CONNECT WITH US  

ಪಾಕ್‌ ಅಪ್ರಚೋದಿ ದಾಳಿ: ಭಾರತೀಯ ಸೇನಾ ಜವಾನ ಹುತಾತ್ಮ

ಜಮ್ಮು : ಕಾಶ್ಮೀರದ ರಾಜೋರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಪಡೆಗಳು ಇಂದು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಸೇನಾ ಜವಾನ ಮೃತಪಟ್ಟನೆಂದು ಸೇನೆ ತಿಳಿಸಿದೆ.

ಪಾಕಿಸ್ಥಾನದ ಈ ದಾಳಿಗೆ ಭಾರತೀಯ ಪಡೆಗಳು ಅತ್ಯಂತ ಬಲಿಷ್ಠ ಹಾಗೂ ಪರಿಣಾಮಕಾರಿ ಮರು ದಾಳಿಯ ಸಂಘಟಿಸಿಪಾಕಿಗೆ ಪ್ರಬಲ ಪ್ರತ್ಯುತ್ತರ ನೀಡಿರುವುದಾಗಿ ಸೇನಾ ವಕ್ತಾರ ತಿಳಿಸಿದ್ದಾರೆ. ಸುಂದರ್‌ಬನಿ ವಲಯದಲ್ಲಿ  ಭಾರತೀಯ ಸೇನಾ ಹೊರಠಾಣೆಗಳನ್ನು ಗುರಿ ಇರಿಸಿ ಪಾಕ್‌ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.

ಹುತಾತ್ಮರಾಗಿರುವ ಲ್ಯಾನ್ಸ್‌ ನಾಯಕ್‌ ಯೋಗೇಶ್‌ ಮುರಲೀಧರ್‌ ಭದಾನೆ (22) ಅವರು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಖಲಾಣೆ ಗ್ರಾಮದವರು. ಪಾಕ್‌ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇವರು ಅನಂತರ ಕೊನೆಯುಸಿರೆಳೆದರು. ಭದಾನೆ ಅವರು ಪತ್ನಿಯನ್ನು ಅಗಲಿದ್ದಾರೆ.

Back to Top