ದಿಲೀಪ್ಕುಮಾರ್ ಆರೋಗ್ಯದಲ್ಲಿ ಸುಧಾರಣೆ
Team Udayavani, Sep 10, 2018, 1:55 AM IST
ಮುಂಬಯಿ: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ದಿಲೀಪ್ ಕುಮಾರ್ (95) ಆರೋಗ್ಯ ಸುಧಾರಿಸುತ್ತಿದೆ. ಅವರು ಈಗಲೂ ಐಸಿಯುನಲ್ಲಿಯೇ ಇದ್ದಾರೆ. ಆದರೂ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಲೀಲಾವತಿ ಆಸ್ಪತ್ರೆ ಉಪಾಧ್ಯಕ್ಷ ಅಜಯ ಕುಮಾರ್ ಪಾಂಡೆ ಹೇಳಿದ್ದಾರೆ.