ಜು.1ರಿಂದ ಆಧಾರ್ಗೆ ಮುಖ ದೃಢೀಕರಣ
Team Udayavani, Mar 26, 2018, 9:15 AM IST
ಹೊಸದಿಲ್ಲಿ: ಆಧಾರ್ ಗೆ ಬೆರಳಚ್ಚು, ಕಣ್ಣಿನ ಸ್ಕ್ಯಾನ್ ಜತೆಗೆ ಮುಖ ದೃಢೀಕರಣದ ವ್ಯವಸ್ಥೆಯನ್ನು ಜುಲೈ 1ರಿಂದಲೇ ಸೇರಿಸಲಾಗುವುದು ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ. ವಯೋಸಹಜ ಸಮಸ್ಯೆ ಇರುವವರು, ಬೆರಳಚ್ಚು ಸ್ಪಷ್ಟವಾಗಿ ಮೂಡದೇ ಇರುವವರಿಗೆ ನೆರವಾಗಲೆಂದು ಮುಖ ದೃಢೀಕರಣ ಫೀಚರ್ ಜಾರಿಗೆ ತರುವುದಾಗಿ ಜನವರಿಯಲ್ಲೇ ಪ್ರಾಧಿಕಾರ ಘೋಷಿಸಿತ್ತು.