CONNECT WITH US  

7ರಂದು ಚಂದ್ರಗ್ರಹಣ: ದೇಶದ ಎಲ್ಲೆಡೆ ಗೋಚರ

ಕೋಲ್ಕತಾ: ಆ.7ರ ರಾತ್ರಿ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಭಾರತಾದ್ಯಂತ ಇದು ಗೋಚರಿಸಲಿದೆ ಎಂದು ಎಂ. ಪಿ. ಬಿರ್ಲಾ ತಾರಾಲಯದ ಸಂಶೋಧನೆ ಮತ್ತು ಶಿಕ್ಷಣದ ನಿರ್ದೇಶಕರಾದ ದೇವಿಪ್ರಸಾದ್‌ ದುರಾಯ್‌ ತಿಳಿಸಿದ್ದಾರೆ. ರಾತ್ರಿ 10.52ಕ್ಕೆ ಚಂದ್ರಗ್ರಹಣ ಆರಂಭವಾಗಿ ರಾತ್ರಿ 12.48ಕ್ಕೆ ಕೊನೆಗೊಳ್ಳಲಿದೆ. ಈ ಖಗೋಳ ವಿಸ್ಮಯವು ಸಂಪೂರ್ಣ ಏಷ್ಯಾ, ಆಸ್ಟ್ರೇಲಿಯಾ, ಯುರೋಪ್‌ ಮತ್ತು ಆಫ್ರಿಕಾದ ಬಹುತೇಕ ಭಾಗಗಳಲ್ಲಿ ಗೋಚರಿಸಲಿದೆ. ಈ ಗ್ರಹಣವನ್ನು ಬರಿಗಣ್ಣಿನಿಂದಲೇ ನೋಡಬಹುದು. ಯಾವುದೇ ಸುರಕ್ಷತಾ ಮಾಧ್ಯಮಗಳ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
 


Trending videos

Back to Top