ಸಂಚಾರ ಪೊಲೀಸರು ಕೆಮರಾ ಧರಿಸಲಿ
Team Udayavani, Dec 23, 2017, 7:53 AM IST
ಹೊಸದಿಲ್ಲಿ: ಟ್ರಾಫಿಕ್ ಪೊಲೀಸರು, ಆರ್ಟಿಒ ಅಧಿಕಾರಿಗಳಿಗೆ ವಾಹನ ಸಂಚಾರ ನಿಯಂತ್ರಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ದೇಹದ ಮೇಲೆ ಕೆಮರಾಗಳನ್ನು ಧರಿಸಲು ಅನುವು ಮಾಡಿಕೊಡಬೇಕು. ಅದನ್ನು ಮೋಟಾರು ವಾಹನ ಕಾಯ್ದೆಗೆ ಸೇರಿಸಬೇಕು ಎಂದು ರಾಜ್ಯಸಭೆಯ 24 ಸದಸ್ಯರ ಆಯ್ಕೆ ಸಮಿತಿ ಸೂಚಿಸಿದೆ. ಹಲವು ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಈ ವ್ಯವಸ್ಥೆಗೆ ಕಾನೂನು ಮಾನ್ಯತೆ ಸಿಗಲಿದೆ.
ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳನ್ನು ಜಾರಿಗೊಳಿಸುವ ಪ್ರತಿ ಟ್ರಾಫಿಕ್ ಪೊಲೀಸ್, ಆರ್ಟಿಒ ದೇಹದ ಮೇಲೆ ಕೆಮರಾಗಳನ್ನು ಧರಿಸಿರಬೇಕು ಅಥವಾ ಡಿಜಿಟಲ್ ರೂಪದಲ್ಲಿ ಅಪರಾಧವನ್ನು ದಾಖಲಿಸಿ ರಬೇಕು. ಇದರಿಂದ ಪೊಲೀಸ್ ವಲಯದಲ್ಲಿ ಭ್ರಷ್ಟಾಚಾರ ನಿಯಂತ್ರಣ ವಾಗುತ್ತದೆ ಎಂದು ಸಮಿತಿ ಸೂಚಿಸಿದೆ. ಆರ್ಟಿಒ ಮತ್ತು ಸಾರಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಮನಗಂಡಿರುವ ವಿನಯ್ ಪಿ ಸಹಸ್ರಬುದ್ಧೆ ನೇತೃತ್ವದ ಸಮಿತಿ, ಡೀಲರ್ಗಳೇ ವಾಹನಗಳನ್ನು ನೋಂದಣಿ ಮಾಡುವುದಕ್ಕೆ ಶಿಫಾರಸು ಮಾಡಿದೆ.