CONNECT WITH US  

ನ್ಯಾಶನಲ್‌ ಹೆರಾಲ್ಡ್‌: ಸೋನಿಯಾಗೆ ಹಿನ್ನಡೆ

ಹೊಸದಿಲ್ಲಿ: ನ್ಯಾಶ‌ನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತೀವ್ರ ಹಿನ್ನಡೆಯಾಗಿದೆ. 2011-12ನೇ ಸಾಲಿನಲ್ಲಿ ಯಂಗ್‌ ಇಂಡಿಯಾ (ವೈಐ) ಸಂಸ್ಥೆ ಮೂಲಕ ಬಂದ ಆದಾಯದ ವಿವರವನ್ನು ಆ ವರ್ಷದ ರಿಟರ್ನ್ಸ್ ಸಲ್ಲಿಕೆಯಲ್ಲಿ ಉಲ್ಲೇಖೀಸದೇ ಇರುವ ಪ್ರಕರಣವನ್ನು ಪುನಃ ತನಿಖೆ ನಡೆಸಬಾರದು ಎಂದು ರಾಹುಲ್‌, ಸೋನಿಯಾ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

ಆ.16ರಂದು ಈ ಬಗ್ಗೆ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು. ಇವರಲ್ಲದೆ, ಕಾಂಗ್ರೆಸ್‌ ನಾಯಕ ಆಸ್ಕರ್‌ ಫ‌ರ್ನಾಂಡಿಸ್‌ ಸಲ್ಲಿಸಿದ್ದ ಅರ್ಜಿಯನ್ನೂ ಕೋರ್ಟ್‌ ವಜಾ ಮಾಡಿದೆ.

ದಿಲ್ಲಿ ಹೈಕೋರ್ಟ್‌ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ಕಾಂಗ್ರೆಸ್‌ನ ದ್ವಿಮುಖ ನೀತಿ ಬಯಲಾಗಿದೆ ಎಂದು ಟೀಕಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ ಕಾಂಗ್ರೆಸ್‌ ಅಕ್ರಮಕ್ಕೆ ಮೌನ ಸಾಕ್ಷಿಯಾಗಿದ್ದರು ಎಂದು ದೂರಿದ್ದಾರೆ.

Trending videos

Back to Top