CONNECT WITH US  

ಫೋರ್ಬ್ಸ್ ಪಟ್ಟಿಯಲ್ಲಿ 58 ಭಾರತೀಯ ಕಂಪನಿಗಳು

ಮುಂಬೈ: ಅಮೆರಿಕದ ಖ್ಯಾತ ನಿಯತಕಾಲಿಕೆ "ಫೋರ್ಬ್ಸ್ ಮ್ಯಾಗಜೀನ್‌' ಬಿಡುಗಡೆ ಮಾಡಿದ ಜಗತ್ತಿನ ಪ್ರಸಿದ್ಧ ಕಂಪನಿ ಗಳ 15ನೇ "ಜಗತ್ತು 2000' ಪಟ್ಟಿಯಲ್ಲಿ 58 ಭಾರತೀಯ ಕಂಪನಿಗಳು ಸ್ಥಾನ ಪಡೆದಿವೆ. 2017ನೇ ಸಾಲಿನ ಪಟ್ಟಿ ಇದಾಗಿದ್ದು, ಕಳೆದ ಬಾರಿ 56 ಭಾರತೀಯ ಕಂಪನಿಗಳು ಸ್ಥಾನ ಪಡೆದಿದ್ದವು. ಜಗತ್ತಿನ ಅತಿ ದೊಡ್ಡ, ಪ್ರಬಲ ಕಂಪನಿ ಗಳನ್ನು ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಐಟಿ, ಬ್ಯಾಂಕಿಂಗ್‌ ಕಂಪನಿಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. 

ಭಾರತೀಯ ಕಂಪನಿಗಳ ಪೈಕಿ ಮುಖೇಶ್‌ ಅಂಬಾನಿ ಅವರ ರಿಲಯನ್ಸ್‌ ಸಮೂಹ 106ನೇ (ಕಳೆದ ವರ್ಷ 121ನೇ ಸ್ಥಾನ) ಸ್ಥಾನದೊಂದಿಗೆ ಮುಂಚೂಣಿಯಲ್ಲಿದೆ. ನಂತರದ ಸ್ಥಾನವನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ 244 ನೇ (149 ಕಳೆದ ವರ್ಷ) ಸ್ಥಾನ ಹೊಂದಿದೆ. ಮೂರನೇ ಸ್ಥಾನವನ್ನು ಒಎನ್‌ಜಿಸಿ 246ನೇ (220 ಕಳೆದ ವರ್ಷ) ಸ್ಥಾನ ಹೊಂದಿದೆ. ಉಳಿದಂತೆ ಭಾರತದ ಟಾಪ್‌ 20ರ ಪಟ್ಟಿಯಲ್ಲಿ ಎಚ್‌ಡಿಎಫ್ಸಿ, ಆಕ್ಸಿಸ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಇತ್ಯಾದಿಗಳು ಸ್ಥಾನ ಪಡೆದಿವೆ.

Trending videos

Back to Top