CONNECT WITH US  

3ನೇ ಮಗು ಹೊಂದಿದ್ದಕ್ಕೆ ಕೆಲಸ ಕಳಕೊಂಡ ಜಡ್ಜ್ ಗಳು

ಭೋಪಾಲ್‌: ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದ ತಪ್ಪಿಗಾಗಿ ಇಬ್ಬರು ಟ್ರೈನಿ ಜಡ್ಜ್ ಗಳು ಕೆಲಸ ಕಳೆದುಕೊಂಡಿ ದ್ದಾರೆ. ಈ ಅಚ್ಚರಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

ಕಳೆದ ವರ್ಷವಷ್ಟೇ ಸೇವೆಗೆ ಸೇರ್ಪಡೆಯಾಗಿ ತರಬೇತಿ ಪಡೆಯುತ್ತಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ(ಟ್ರೈನಿ) ಮನೋಜ್‌ ಕುಮಾರ್‌ ಮತ್ತು ಅಶ್ರಫ್ ಅಲಿ ಅವರೇ ಕೆಲಸ ಕಳೆದುಕೊಂಡವರು. ಸರಕಾರದ ನೀತಿಗೆ ವಿರುದ್ಧವಾಗಿ ಹೆಚ್ಚು ಮಕ್ಕಳನ್ನು ಪಡೆದಿರುವ ಕಾರಣ ಇವರ ನೇಮಕವನ್ನು ರದ್ದುಗೊಳಿಸಲಾಗಿದೆ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಹೇಳಿದ್ದಾರೆ. ಮಧ್ಯಪ್ರದೇಶ ನಾಗರಿಕ ಸೇವೆಗಳ ನಿಯಮಗಳು 1961ರ ಪ್ರಕಾರ, 2001 ಜನವರಿ ಬಳಿಕ ಮೂರನೇ ಮಗುವಿಗೆ ಜನ್ಮ ನೀಡಿದ್ದರೆ ಅಂತಹ ಸರಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.


Trending videos

Back to Top