ಎನ್ಡಿಎ ಗೆ ಸೇರಲು ನಿತೀಶ್ಗೆ ಅಮಿತ್ ಶಾ ಅಹ್ವಾನ
Team Udayavani, Aug 12, 2017, 12:15 PM IST
ಹೊಸದಿಲ್ಲಿ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷರಾಗಿರುವ ನಿತೀಶ್ ಕುಮಾರ್ ಅವರನ್ನು ಎನ್ಡಿಎ ಸೇರುವಂತೆ ಆಹ್ವಾನಿಸಿದ್ದಾರೆ.
ಬಿಹಾರದಲ್ಲಿನ ಮಹಾಘಟಬಂಧನದಿಂದ ಹೊರ ಬಂದು ಬಿಜೆಪಿ ಬೆಂಬಲದಲ್ಲಿ ಹೊಸ ಮೈತ್ರಿಕೂಟದ ಸರಕಾರ ರಚಿಸಿರುವ ನಿತೀಶ್ ಕುಮಾರ್, ಈಗಿನ್ನು ಎನ್ಡಿಎ ಸೇರುವ ಸಾಧ್ಯತೆ ದಟ್ಟವಾಗಿದೆ.
ನಿತೀಶ್ ನೇತೃತ್ವದ ಜೆಡಿಯು ಪಟ್ನಾದಲ್ಲಿ ಇದೇ ಆಗಸ್ಟ್ 19ರಂದು ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಎನ್ಡಿಎ ಸೇರುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಿದೆ ಎಂದು ಮೂಲಗಳು ಹೇಳಿವೆ. ಆ ಬಳಿಕ ನಿತೀಶ್ ನೇತೃತ್ವದ ಜೆಡಿಯು ಕೇಂದ್ರದಲ್ಲಿನ ನರೇಂದ್ರ ಮೋದಿ ಸಚಿವ ಸಂಪುಟವನ್ನು ಸೇರಲಿದೆ ಎನ್ನಲಾಗಿದೆ.