ಮರುಪಾವತಿ ಬೇಡವೆಂದರೆ ವಿವರ ನೀಡಬೇಕಿಲ್ಲ
Team Udayavani, Jul 25, 2017, 6:15 AM IST
ನವದೆಹಲಿ: ಅನಿವಾಸಿ ಭಾರತೀಯರ ಬ್ಯಾಂಕ್ ಖಾತೆಗಳು ದೇಶದ ಹೊರಗಡೆ ಇದ್ದು, ಅವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಮರುಪಾವತಿ ಪಡೆಯುವುದಿಲ್ಲ ಎಂದಾದರೆ, ಅವರು ಬ್ಯಾಂಕ್ ಖಾತೆಗಳ ವಿವರ ನೀಡಬೇಕಿಲ್ಲ. ಹೀಗೆಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ಸುಶೀಲ್ ಚಂದ್ರ ಹೇಳಿದ್ದಾರೆ. ಆದರೆ ಅನಿವಾಸಿ ಭಾರತೀಯರು ಮರುಪಾವತಿ ಬಯಸುವುದಾದರೆ ಮಾತ್ರ ಅವರು ತಮ್ಮ ಬ್ಯಾಂಕ್ ಖಾತೆ ವಿವರ ನೀಡಬೇಕು ಎಂದು ಅವರು ಹೇಳಿದ್ದಾರೆ.