ಮುಂಬಯಿ: ರೈಲು ಬಡಿದು ಮಹಿಳೆ ಸಾವು; ಆಕೆಯ ಇಬ್ಬರು ಮಕ್ಕಳು ಆಸ್ಪತ್ರೆಗೆ
Team Udayavani, Jul 21, 2018, 5:24 PM IST
ಮುಂಬಯಿ : ನಗರ ಹೊರವಲಯದ ಬಾಂದ್ರಾ ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಮೇಲೆ ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ರೈಲಿಗಾಗಿ ಕಾದು ನಿಂತಿದ್ದ ಮಹಿಳೆಯೊಬ್ಬಳಿಗೆ ರೈಲು ಢಿಕ್ಕಿಯಾಗಿ ಆಕೆ ಮೃತಪಟ್ಟು ಆಕೆಯ ಪುಟಾಣಿ ಮಕ್ಕಳಿಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.
ಮೃತ ಮಹಿಳೆಯನ್ನು ಬೊರಿವಿಲಿ ನಿವಾಸಿ ಪ್ರೀತಿ ಗುಪ್ತಾ ಎಂದು ಗುರುತಿಸಲಾಗಿದೆ. ಆಕೆಯ ಇಬ್ಬರು ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಶುಕ್ರವಾರ ರಾತ್ರಿ 8.30ರ ಹೊತ್ತಿಗೆ ಈ ಅವಘಡ ನಡೆದಿತ್ತು. ಮೃತ ಮಹಿಳೆಯ 4 ವರ್ಷ ಪ್ರಾಯದ ಹಿರಿಯ ಮಗು ಪೊಲೀಸರಲ್ಲಿ ಬೊರಿವಿಲಿ ಎಂದು ಪದೇ ಪದೇ ಉಚ್ಚರಿಸುತ್ತಿದ್ದ ಕಾರಣ ಪೊಲೀಸರು ಅಲ್ಲಿಗೆ ತೆರಳಿ ಮಾಹಿತಿ ಸಂಗ್ರಹಿಸಿ ಮಹಿಳೆಯ ಪತಿಯನ್ನು ಸಂಪರ್ಕಿಸಿದರು.