ಸೇನೆ: ಉದ್ಯೋಗ ಕಡಿತ?
Team Udayavani, Sep 11, 2018, 10:53 AM IST
ಹೊಸದಿಲ್ಲಿ: ಮುಂದಿನ 4-5 ವರ್ಷಗಳ ಅವಧಿಯಲ್ಲಿ ಸೇನೆ 1.50 ಲಕ್ಷ ಉದ್ಯೋಗ ಕಡಿತ ಮಾಡುವ ಇರಾದೆ ಹೊಂದಿದೆ. ಈ ಬಗ್ಗೆ ಜೂ.21ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ಪ್ರಸ್ತಾವಿಸಲಾಗಿದೆ.
ಜತೆಗೆ ಕೆಲ ವಿಭಾಗಗಳನ್ನು ಮತ್ತೂಂದರಲ್ಲಿ ವಿಲೀನಗೊಳಿಸುವ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಲೆ.ಜ.ಜೆ.ಎಸ್.ಸಂಧು ನೇತೃತ್ವದ 11 ಸದಸ್ಯರ ತಂಡ ಈ ಬಗ್ಗೆ ಮಾಸಾಂತ್ಯಕ್ಕೆ ಭೂಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ಗೆ ಪ್ರಾಥಮಿಕ ವರದಿ ಸಲ್ಲಿಸಲಿದೆ.