್ 03 ಇಂಡಿಗೊ 03
ಹೈದರಾಬಾದ್‌ ಚೆನ್ನೈ
ಇಂಡಿಗೊ 02 ಇಂಡಿಗೊ 02
ದಿಲ್ಲಿ
ಜೆಟ್‌ ಏರ್‌ವೇಸ್ 01

  ಸುರೇಶ್‌ ಪುದುವೆಟ್ಟು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.